ಅಯೋಧ್ಯೆ:
ಬಾಲ ಆಲಯಕ್ಕೆ ರಾಮಲಲ್ಲಾ ಸ್ಥಳಾಂತರ
ಅಯೋಧ್ಯಾ:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2020 ಮಾರ್ಚ್ 25ರ ಬುಧವಾರ ಅಯೋಧ್ಯೆಯ ರಾಮ
ಜನ್ಮಭೂಮಿಯಲ್ಲಿ ನಡೆದ ಸಮಾರಂಭದಲ್ಲಿ ರಾಮಲಲ್ಲಾ ವಿಗ್ರಹವನ್ನು ತಾತ್ಕಾಲಿಕ
ದೇವಾಲಯದಿಂದ ಆವರಣದಲ್ಲಿ ನಿರ್ಮಿಸಲಾದ ‘ಬಾಲ ಆಲಯ’ಕ್ಕೆ 27 ವರ್ಷಗಳ
ಬಳಿಕ ಸ್ಥಳಾಂತರಿಸಿದರು.
ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಮೊದಲ ದಿನವಾದ ಬುಧವಾರ ಮುಂಜಾನೆ ೪.೩೦ ರ ಸುಮಾರಿಗೆ ಸಮಾರಂಭವು ನಡೆಯಿತು.
ರಾಮ
ಜನ್ಮಭೂಮಿಯ ಆರಾಧ್ಯ
ದೇವತೆಯಾಗಿರುವ ರಾಮ ಲಲ್ಲಾನನ್ನು ೨೭ ವರ್ಷಗಳ ನಂತರ
(ಡಿಸೆಂಬರ್ ೬, ೧೯೯೨) ತಾತ್ಕಾಲಿಕ ದೇವಾಲಯದ ಗರ್ಭಗುಡಿಯಿಂದ
ಸ್ಥಳಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್
ಸದಸ್ಯರು
ಉಪಸ್ಥಿತರಿದ್ದರು.
ನವದೆಹಲಿ,
ಅಯೋಧ್ಯೆ ಮತ್ತು ವಾರಣಾಸಿಯ ಹಲವಾರು ಅರ್ಚಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುರೋಹಿತರು
ನಿರ್ಧರಿಸಿದ್ದ ಶುಭ ಸಮಯದಲ್ಲಿ ಆರಾಧ್ಯದೇವತೆ ರಾಮಲಲ್ಲಾನನ್ನು ತಾತ್ಕಾಲಿಕ
ದೇವಾಲಯದಿಂದ ಪಲ್ಲಕ್ಕಿಯಲ್ಲಿ ಸ್ಥಳಾಂತರಿಸಲಾಯಿತು. ಈಗಿರುವ ತಾತ್ಕಾಲಿಕ ದೇವಾಲಯದಿಂದ ಕೆಲವೇ ಮೀಟರ್ ದೂರದಲ್ಲಿರುವ ಹೊಸ ಸ್ಥಳಕ್ಕೆ ಈ
ಪಲ್ಲಕ್ಕಿಯನ್ನು ಮುಖ್ಯಮಂತ್ರಿ ಸೇರಿದಂತೆ ನಾಲ್ಕು ಮಂದಿ ಹೊತ್ತುಕೊಂಡು ನಡೆದರು.
ರಾಮಲಲ್ಲಾ
ವಿಗ್ರಹದ ಸ್ಥಳಾಂತರವು ರಾಮ ಜನ್ಮಭೂಮಿಯಲ್ಲಿ ಭವ್ಯ ದೇವಾಲಯವನ್ನು ನಿರ್ಮಿಸುವ ಯೋಜನೆಯ ಭಾಗವಾಗಿದೆ.
ರಾಮ
ಲಲ್ಲಾ ಸ್ಥಳಾಂತರಗೊಳ್ಳುವ ಮುನ್ನ 2020 ಮಾರ್ಚ್ 23ರ ಸೋಮವಾರ ಬೆಳಿಗ್ಗೆ ರಾಮ ಜನ್ಮಭೂಮಿಯಲ್ಲಿ ವೇದೋಕ್ತ ವಿಧಿವಿಧಾನಗಳು ಪ್ರಾರಂಭವಾಗಿ ಮಂಗಳವಾರದವರೆಗೆ ಮುಂದುವರೆದವು.
ಆಂಧ್ರಪ್ರದೇಶ,
ನವದೆಹಲಿ, ಹರಿದ್ವಾರ, ಮಥುರಾ, ವಾರಣಾಸಿ ಮತ್ತು ಅಯೋಧ್ಯೆಯ ಅರ್ಚಕರು ವಿಧಿ
ವಿಧಾನಗಳಲ್ಲಿ ಭಾಗವಹಿಸಿದರು.
ಅಯೋಧ್ಯೆಯ
ಹಿಂದಿನ ರಾಜಮನೆತನದ ಬಿಮ್ಲೆಂದ್ರ ಮೋಹನ್ ಮಿಶ್ರಾ ಅವರು ಇದಕ್ಕೆ ಮುನ್ನ ರಾಮಲಲ್ಲಾನಿಗಾಗಿ ನೂತನ ಬೆಳ್ಳಿಯ ಪೀಠವನ್ನು ಟ್ರಸ್ಟಿಗೆ ಹಸ್ತಾಂತರಿಸಿದ್ದರು. ೯.೫ ಕೆಜಿ ಪೀಠವನ್ನು
ಜೈಪುರದಲ್ಲಿ ನಿರ್ಮಿಸಲಾಗಿದ್ದು,
೨೫
ಅಂಗುಲ ಉದ್ದ
ಮತ್ತು ೧೫ ಅಂಗುಲ ಅಗಲವಿದೆ. ಪೀಠದ
ಎತ್ತರ ೩೦ ಅಂಗುಲಗಳು. ಪ್ರಸ್ತುತ,
ರಾಮಲಲ್ಲಾ ಮರದ ಪೀಠದ ಮೇಲೆ
ಆಸೀನರಾಗಿದ್ದು, 1992ರಲ್ಲಿ ರಾಮಜನ್ಮಭೂಮಿಯಲ್ಲಿ ಈ ಪೀಠವನ್ನು ಇರಿಸಲಾಗಿತ್ತು.
No comments:
Post a Comment