೨೦೨೧ರಲ್ಲಿ ಚಂದ್ರಯಾನ-೩
ನವದೆಹಲಿ: ೨೦೨೧ರ ಪೂರ್ವಾರ್ಧದಲ್ಲಿ ಚಂದ್ರಯಾನ-೩ ಉಡಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2020 ಮಾರ್ಚ್ 04ರ ಬುಧವಾರ ತಿಳಿಸಿದರು. ಮೂರನೇ ಚಂದ್ರಯಾನ ಯೋಜನೆಯಲ್ಲಿ ಸ್ವಲ್ವ ವಿಳಂಬವಾಗಬಹುದು ಎಂಬ ಸೂಚನೆಯನ್ನು ಅವರು ಈ ಮೂಲಕ ನೀಡಿದರು.
ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಈ ವಿಷಯವನ್ನು ತಿಳಿಸಿದರು.
ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನವಾದ ’ಗಗನಯಾನ’ ಯೋಜನೆಯ ಸಂದರ್ಭದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಗೆ (ಮೈಕ್ರೋ ಗ್ರಾವಿಟಿ) ಸಂಬಂಧಿಸಿದಂತೆ ಜೈವಿಕ ಮತ್ತು ಭೌತ ವಿಜ್ಞಾನದ ಒಟ್ಟು ೪ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಅವರು ನುಡಿದರು.
No comments:
Post a Comment