Wednesday, March 4, 2020

ಪುಲ್ವಾಮಾ ದಾಳಿ: ಅಪ್ಪ, ಮಗಳ ಬಂಧನ

ಪುಲ್ವಾಮಾ ದಾಳಿ: ಅಪ್ಪ, ಮಗಳ ಬಂಧನ
ಶ್ರೀನಗರ : ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ Uಗಾಮಿಗಳು ನಡೆಸಿದ್ದ ಮಾನವ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ಗಳಿಗೆ ಸಹಾಯ ಮಾಡಿದ್ದ ತಂದೆ ಹಾಗೂ ಮಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು 2020 ಮಾರ್ಚ್ 03ರ ಮಂಗಳವಾರ ಬಂಧಿಸಿದರು.

ಕಳೆದ ನಾಲ್ಕು ದಿನಗಳ ಹಿಂದೆ ಪುಲ್ವಾಮಾ ಹಜಿಬಲ್ ಪ್ರದೇಶ ಮೂಲದ ಪೀರ್ ತಾರೀಕ್ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳು ಇಂಶಾಳನ್ನು ಬಂಧಿಸಲಾಗಿದೆ. ಇವರು ಇಬ್ಬರು ಉಗ್ರರಿಗೆ ಆಶ್ರಯ ನೀಡಿ ಬಾಂಬ್ ತಯಾರಿಸಲು ಸಹಾಯ ಮಾಡಿದ್ದರು ಎನ್ನಲಾಯಿತು.

ಮಾನವ ಬಾಂಬ್ ದಾಳಿ ದಳದ ಮುಖ್ಯಸ್ಥ ಅದಿಲ್ ಅಹ್ಮದ್ ದಾರ್ನಿಗೆ ಆಶ್ರಯ ನೀಡಲಾಗಿತ್ತು.
ಹಲವು
ಬಾರಿ ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು ಎಂದು ವಿಚಾರಣೆ ವೇಳೆ ಪೀರ್ ತಾರೀಕ್ ಬಾಯಿ ಬಿಟಿದ್ದಾನೆ ಎಂದು ಮೂಲಗಳು ಹೇಳಿದವು.

೨೦೧೯ರ ವರ್ಷ ಫೆ.೧೪ರಂದು ಸಿಆರ್ಪಿಎಫ್ ಯೋಧರ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೋರ ಎಂಬಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ದರು.

ಜೈಶ್ --ಮೊಹಮ್ಮದ್ ಉಗ್ರ ಸಂಘಟನೆ ಮಾನವ ಬಾಂಬ್ ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ೪೪ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.

No comments:

Advertisement