Monday, March 16, 2020

ಮಂಗಳವಾರವೇ ಬಹುಮತ ಸಾಬೀತು: ಕಮಲನಾಥ್‌ಗೆ ರಾಜ್ಯಪಾಲರ ತಾಕೀತು

ಕೊರೋನಾವೈರಸ್: .. ಅಸೆಂಬ್ಲಿ ಮುಂದೂಡಿಕೆ, ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ
ಮಂಗಳವಾರವೇ ಬಹುಮತ ಸಾಬೀತು: ಕಮಲನಾಥ್ಗೆ ರಾಜ್ಯಪಾಲರ ತಾಕೀತು
ಭೋಪಾಲ್/ ನವದೆಹಲಿ: ಮಧ್ಯಪ್ರದೇಶ ವಿಧಾನಸಭೆಯಲ್ಲಿ ನಡೆಯಬೇಕಾಗಿದ್ದ ಕಾಂಗ್ರೆಸ್ ಮುಖ್ಯಮಂತ್ರಿ ಕಮಲನಾಥ್ ಸರ್ಕಾರದ ಬಲಾಬಲ ಪರೀಕ್ಷೆ 2020 ಮಾರ್ಚ್  16ರ ಸೋಮವಾರ ನಡೆಯದ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲಜಿ ಟಂಡನ್ ಅವರು ಬಲಾಬಲ ಪರೀಕ್ಷೆಗೆ ಹೊಸ ಗಡುವು ನಿಗದಿ ಪಡಿಸಿದ್ದು, ಮಂಗಳವಾರದ ಒಳಗಾಗಿ ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸುವಂತೆ ಮತ್ತೆ ನಿರ್ದೇಶನ ನೀಡಿದರು.
ಕೊರೋನಾವೈರಸ್ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಕಾಳಜಿ ವ್ಯಕ್ತ ಪಡಿಸಿ ವಿಧಾನಸಭಾ ಅಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ವಿಧಾನಸಭೆಯನ್ನು ದಿಢೀರನೆ ೧೦ ದಿನಗಳ ಅವಧಿಗೆ-  ಮಾರ್ಚ್ ೨೬ಕ್ಕೆ ಮುಂದೂಡಿದ್ದು, ಇದರ ವಿರುದ್ಧ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸುಪ್ರೀಂಕೋರ್ಟ್ ಮೆಟ್ಟಿಲು ಏರಿರುವುದರ ಮಧ್ಯೆಯೇ ರಾಜ್ಯಪಾಲರು ಸದನದಲ್ಲಿ ಬಲಾಬಲ ಪರೀಕ್ಷೆಗೆ ಹೊಸ ಗಡುವು ನಿಗದಿ ಪಡಿಸಿದರು. ಸುಪ್ರೀಂಕೋರ್ಟ್ ಕೂಡಾ ಮಂಗಳವಾರ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆ ಇದೆ.

2020 ಮಾರ್ಚ್  17ರ  ಮಂಗಳವಾರದ  ಒಳಗಾಗಿ ತಮ್ಮ ಸರ್ಕಾರದ ಬಹುಮತವನ್ನು ನಿರ್ಣಾಯಕವಾಗಿ ಸಾಬೀತು ಪಡಿಸದೇ ಇದ್ದಲ್ಲಿ, ಸರ್ಕಾರವು ವಿಧಾನಸಭೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದಾಗಿ ತಾವು ಪರಿಗಣಿಸುವುದಾಗಿ ರಾಜ್ಯಪಾಲ ಲಾಲಜಿ ಟಂಡನ್ 2020 ಮಾರ್ಚ್  16ರ ಸೋಮವಾರ ಕಮಲನಾಥ್ ಅವರಿಗೆ ತಿಳಿಸಿದ್ದಾರೆ.

ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪಗಳನ್ನು ಮುಂದಿನ ೧೦ ದಿನಗಳ ಅವಧಿಗೆ ದಿಢೀರನೆ ಮುಂದೂಡುವುದಾಗಿ ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ಸೋಮವಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆಗೆ ಹೊಸ ಗಡುವನ್ನು ರಾಜ್ಯಪಾಲರು ನಿಗದಿ ಪಡಿಸಿದರು. ವಿಧಾನಸಭಾಧ್ಯಕ್ಷ ಪ್ರಜಾಪತಿಯವರು ಮಾರ್ಚ್ ೨೬ರಂದು ರಾಜ್ಯಸಭಾ ಚುನಾವಣೆಗಳ ಬಳಿಕ ವಿಧಾನಸಭೆ ಮರುಸಮಾವೇಶಗೊಳ್ಳುವುದು ಎಂದು ಈ ಮುನ್ನ  ಪ್ರಕಟಿಸಿದ್ದರು.

ವಿಧಾನಸಭಾ ಕಲಾಪಗಳನ್ನು ಮುಂದೂಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಕಮಲನಾಥ್ ಅವರು ವಿಶ್ವಾಸಮತ ಯಾಚಿಸುವುದಿಲ್ಲ ಎಂಬುದರ ಸುಳಿವು ಅರಿತ ಭಾರತೀಯ ಜನತಾ ಪಕ್ಷದ ನಾಯಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ೧೦ ಮಂದಿ ಶಾಸಕರು ಸುಪ್ರೀಂಕೋರ್ಟ್ಗೆ ಧಾವಿಸಿ ಅರ್ಜಿ ಸಲ್ಲಿಸಿ, ಕಮಲನಾಥ್ ನೇತೃತ್ವದ ಸರ್ಕಾರಕ್ಕೆ ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸುವಂತೆ ನಿರ್ದೇಶನ ನೀಡಬೇಕು ಕೋರಿದರು.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರವುತೋಳು ತಿರುಚಲುಮತ್ತುಶಾಸನಕರ್ತರಿಗೆ ಲಂಚ ನೀಡಲುಸಾಧ್ಯವಾಗುವಂತೆ ಸದನ ಬಲಾಬಲವನ್ನು ವಿಳಂಬಗೊಳಿಸಲು ಬಯಸಿದೆ. ಎಂದು ಚೌಹಾಣ್ ಸುಪ್ರೀಂಕೋರ್ಟಿಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಆಪಾದಿಸಿದರು.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ೨೨ ಮಂದಿ ಶಾಸಕರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದು, ಪರಿಣಾಮವಾಗಿ ಮಧ್ಯಪ್ರದೇಶ ಸರ್ಕಾರವು ಅಲ್ಪಮತಕ್ಕೆ ಇಳಿದಿದೆ ಎಂದು ಅರ್ಜಿ ನ್ಯಾಯಾಲಯಕ್ಕೆ ತಿಳಿಸಿದೆ. ರಾಜ್ಯಪಾಲರು ಸೋಮವಾರ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದ್ದರು. ಆದರೆ ಮಾರ್ಚ್ ೧೬ರ ಸೋಮವಾರದ ಕಲಾಪದಲ್ಲಿ ವಿಚಾರವನ್ನು ಸೇರಿಸಿರಲೇ ಇಲ್ಲ. ಇದು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ರಾಜ್ಯಪಾಲರ ನಿರ್ದೇಶನ ಉಲ್ಲಂಘಿಸಿದ್ದನ್ನು ತೋರಿಸುತ್ತದೆಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಮುಂಗಡಪತ್ರ ಕಲಾಪದ ಸಲುವಾಗಿ ಸೋಮವಾರ ಬೆಳಗ್ಗೆ ಸಮಾವೇಶಗೊಂಡಿದ್ದ ವಿಧಾನಸಭಾ ಅಧಿವೇಶನವನ್ನು ರಾಜ್ಯಪಾಲ ಲಾಲಜಿ ಟಂಟನ್ ಅವರ ಭಾಷಣದ ಬಳಿಕ  ಮುಂದೂಡಲಾಯಿತು. ರಾಜ್ಯಪಾಲರು ತಮ್ಮ ಭಾಷಣದಲ್ಲಿಎಲ್ಲರೂ ಸಂವಿಧಾನದ ನಿಯಮಾವಳಿಗಳನ್ನು ಅನುಸರಿಸಬೇಕು ಮತ್ತು ಮಧ್ಯಪ್ರದೇಶದ ಘನತೆಯನ್ನು ರಕ್ಷಿಸಬೇಕುಎಂದು ಹೇಳಿದ್ದರು.

ರಾಜ್ಯಪಾಲರ ಸಂಕ್ಷಿಪ್ತ ಭಾಷಣದ ಬಳಿಕ ಬಿಜೆಪಿ ಶಾಸಕರು ಸದನ ಬಲಾಬಲ ಪರೀಕ್ಷೆ ನಡೆಸುವಂತೆ  ಒತ್ತಾಯಿಸಿದರು. ತತ್ ಕ್ಷಣವೇ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ರಾಜ್ಯಪಾಲರು ವಿಧಾನಸಭೆಯನ್ನು ಬಿಟ್ಟು ಹೊರ ನಡೆದರು.

ಸೋಮವಾರ ಸುಮಾರು ೧೫ ನಿಮಿಷಗಳವರೆಗೆ ಕಲಾಪ ನಡೆದರೂ, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಿರಂತರ ಕೋಲಾಹಲದ ಮಧ್ಯೆ ಕಲಾಪವನ್ನು ನಿಮಿಷಗಳ ಅವಧಿಗೆ ಮುಂದೂಡಲಾಯಿತು.

ಚೌಹಾಣ್ ಮತ್ತು ವಿರೋಧ ಪಕ್ಷದ ನಾಯಕ ಗೋಪಾಲ ಭಾರ್ಗವ ಅವರು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರಿಗೆ ರಾಜ್ಯಪಾಲರ ನಿರ್ದೇಶನದಂತೆ ಕಲಾಪ ನಡೆಸಲು ಮನವಿ ಮಾಡಿದರು. ಆದರೆ ಸಭಾಧ್ಯಕ್ಷರು ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ’ಏನೇ ಸಂಭಾಷಣೆ ನಡೆದಿದ್ದರೂ ಅದು ನಿಮ್ಮ ಮತ್ತು ರಾಜ್ಯಪಾಲರ ನಡುವೆ ಮಾತ್ರ, ಸಭಾಧ್ಯಕ್ಷರ ಜೊತೆಗೆ ಅಲ್ಲಎಂದು ಪ್ರಜಾಪತಿ ಹೇಳಿದರು.
ಸರ್ಕಾರವು ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ಕಮಲನಾಥ್ ಅವರು ನೈತಿಕ ನೆಲೆಯಲ್ಲಿ ತಮ್ಮ ರಾಜೀನಾಮೆ ಸಲ್ಲಿಸೇಕು ಎಂದು ವಿಪಕ್ಷ ನಾಯಕ ಭಾರ್ಗವ ಅದಕ್ಕೆ ಮುನ್ನ ಹೇಳಿದ್ದರು.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಳೆದ ವಾರ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೇರಿದ ಬಳಿಕ ರಾಜ್ಯದಲ್ಲಿ ರಾಜಕೀಯ  ಬಿಕ್ಕಟ್ಟು ಉಂಟಾಗಿದೆ. ಸಿಂಧಿಯಾ ಅವರು ಕಾಂಗ್ರೆಸ್ ತ್ಯಜಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅವರಿಗೆ ನಿಷ್ಠರಾದ ಪಕ್ಷದ ೨೨ ಶಾಸಕರೂ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ಆದರೆ ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಆಯ್ದುಕೊಂಡ ಕೆಲವರ ರಾಜೀನಾಮೆಗಳನ್ನು ಮಾತ್ರವೇ ಅಂಗೀಕರಿಸಿದ್ದು, ಒಳಸಂಚುಗಳ ಮುನ್ಸೂಚನೆ ನೀಡಿದ್ದರು.

೨೨ ಕಾಂಗ್ರೆಸ್ ಶಾಸಕರ ಪೈಕಿ ಬಿಜೆಪಿ ಸದಸ್ಯರ ಮೂಲಕ ಕಳುಹಿಸಲಾಗಿದ್ದ ಮಂದಿ ಶಾಸಕರ ರಾಜೀನಾಮೆಗಳನ್ನು ಮಾತ್ರ ಸಭಾಧ್ಯಕ್ಷರು ಈವರೆಗೆ ಅಂಗೀಕರಿಸಿದ್ದಾರೆ. ಸದನ ಪರೀಕ್ಷೆ ನಡೆಸುವ ಬಗ್ಗೆ ಅವರು ಈವರೆಗೂ ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ.

೨೨೮ ಸದಸ್ಯಬಲದ ವಿಧಾನಸಭೆಯಲ್ಲಿ ೧೧೪ ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಸರ್ಕಾರವು ಅದರ ೨೨ ಶಾಸಕರು ರಾಜೀನಾಮೆ ನೀಡಿದ್ದರಿಂದ ಅಲ್ಪಸಂಖ್ಯಾತ ಸರ್ಕಾರವಾಗಿ ಪರಿವರ್ತನೆ ಹೊಂದಿದ್ದು, ಹಿನ್ನೆಲೆಯಲ್ಲಿ ಅದು ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಬೇಕು ಎಂದು ಬಿಜೆಪಿ ಪ್ರತಿಪಾದಿಸಿದೆ.
ಮಧ್ಯೆ, ಕಾಂಗ್ರೆಸ್ ಪಕ್ಷವು ತನಗೆ ಸದನಪರೀಕ್ಷೆ ಎದುರಿಸಲು ಯಾವುದೇ ಭಯವಿಲ್ಲ, ಆದರೆ ಸಭಾಧ್ಯಕ್ಷರು ಅದನ್ನು ನಿರ್ಧರಿಸಬೇಕು ಎಂದು ಹೇಳಿದೆ. ಮುಖ್ಯಂಮಂತ್ರಿ ಕಮಲನಾಥ್ ಅವರು ರಾಜ್ಯಪಾಲರಿಗೂ ಭಾನುವಾರ ಮಧ್ಯರಾತ್ರಿಯ ಭೇಟಿ ವೇಳೆಯಲ್ಲಿ ಇದನ್ನು ಹೇಳಿದ್ದರು.

ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಸಭಾಧ್ಯಕ್ಷರು ನಿರ್ಧರಿಸುತ್ತಾರೆ. ಸಭಾಧ್ಯಕ್ಷರು ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಮತ್ತು ನಾನು ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತೇನೆಎಂದು ಕಮಲನಾಥ್ ಟಂಡನ್ ಅವನ್ನು ಭೇಟಿ ಮಾಡಿದ ಬಳಿಕ ಹೇಳಿದ್ದರು.

ಪರಿಸ್ಥಿತಿಯು ಬಲಾಬಲ ಪರೀಕ್ಷೆಗಾಗಿಪಕ್ವವಾಗುವರೆಗೆ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಪತ್ರವೊಂದನ್ನೂ ಕಮಲನಾಥ್ ಅವರು ರಾಜ್ಯಪಾಲರಿಗೆ ಬರೆದಿದ್ದರು.

ರಾಜ್ಯದಲ್ಲಿನ ಬಿಕ್ಕಟ್ಟು ಬಿಜೆಪಿಯ ಸೃಷ್ಟಿ ಎಂದೂ ಕಾಂಗ್ರೆಸ್ ಆಪಾದಿಸಿತ್ತು.

No comments:

Advertisement