ರಾಷ್ಟ್ರಪತಿ ಭವನದಲ್ಲೂ ಹೋಳಿ ಹಬ್ಬ ಇಲ್ಲ
ನವದೆಹಲಿ: ಕೊರೋನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಕೂಡಾ ಹೋಳಿ ಸಮಾರಂಭವನ್ನು ರದ್ದು ಪಡಿಸಿರುವುದಾಗಿ 2020 ಮಾರ್ಚ್ 04ರ ಬುಧವಾರ ಪ್ರಕಟಿಸಿತು.
‘ಎಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳ ಮೂಲಕ ನಾವು ಕೋವಿಡ್ -೧೯ (ಮಾರಕ ಕೊರೋನಾವೈರಸ್) ಹರಡದಂತೆ ತಡೆಯಲು ನೆರವಾಗಬಹುದು. ಮುಂಜಾಗರೂಕತಾ ಕ್ರಮವಾಗಿ, ರಾಷ್ಟ್ರಪತಿ ಭವನವು ಪರಂಪರಾಗತ ಹೋಳಿ ಸಂಭ್ರಮಾಚರಣೆಯನ್ನು ನಡೆಸುವುದಿಲ್ಲ’ ಎಂದು ರಾಷ್ಟಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದರು..
No comments:
Post a Comment