Friday, March 20, 2020

ಬಲಾಬಲ ಪರೀಕ್ಷೆಗೆ ಮುನ್ನ ಕಮಲನಾಥ್ ರಾಜೀನಾಮೆ Kamalnath Resigns

ಬಲಾಬಲ ಪರೀಕ್ಷೆಗೆ ಮುನ್ನ ಕಮಲನಾಥ್ ರಾಜೀನಾಮೆ
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ತೆರೆ
ಭೋಪಾಲ್: ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ಎದುರಿಸಿ ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ನೀಡಿದ್ದ ಗಡುವಿಗೆ ಕೆಲವೇ  ಗಂಟೆಗಳ ಮುನ್ನ ಶುಕ್ರವಾರ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು
ಸುಪ್ರೀಂ ಕೋರ್ಟ್ ಆದೇಶಿಸಿದ ವಿಶ್ವಾಸ ಮತಯಾಚನೆಯ  ಗಡುವಿಗೆ ಕೆಲವೇ ಗಂಟೆಗಳ ಮೊದಲು ಭೋಪಾಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಯನ್ನು ಪ್ರಕಟಿಸಿದರು.
ರಾಜೀನಾಮೆ ಪತ್ರ  ಓದಿದ  ಹಿರಿಯ ಕಾಂಗ್ರೆಸ್ ಮುಖಂಡ, ತಮ್ಮ ಶಾಸಕರನ್ನು ಬೆಂಗಳೂರಿನಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ಆಪಾದಿಸಿದರು.
ಸತ್ಯ ಹೊರಬರುತ್ತದೆ. ಜನರು ಅವರನ್ನು ಕ್ಷಮಿಸುವುದಿಲ್ಲಎಂದು ಕಮಲ್ ನಾಥ್ ಹೇಳಿದರು.
ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಕೇಂದ್ರ ಸಚಿವ ಜ್ಯೋತಿರಾಡಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ಆರು ಮಂತ್ರಿಗಳು ಸೇರಿದಂತೆ ೨೩ ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಿಂದಕ್ಕೆ ಕರೆತರುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕ ವಿಫಲರಾಗಿದ್ದಾರೆ.
ಕಾಂಗ್ರೆಸ್‌ನಲ್ಲಿ ೧೮ ವರ್ಷಗಳ  ಇದ್ದ  ಜ್ಯೋತಿರಾಡಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾದ  ಬೆನ್ನಲ್ಲೇ ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಪ್ರಾರಂಭವಾಗಿತ್ತು.

No comments:

Advertisement