Thursday, April 30, 2020

ಭಾರತ: 1000 ದಾಟಿದ ಕೊರೋನಾ ಸಾವು, ೩೧,೭೮೭ ಸೋಂಕು

ಭಾರತ: 1000 ದಾಟಿದ ಕೊರೋನಾ ಸಾವು,  ೩೧,೭೮೭ ಸೋಂಕು
ಅಮೆರಿಕ: ೧೦ ಲಕ್ಷ ಸೋಂಕು ದಾಖಲಿಸಿದ ವಿಶ್ವದ ಮೊದಲ ರಾಷ್ಟ್ರ
ನವದೆಹಲಿ: ಕೊರೋನಾವೈರಸ್ ಸೋಂಕಿನಿಂದಾಗಿ ಮೊದಲ ಸಾವು ಸಂಭವಿಸಿದ ತಿಂಗಳ ನಂತರ ದೇಶಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 2020 ಏಪ್ರಿಲ್  29ರ ಬುಧವಾರ  ಒಂದು ಸಾವಿರ ದಾಟಿತು. ಈವರೆಗೆ ಒಟ್ಟು ,೦೦೮ ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ಒಟ್ಟು ೧೮೧೩ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ೭೩ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ದೇಶದಾದ್ಯಂತ ೩೧,೭೮೭ ಸೋಂಕು ಪ್ರಕರಣಗಳು ದಾಖಲಾಗಿದ್ದು, ಅವರ ಪೈಕಿ  ,೬೯೫ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ೨೨,೬೨೯ ಸಕ್ರಿಯ ಪ್ರಕರಣಗಳು ಇವೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.

ಅತಿಹೆಚ್ಚು (,೫೯೦) ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲಿ ೩೮೯ ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ,೨೮೨ ಸೋಂಕಿತರು ಗುಣಮುಖರಾಗಿದ್ದಾರೆ. ಗುಜರಾತಿನಲ್ಲಿ ೧೬೨, ಮಧ್ಯಪ್ರದೇಶದಲ್ಲಿ ೧೧೩, ದೆಹಲಿಯಲ್ಲಿ ೫೪, ರಾಜಸ್ಥಾನದಲ್ಲಿ ೪೧ ಮತ್ತು ಉತ್ತರ ಪ್ರದೇಶದಲ್ಲಿ ೩೧ ಸಾವು ಸಂಭವಿಸಿವೆ.

ಕರ್ನಾಟಕದಲ್ಲಿ ಇದುವರೆಗೆ ೫೨೦ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ೧೯೮ ಮಂದಿ ಗುಣಮುಖರಾಗಿದ್ದಾರೆ. ಉಳಿದ  ೩೦೨ ಜನರಿಗೆ ಚಿಕಿತ್ಸೆ ಮುಂದುವರಿದಿದೆ. ೨೦ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೋವಿಡ್-೧೯ ಸೋಂಕಿನ ೩೩ ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖೈ ೫೫೦ಕ್ಕೆ ಏರಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ತಿಳಿಸಿದರು.

೩೦೦೦ ಮಕ್ಕಳು ರಾಜಸ್ಥಾನದಿಂದ ಬಂಗಾಳಕ್ಕೆ
ಮಧ್ಯೆ ಸುಮಾರು ೨೫೦೦-೩೦೦೦ ಮಕ್ಕಳು ರಾಜ್ಯಕ್ಕೆ ವಾಪಸಾಗಲು ರಾಜಸ್ಥಾನದ ಕೋಟಾದಿಂದ ಬುಧವಾರ ಸಂಜೆ ಬಸ್ಸೇರಲಿದ್ದಾರೆ. ಅವರು ಪಶ್ಚಿಮ ಬಂಗಾಳ ತಲುಪಲು ದಿನ ಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

ದಿನಕ್ಕೆ ೬೦,೦೦೦ ಪರೀಕ್ಷೆ
ಭಾರತವು ಪ್ರತಿದಿನ ೬೦,೦೦೦ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಇಲ್ಲಿ ಹೇಳಿದ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರು ಭಾರತವು ಕೋವಿಡ್-೧೯ರ ವಿರುದ್ಧ ಒಂದು ರಾಷ್ಟ್ರವಾಗಿ ಅತ್ಯಂತ ದಕ್ಷ ಸಮರ ನಡೆಸುವುದು. ಸಾವಿನ ಪ್ರಮಾಣ ಮತ್ತು ರೋಗದ ದುಪ್ಪಟ್ಟು ಪ್ರಮಾಣದ ವಿಚಾರದಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ ಎಂದು ಅವರು ನುಡಿದರು.

ಹೊಸ ಔಷಧದ ಪ್ರಯೋಗ ಆರಂಭ
ಚಂಡೀಗಢದ ಪಿಜಿಐಎಂಇಆರ್‌ನಲ್ಲಿ ಕೊರೋನಾವೈರಸ್ ರೋಗಿಗಳ ಮೇಲೆಸೆಪ್ಸಿವಾಕ್ ಎಂಬ ನೂತನ ಔಷಧದ ಪ್ರಯೋಗವನ್ನು ಬುಧವಾರ ಆರಂಭಿಸಲಾಗಿದೆ ಎಂದು ಸಿಎಸ್‌ಐಆರ್ - ಐಐಎಂ ನಿರ್ದೇಶಕ ಡಾ. ರಾi ವಿಶ್ವಕರ್ಮ ತಿಳಿಸಿದರು.

ನೂತನ ಔಷಧದ ಪ್ರಯೋಗ ಯಶಸ್ವಿಯಾದರೆ ಭಾರೀ ಸಂಖ್ಯೆಯಲ್ಲಿ ಪ್ರಾಣಗಳನ್ನು ರಕ್ಷಿಸಬಹುದು. ಇದು ಕೆಲಸ ಮಾಡಿದರೆ, ಕೋವಿಡ್-೧೯ ವಿರುದ್ಧ ಚಿಕಿತ್ಸೆ ನೀಡುವ ಪ್ರಮಾಣದಲ್ಲಿ ಉತ್ಪಾದಿಸಲು ಕನಿಷ್ಠ ತಿಂಗಳು ಬೇಕಾಗುತ್ತದೆ. ಆದರೆ ನಮಗೆ ಇನ್ನೂ ಇತರ ಔಷಧಗಳೂ ಬೇಕಾಗುತ್ತವೆ ಎಂದು ಡಾ.ವಿಶ್ವಕರ್ಮ ಹೇಳಿದರು. ಡಾ. ವಿಶ್ವಕರ್ಮ ಅವರು ಸೆಪ್ಸಿವಿಕ್ ಔಷಧವನ್ನು ಕೊರೋನಾವಿರುದ್ಧ ಬಳಸು ನಿಟ್ಟಿನ ಪ್ರಯೋಗದ ಸಮನ್ವಯಕಾರರೂ ಆಗಿದ್ದಾರೆ.

ಅಮೆರಿಕದಲ್ಲಿ ೧೦ ಲಕ್ಷ ಸೋಂಕಿತರು
ಅಮೆರಿಕವು ಬುಧವಾರ ವಿಶ್ವದಲ್ಲಿ ೧೦ ಲಕ್ಷ ಕೊರೋನಾವೈರಸ್ ಸೋಂಕು ಪ್ರಕರಣಗಳನ್ನು ದಾಖಲಿಸಿದ ಮೊದಲ ರಾಷ್ಟ್ರ ಎನಿಸಿತು. ಅದು ಕಳೆದ ೨೪ ಗಂಟೆಗಳಲ್ಲಿ ೨೨೦೦ ಕೋವಿಡ್-೧೯ ಸಾವುಗಳನ್ನು ದಾಖಲಿಸಿತು ಎಂದು ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಮಧ್ಯೆ, ಚೀನಾದ ಉನ್ನತ ವಿಜ್ಞಾನಿಗಳು ಕೊರೋನಾವೈರಸ್ ರೋಗಕ್ಕೆ (ಕೋವಿಡ್-೧೯) ಕಾರಣವಾಗುವ ಸಾರ್ಸ್-ಕೋವ್- ವೈರಾಣುವನ್ನು ತಡೆ ಹಿಡಿಯಲು ಸಾಧ್ಯವಿಲ್ಲ, ಅದು ಫ್ಲೂ ಇತ್ಯಾದಿ ಋತುಮಾನದ ಸೋಂಕುಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಋತುಮಾನದ ಸೋಂಕು ಫ್ಲೂ ವಿಶ್ವಾದ್ಯಂತ ಪ್ರತಿವರ್ಷ ಸಾಮಾನ್ಯವಾಗಿ ,೦೦,೦೦೦ ದಿಂದ ,೫೦,೦೦೦ ಜನರು ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ) ಅಂದಾಜು ಮಾಡಿದೆ.

ಇಂಗ್ಲೆಂಡಿನಲ್ಲಿ ಕೊರೋನಾವೈರಸ್ ಸಾವಿನ ಅಧಿಕೃತ ಸಂಖ್ಯೆಯನ್ನು  ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಪ್ರಶ್ನಿಸಿದರು. ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಅವರು ದೇಶದಲ್ಲಿ ಸೋಂಕಿಗೆ ಬಲಿಯಾಗಿರುವವರ ಅಧಿಕೃತ ಸಂಖ್ಯೆ ೨೧,೬೭೮ ಎಂಬುದಾಗಿ ಪ್ರಕಟಿಸಿದ ಬೆನ್ನಲ್ಲೇ ಅವರ ಹೇಳಿಕೆಯನ್ನು ಪ್ರಶ್ನಿಸಿದ ಲೇಬರ್ ಪಕ್ಷದ ನಾಯಕ ತಮಗೆ ಲಭಿಸಿರುವ ವರ್ತಮಾನದ ಪ್ರಕಾರ ದೇಶದಲ್ಲಿ ವೈರಸ್ಸಿಗೆ ಬಲಿಯಾಗಿರುವವರ ಸಂಖ್ಯೆ ೨೭,೨೪೧ ಎಂದು ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೩೧,೬೩,೩೮೮ , ಸಾವು ,೧೯,೩೪೯
ಚೇತರಿಸಿಕೊಂಡವರು- ,೭೫,೯೨೭
ಅಮೆರಿಕ ಸೋಂಕಿತರು ೧೦,೩೭,೧೫೧, ಸಾವು ೫೯,೩೨೯
ಸ್ಪೇನ್ ಸೋಂಕಿತರು ,೩೬,೮೯೯, ಸಾವು ೨೪,೨೭೫
ಇಟಲಿ ಸೋಂಕಿತರು ,೦೧,೫೦೫,  ಸಾವು ೨೭,೩೫೯
ಜರ್ಮನಿ ಸೋಂಕಿತರು ,೬೦,೪೭೯, ಸಾವು ,೩೩೦
ಚೀನಾ ಸೋಂಕಿತರು ೮೨,೮೫೮, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೬೧,೧೪೫, ಸಾವು ೨೧,೬೭೮
ಅಮೆರಿಕದಲ್ಲಿ ೬೩, ಇರಾನಿನಲ್ಲಿ ೮೦, ಬೆಲ್ಜಿಯಂನಲ್ಲಿ ೧೭೦, ಸ್ಪೇನಿನಲ್ಲಿ ೪೫೩, ನೆದರ್ ಲ್ಯಾಂಡ್ಸ್‌ನಲ್ಲಿ ೧೪೫, ರಶ್ಯಾದಲ್ಲಿ ೧೦೫, ಸ್ವೀಡನ್‌ನಲ್ಲಿ ೧೦೭, ಮೆಕ್ಸಿಕೋದಲ್ಲಿ ೧೩೫, ಒಟ್ಟಾರೆ ವಿಶ್ವಾದ್ಯಂತ ,೫೩೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement