Wednesday, April 1, 2020

ಮಸೀದಿ ತೆರವಿಗೆ ಮರ್ಕಜ್ ನಾಯಕತ್ವದ ಪ್ರತಿರೋಧ: ದೋವಲ್ ಸಂಧಾನ!

ಮಸೀದಿ ತೆರವಿಗೆ  ಮರ್ಕಜ್ ನಾಯಕತ್ವದ ಪ್ರತಿರೋಧ
ನಸುಕಿನಲ್ಲೇ  ದೋವಲ್ ಸಂಧಾನ!
ನವದೆಹಲಿ: ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಬಂಗಲೆವಾಲಿ ಮಸೀದಿಯನ್ನು ಖಾಲಿ ಮಾಡುವಂತೆ ದೆಹಲಿ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಮಾಡಿದ ಮನವಿಗೆ ಮಣಿಯಲು ನಿರಾಕರಿಸಿದಾಗ, ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್ ಅವರಿಗೆ  2020 ಮಾರ್ಚ್  31ರ ಮಂಗಳವಾರ ಕೆಲಸವನ್ನು ಪೂರ್ಣಗೊಳಿಸುವ ಹೊಣೆ ಒಪ್ಪಿಸಿದ್ದ ವಿಚಾರ   2020 ಏಪ್ರಿಲ್ 01ರ ಬುಧವಾರ ಬೆಳಕಿಗೆ ಬಂದಿತು.

ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ಪ್ರಕಾರ, ಮಾರ್ಚ್ ೨೮-೨೯ರ ನಡುವಣ ರಾತ್ರಿಯಲ್ಲಿ ತಮ್ಮ ನಿವಾಸದಿಂದ ಹೊರಟ ದೋವಲ್ ಅವರು ನಸುಕಿನ ಗಂಟೆಗೆ ಮರ್ಕಜ್ ತಲುಪಿದ್ದರು ಮತ್ತು ಕೋವಿಡ್ -೧೯ ಸೋಂಕಿಗೆ ಸಂಬಂಧಿಸಿದಂತೆ ಮಸೀದಿಯ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸು ಅಗತ್ಯವನ್ನು ಮೌಲಾನಾ ಸಾದ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ತೆಲಂಗಾಣದ ಕರೀಂನಗರದಲ್ಲಿ ಕೊರನಾವೈರಸ್ ಪಾಟಿಸಿವ್ ವರದಿ ಬಂದಿದ್ದ ಒಂಬತ್ತು ಇಂಡೋನೇಷ್ಯಾ ಪ್ರಜೆಗಳು ಮರ್ಕಜ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದುದನ್ನು ಮಾರ್ಚ್ ೧೮ ರಂದು  ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿದಂದಿನಿಂದ ಅಮಿತ್ ಶಾ ಮತ್ತುಜಿತ್ ದೋವಲ್ ಅವರು ಮಸೀದಿ ವಿದ್ಯಮಾನಗಳ ಮೇಲೆ ನಿಗಾ ಇಟ್ಟಿದ್ದರು.

ಭದ್ರತಾ ಸಂಸ್ಥೆಗಳು ಮರುದಿನವೇ ಎಲ್ಲಾ ರಾಜ್ಯ ಪೊಲೀಸ್ ಮತ್ತು ಅಂಗಸಂಸ್ಥೆ ಕಚೇರಿಗಳಿಗೆ ಮರ್ಕಜ್ ಮೂಲಕ ಸೋಂಕಿನ ಸಾಧ್ಯತೆ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಿದ್ದವು.

ಮಾರ್ಚ್ ೨೭, ೨೮ ಮತ್ತು ೨೯ ರಂದು ೧೬೭ ಮಂದಿ ತಬ್ಲಿಘಿ ಕೆಲಸಗಾರರನ್ನು ಆಸ್ಪತ್ರೆಗೆ ದಾಖಲಿಸಲು ಮಸೀದಿ ಅವಕಾಶ ಮಾಡಿಕೊಟ್ಟರೂ, ದೋವಲ್ ಅವರ ಮಧ್ಯಪ್ರವೇಶದ ನಂತರವೇ ಜಮಾತ್ ನಾಯಕತ್ವವು ಮಸೀದಿಯನ್ನು ಸ್ವಚ್ಛಗೊಳಿಸಲು ಮುಂದಾಯಿತು.

ಡೋವಲ್ ಅವರು ಕಳೆದ ಹಲವು ದಶಕಗಳಿಂದ, ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಮುಸ್ಲಿಂ ಚಳುವಳಿಗಳೊಂದಿಗೆ ಬಹಳ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಅವರು ಎಲ್ಲಾ ಮುಸ್ಲಿಂ ಉಲೇಮಾಗಳೊಂದಿಗೆ ಭಾರತಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲು ಅವರೊಂದಿಗೆ ಸಮಯ ಕಳೆದಿದ್ದಾರೆ.

ತಬ್ಲಿಘಿ ಕಾರ್ಯಾಚರಣೆಯು ಈಗ ನೇ ಹಂತಕ್ಕೆ ತಲುಪಿದೆ. ಎರಡನೇ ಹಂತದಲ್ಲಿ ಭಾರತದಲ್ಲಿರುವ ಎಲ್ಲ ವಿದೇಶಿಯರನ್ನು ತ್ತ ಹಚ್ಚಿ ಅವರನ್ನು ವೈದ್ಯಕೀಯವಾಗಿ ಪರೀಕ್ಷಿಸಲಿದೆ. ಬಳಿಕ ವೀಸಾ ಮಾನದಂಡಗಳ ಉಲ್ಲಂಘನೆಯ ವಿಚಾರವಾಗಿ ಕಠಿಣ ಕ್ರಮದ ಚಿಂತನೆ ನಡೆಸಲಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯ ಮರ್ಕಜ್ನಲ್ಲಿ ೨೧೬ ವಿದೇಶಿ ಪ್ರಜೆಗಳು ಇದ್ದರು ಆದರೆ ಮಸೀದಿಯಿಂದ ದೇಶದ ವಿವಿಧ ಭಾಗಗಳಿಗೆ ತೆರಳಿರುವ ೮೦೦ ಕ್ಕೂ ಹೆಚ್ಚು ಜರಿದ್ದು, ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಬಾಂಗ್ಲಾದೇಶದ ಪ್ರಜೆಗಳು ಎಂದು ಸುದ್ದಿ ಮೂಲಗಳು ಹೇಳಿವೆ.

ಜನವರಿಯಿಂದ, ಸುಮಾರು ,೦೦೦ ವಿದೇಶಿಯರು ಮರ್ಕಜ್  ಸಮಾವೇಶಕ್ಕೆ  ಹಾಜರಾಗಿದ್ದಾರೆ ಎಂದು ಗೃಹ ಸಚಿವಾಲಯವು ಹೇಳಿದೆ. ಆರಂಭಿಕ ವರದಿU ಪ್ರಕಾರ ಅವರು ಯಾರೂ ಮಿಷನರಿಗಳಲ್ಲ, ಪ್ರವಾಸಿಗರಿಗಾಗಿ ನೀಡಲಾಗಿರುವ ವೀಸಾಗಳಲ್ಲಿ ಭಾರತವನ್ನು ಪ್ರವೇಶಿಸಿ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ಬಹುತೇಕ ಎಲ್ಲರೂ ತಮ್ಮ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮಿಷನರಿ ವರ್ಗದ ಅಡಿಯಲ್ಲಿ ವೀಸಾ ವಿನಂತಿಗಳನ್ನು ಸಲ್ಲಿಸಲು ಸರ್ಕಾರವು ಪದೇ ಪದೇ ಜ್ಞಾಪನೆಗಳನ್ನು ನೀಡಿದ್ದರೂ ಹೀಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಸಾ ನಿಯಮಗಳ ಉಲ್ಲಂಘನೆಯ ಕಾರಣ ಅವರನ್ನು ಮತ್ತೆ ದೇಶ ಪ್ರವೇಶಿಸದಂತೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಮೂಲಗಳು ಹೇಳಿವೆ.

ವಿದೇಶಿಯರಲ್ಲದೆ, ದೆಹಲಿಯ ಸಮಾವೇಶಕ್ಕೆ ಹಾಜರಾದ ಅಥವಾ ಸಮಾವೇಶದಲ್ಲಿ ಪಾಲ್ಗೊಂಡ ಜನರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಎಲ್ಲ ಭಾರತೀಯರನ್ನು ಗುರುತಿಸುವ ಬೃಹತ್ ಪ್ರಯತ್ನವೂ ನಡೆಯುತ್ತಿದೆ. ಕೋವಿಡ್ -೧೯ ಸೋಂಕು ಪ್ರಸಾರದ ತಡೆಗಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸೋಂಕು ಕಂಡ ಬಂದವರನ್ನು ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ.

ತಬ್ಲಿಘಿ ಜಮಾತ್ನ್ನು ಮೇವಾತಿ ಪ್ರದೇಶದಲ್ಲಿ ಮೌಲಾನಾ ಸಾದ್ ಅವರ ಮುತ್ತಜ್ಜ ಮೌಲಾನಾ ಇಲ್ಯಾಸ್ ಕಂಧ್ಲಾವಿ ಸ್ಥಾಪಿಸಿದ್ದರು.ಇಸ್ಲಾಮಿಗೆ ಮತಾಂತರಗೊಂಡಿದ್ದ  ಆಗಿನ ಮೇವಾತಿ ಗ್ರಾಮೀಣ ಜನರನ್ನು ತಬ್ಲಿಘಿಗಳು, ಮೇವಾಡದ  ರಾಣಾ ಸಂಘನ ಜೊತೆ ಸೇರಿ ಭಬರ್ಪುರದ ಬಳಿಯ ಖಾನ್ವಾ ಕದನದಲ್ಲಿ ೧೫೨೭ ರಲ್ಲಿ ಮೊಘಲ್ ದೊರೆ ಬಾಬರ್ ವಿರುದ್ಧ ಹೋರಾಡಿದ್ದರು. ಮೊದಲ ಪಾಣಿಪತ್ ಕದನದ ನಂತರ ಯುದ್ಧ ನಡೆದಿತ್ತು.
ಮತಾಂತರದ ಸಲುವಾಗಿ ಉತ್ತಮ ಮುಸ್ಲಿಂ ಆಗುವುದು ಹೇಗೆ ಎಂದು ಸಂಪೂರ್ಣವಾಗಿ ಕುರಾನ್ ಆಧರಿಸಿ ಬೋಧಿಸುವ ಕಾರ್ಯವನ್ನು ಜಮಾತ್ ನಿರ್ವಹಿಸುತ್ತದೆ.

ದಕ್ಷಿಣ ಏಷಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮತ್ತು ತೀವ್ರಸ್ವರೂಪದ ಬೋಧನೆಗಾಗಿ ತಬ್ಲಿಘಿಯನ್ನು ಪಾಕಿಸ್ತಾನವು ಬಳಸಿಕೊಂಡಿದೆ. ಇದರಿಂದಾಗಿ ತಬ್ಲಿಘಿ ಚಳವಳಿ ಇದೇಗ ಅನೇಕ ಬಣಗಳಾಗಿ ಒಡೆದಿದೆ.

No comments:

Advertisement