Wednesday, April 22, 2020

ಕೊರೋನಾ: ಚೀನಾ ವಿರುದ್ಧ ಅಮೆರಿಕದಲ್ಲಿ ಖಟ್ಲೆ

ಕೊರೋನಾ: ಚೀನಾ ವಿರುದ್ಧ ಅಮೆರಿಕದಲ್ಲಿ ಖಟ್ಲೆ
ವಾಷಿಂಗ್ಟನ್/ ನವದೆಹಲಿ: ಜಗತ್ತಿನ ೧೮೦ಕ್ಕೂ ಹೆಚ್ಚು ದೇಶಗಳನ್ನು ಕಂಗೆಡಿಸಿರುವ ಕೊರೋನಾವೈರಸ್ (ಕೋವಿಡ್-೧೯) ಚೀನಾದಮಾನವ ಸೃಷ್ಟಿಎಂಬುದಾಗಿ ಫ್ರಾನ್ಸಿನ ನೊಬೆಲ್ ಪ್ರಶಸ್ತಿ ವಿಜೇತ ವೈದ್ಯಕೀಯ ವಿಜ್ಞಾನಿ ಲುಕ್ ಮಾಂಟೆಗ್ನೇರ್ ಅವರು ಪ್ರತಿಪಾದಿಸಿದ ಕೆಲವೇ ದಿನಗಳ ಬಳಿಕ  ಚೀನಾದ ವಿರುದ್ಧ ಅಮೆರಿಕದ ಮಿಸೌರಿ ರಾಜ್ಯ ಮೊಕದ್ದಮೆ ದಾಖಲಿಸಿತು.

ಇದೇ ವೇಳೆಗೆ ಚೀನಾದ ಜೊತೆಗಿನ ವ್ಯಾಪಾರ ಒಪ್ಪಂದ ಕೊನೆಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದರು.

ಕೋವಿಡ್ ೧೯ ವೈರಸ್ ತಡೆಗಟ್ಟಲು ಅಸಮರ್ಪಕ ಕಾರ್ಯತಂತ್ರ ಹಾಗೂ ಉದ್ದೇಶ ಪೂರ್ವಕವಾದ ವಂಚನೆ ಎಸಗಿದೆ. ಆದ್ದರಿಂದ ಚೀನವೇ ನಷ್ಟ ಭರಿಸಬೇಕು ಎಂದು ಮಿಸೌರಿ ರಾಜ್ಯ ಹೇಳಿತು.

ಅಮೆರಿಕ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಅಮೆರಿಕ ಒಕ್ಕೂಟದ ಮಿಸೌರಿ ಚೀನಾಕ್ಕೆ ದಂಡನೆ ನೀಡಬೇಕೆಂದು ಮೊಕದ್ದಮೆ ಹೂಡಿದ ಮೊದಲ ರಾಜ್ಯವಾಗಿದೆ. ಕೋವಿಡ್- ೧೯ ವೈರಸ್ ಹರಡುವಿಕೆ ಹಿಂದೆ ಬೀಜಿಂಗ್ ಕೈವಾಡ ಇದೆ ಎಂದು  ಟ್ರಂಪ್ ಮುನ್ನವೇ ಆರೋಪಿಸಿದ್ದರು.


ಮಿಸೌರಿ ರಾಜ್ಯದ ಟ್ರಂಪ್ ನೇತೃತ್ವ ರಿಪಬ್ಲಿಕ್ ಪಕ್ಷ ಚೀನಾದ ವಿರುದ್ಧ ಫೆಡರಲ್ ಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿ ನಷ್ಟ ಭರಿಸುವಂತೆ ಕೋರಿದೆ. ಆದರೆ ನಷ್ಟದ ನಿಖರ ಮೊತ್ತವನ್ನು ಅದು ದಾಖಲಿಸಿಲ್ಲ.

ಸದ್ದಿಲ್ಲದೆ ಮನುಷ್ಯನ ದೇಹ ಸೇರುವ ಕೋವಿಡ್-೧೯ ಮಾರಣಾಂತಿಕ ಹಾಗೂ ಅಪಾಯಕಾರಿ ಸೋಂಕಿನ ಬಗ್ಗೆ ಚೀನಾ ಸರ್ಕಾರ ಇಡೀ ಜಗತ್ತಿಗೆ ಸುಳ್ಳು ಹೇಳಿದೆ. ಅಲ್ಲದೇ ಸೋಂಕು ಹರಡುವುದನ್ನು ತಡೆಯುವಲ್ಲಿಯೂ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಎಂದು ಮಿಸೌರಿ ಅಟಾರ್ನಿ ಜನರಲ್ ಎರಿಕ್ ಸ್ಕಿಮ್ಮಿಟ್ ತಿಳಿಸಿದರು.

ಚೀನಾ ತನ್ನ ಕೃತ್ಯದ ಹೊಣೆ ಹೊರಬೇಕಾಗಿದೆ. ಅಮೆರಿಕದ ಕಾನೂನಿನ ಪ್ರಕಾರ ಚೀನಾ ವಿರುದ್ಧ ಹೂಡಿರುವ ಮೊಕದ್ದಮೆ ವಿಚಾರದಲ್ಲಿ ಚೀನಾ ಯಶಸ್ಸು ಕಾಣುವುದು ದೂರದ ವಿಚಾರ ಎಂದು ವರದಿ ತಿಳಿಸಿದೆ.

ಇದಕ್ಕೆ ಮುನ್ನವೇ ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್ ಅವರ ಫ್ರೀಡಮ್ ವಾಚ್ ಸಂಸ್ಥೆ, ಟೆಕ್ಸಾಸ್ ಬಝ್ ಫೋಟೋಸ್ ಎಂಬ ಕಂಪನಿಯ ಜತೆಗೂಡಿ ಚೀನಾ ಸರ್ಕಾರ, ಚೀನಾ ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ನಿರ್ದೇಶಕ ಶೀ ಝೆಂಗ್ಲಿ ವಿರುದ್ಧ ೨೦ ಲಕ್ಷ ಕೋಟಿ ಡಾಲರ್ ಮೊತ್ತದ ಪರಿಹಾರಕ್ಕಾಗಿ ಖಟ್ಲೆ ದಾಖಲಿಸಿದ್ದರು.

ಒಪ್ಪಂದ ಅಂತ್ಯ: ಟ್ರಂಪ್ ಬೆದರಿಕೆ:
ಮಧ್ಯೆ, ಕೊರೊನಾ ವೈರಸ್ ಹರಡಿದ್ದರ ಹಿಂದೆ ಚೀನಾದ ಉದ್ದೇಶಪೂರ್ವಕ ಕೃತ್ಯ ಇದ್ದದ್ದೇ ಆದರೆ ಅದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,  2020 ಏಪ್ರಿಲ್  21ರ ಮಂಗಳವಾರ ಚೀನಾದೊಂದಿಗಿನ ವ್ಯಾಪಾರ ಒಪ್ಪಂದ ಅಂತ್ಯಗೊಳಿಸುವುದಾಗಿ ಬೆದರಿಕೆ ಹಾಕಿದರು.

ಚೀನಾದಲ್ಲಿ  ೮೪,೭೮೮ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು  ,೬೩೨ ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ,೨೪,೬೦೦ ಪ್ರಕರಣಗಳು ದಾಖಲಾಗಿದ್ದು ಇಲ್ಲಿಯವರೆಗೆ ೪೫, ೨೯೦ ಸಾವು ಸಂಭವಿಸಿದೆ.

ಚೀನಾ ಮತ್ತು ಅಮೆರಿಕ ಜನವರಿ ತಿಂಗಳಲ್ಲಿ ವ್ಯಾಪಾರ ಒಪ್ಪಂದದ ಮೊದಲನೇ ಹಂತಕ್ಕೆ  ಸಹಿ ಹಾಕಿದ್ದವು. ಒಪ್ಪಂದದ ಪ್ರಕಾರ ಚೀನಾ ಅಮೆರಿಕದಿಂದ ೨೦೦ ಶತಕೋಟಿ ಅಮೆರಿಕ ಡಾಲರ್ ಮೊತ್ತದ  ಉತ್ಪನ್ನಗಳನ್ನು ಖರೀದಿಸಬೇಕು. ಆದಾಗ್ಯೂ, ಅಮೆರಿಕ- ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್ಪರಿಶೀಲನಾ ಆಯೋಗವು ಒಪ್ಪಂದದಲ್ಲಿ ಚೀನಾ ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿತ್ತು.

ನೈಸರ್ಗಿಕ ವಿಕೋಪ ಅಥವಾ ಇನ್ಯಾವುದೇ ವಿಕೋಪದ ವೇಳೆ ಎರಡೂ ದೇಶಗಳ ನಡುವೆ  ಹೊಸ ವ್ಯಾಪಾರ ಒಪ್ಪಂದ ಮಾಡಲು ಅವಕಾಶವಿದೆ.

ಒಂದು ವೇಳೆ ರೀತಿ ಮಾಡಿದರೆ ನಾವು ಒಪ್ಪಂದವನ್ನು ಅಂತ್ಯಗೊಳಿಸಿ ಎಲ್ಲರಿಗಿಂತ ಉತ್ತಮವಾಗಿ ಏನು ಮಾಡಲು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದರು.

ವ್ಯಾಪಾರ ಒಪ್ಪಂದದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಒಂದು ವರ್ಷದಲ್ಲಿ ೨೦೦, ೩೦೦, ೪೦೦, ೫೦೦ ಶತಕೋಟಿ ಅಮೆರಿಕನ್ ಡಾಲರ್, ಅವರು ರೀತಿ ಮಾಡಿದ್ದಾದರೂ ಯಾಕೆ?  ಕಳೆದ ವರ್ಷವನ್ನೇ ನೋಡಿ ಖರ್ಚು ಕಡಿಮೆಯಾಗಿತ್ತು ಎಂದು ಹೇಳಿದರು.

ಚೀನಾ ವ್ಯಾಪಾರದಲ್ಲಿನ ಖರ್ಚು ಕಡಿಮೆ ಮಾಡುವಂತೆ ಒತ್ತಾಯಿಸಿ ಟ್ರಂಪ್ ೨೦೧೮ರಲ್ಲಿ ವ್ಯಾಪಾರ ಸಮರ ಆರಂಭಿಸಿದ್ದರು.  ಇದೀಗ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗ ಅದೃಶ್ಯ ವೈರಿಯೊಂದು ಎದುರಾಗಿದೆ. ಅದು ಎಲ್ಲಿಂದ ಬಂತು ಎಂಬುದು ನಮಗೆ ತಿಳಿದಿದೆ. ಅದರ ಬಗ್ಗೆ ನಾವು ಜಾಸ್ತಿಯೇ ಮಾತನಾಡುತ್ತಿದ್ದೇವೆ. ಚೀನಾದ ಮೇಲೆ ಇಷ್ಟೊಂದು ಕಠಿಣ ನಿಲುವು ಸಾಧಿಸಿದ್ದು ನಾನು ಮಾತ್ರ ಎಂದು ಟ್ರಂಪ್ ಹೇಳಿದರು.

ಮಾನವ ನಿರ್ಮಿತ:
ಕೊರೋನಾ ವೈರಸ್ಸನ್ನು ಚೀನಾ ತನ್ನ ಪ್ರಯೋಗಾಲಯದಲ್ಲಿ ತಯಾರಿಸಿದೆ ಎಂದು ವಿವಿಧ ದೇಶಗಳು ಶಂಕಿಸುತ್ತಿರುವಾಗಲೇ ಫ್ರಾನ್ಸಿನ ನೊಬೆಲ್ ಪ್ರಶಸ್ತಿ ವಿಜೇತ ವೈದ್ಯಕೀಯ ವಿಜ್ಞಾನಿ ಲುಕ್ ಮಾಂಟೆಗ್ನೇರ್ ಅವರು ಇದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ತಯಾರಿಸಲಾಗಿದೆ ಎಂದು ಸ್ಪಷ್ಟವಾಗಿ ಇತ್ತೀಚೆಗೆ ಹೇಳಿದ್ದರು.

ಏಡ್ಸ್ಗೆ ಔಷಧ ಕಂಡುಹಿಡಿಯುವ ಪ್ರಯತ್ನದಲ್ಲಿ ಚೀನಾ ವೈರಸ್ ತಯಾರಿಸಿರಬಹುದು. ಅದು ಅಕಸ್ಮಾತಾಗಿ ಸೋರಿಕೆಯಾಗಿರಬಹುದು ಎಂದು ಅವರು ತಿಳಿಸಿದ್ದರು.

ಚೀನಾದ ವುಹಾನಿನಲ್ಲಿರುವ ನ್ಯಾಷನಲ್ ಬಯೋಸೇಫ್ಟಿ ಲ್ಯಾಬೋರೇಟರಿ ಮುಖ್ಯಸ್ಥ ಯುವಾನ್ ಜಿಮಿಂಗ್, ಯಾವುದೇ ವೈರಸ್ಸನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ. ನಮ್ಮ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬುದಕ್ಕೆ ಯಾರ ಬಳಿಯೂ ಸಾಕ್ಷ್ಯವಿಲ್ಲ ಎಂದು ಹೇಳಿದ್ದರು.

ಕೊರೋನಾವೈರ್ಸಿನಲ್ಲಿ ಏಡ್ಸ್, ಮಲೇರಿಯಾ ರೋಗಾಣು:
ಫ್ರಾನ್ಸಿನಲ್ಲಿ ಸಂದರ್ಶನ ನೀಡಿದ್ದ ಲುಕ್ ಮಾಂಟೆಗ್ನೇರ್, ಕೊರೋನಾ ವೈರಸ್ಸಿನಲ್ಲಿ ಏಡ್ಸ್ ಮತ್ತು ಮಲೇರಿಯಾ ವೈರಸ್ಸಿನ ವಂಶವಾಹಿನಿUಳು ಇವೆ. ವೈರಸ್ಸಿನ ಲಕ್ಷಣಗಳನ್ನು ನೋಡಿದರೆ ಇದು ನೈಸರ್ಗಿಕವಾಗಿ ಸೃಷ್ಟಿಯಾಗಿರಲು ಸಾಧ್ಯವಿಲ್ಲ. ಏಡ್ಸ್ಗೆ ಔಷಧ ಕಂಡುಹಿಡಿಯುವ ಪ್ರಯತ್ನವಾಗಿ ವುಹಾನ್ ಪ್ರಯೋಗಾಲಯ ಇದನ್ನು ತಯಾರಿಸಿರಬಹುದು. ಪ್ರಯೋಗದ ವೇಳೆ ಏನಾದರೂ ಸಮಸ್ಯೆಯಾಗಿ ಅದು ಸೋರಿಕೆಯಾಗಿರಬಹುದು ಎಂದು ಹೇಳಿದ್ದರು.

ಮಾಂಟೆಗ್ನೇರ್ ಅವರು ಏಡ್ಸ್ ವೈರಾಣುವಿನ ಶೋಧಕ್ಕಾಗಿಯೇ ೨೦೦೮ರಲ್ಲಿ ನೊಬೆಲ್ ಪಡೆದಿದ್ದಾರೆ. ಹೀಗಾಗಿ ಅವರ ಹೇಳಿಕೆಗೆ ಮಹತ್ವ ಬಂದಿತ್ತು.

No comments:

Advertisement