ವಿಶ್ವಾದ್ಯಂತ ೧೦ ಲಕ್ಷ ದಾಟಿದ
ಕೊರೋನಾ ಸೋಂಕು
೫೫,೦೦೦ ದಾಟಿದ
ಸಾವು, ಖ್ಯಾತ ಗಿಟಾರ್ವಾದಕ ಬಲಿ
ನವದೆಹಲಿ: ವಿಶ್ಯಾದ್ಯಂತ ೧೮೮ ರಾಷ್ಟ್ರಗಳನ್ನು ವ್ಯಾಪಿಸಿರುವ ಮಾರಕ ಕೊರೋನಾ ಸೋಂಕು ಜಗತ್ತಿನಲ್ಲಿ ೧೦,೪೦,೯೯೭
ಮಂದಿಯನ್ನು ಬಾಧಿಸಿದ್ದು, ೫೫,೧೯೫ ಮಂದಿಯನ್ನು ಬಲಿತೆಗೆದುಕೊಂಡಿದೆ. ನ್ಯೂಜೆರ್ಸಿ ಹಾಲ್
ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದ ಖ್ಯಾತ
ಜಾಜ್ ಗಿಟಾರ್ ವಾದಕ
ಜಾನ್ ’ಬಕಿ’ ಪಿಝಾರೆಲ್ಲಿ ಅವರು ತಮ್ಮ ೯೪ನೇ
ವಯಸ್ಸಿನಲ್ಲಿ ಕೊರೋನಾವೈರಸ್ಸಿಗೆ ಬಲಿಯಾಗಿದ್ದಾರೆ.
ಶ್ವೇತಭವನದಲ್ಲಿ ಹಲವಾರು ಮಂದಿ ಅಧ್ಯಕ್ಷರ ಎದುರು ಜಾಜ್ ಗಿಟಾರ್ ನುಡಿಸಿದ್ದ ಪಿಝಾರೆಲ್ಲಿ ಅವರು
ನ್ಯೂಜೆರ್ಸಿಯ ಸ್ಯಾಡ್ಲ್ ರೀವರ್ನ ತಮ್ಮ
ನಿವಾಸದಲ್ಲಿ ಕೋವಿಡ್-೧೯ ಪರಿಣಾಮವಾಗಿ ಬುಧವಾರ ಅಸುನೀಗಿದ್ದಾರೆ ಎಂದು 2020 ಏಪ್ರಿಲ್ 03ರ ಶುಕ್ರವಾರ ಪ್ರಕಟಿಸಲಾಯಿತು.
ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಅಮೆರಿಕ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದ್ದು ಕನಿಷ್ಠ ೨,೩೪,೪೬೨ ಮಂದಿ
ಸೋಂಕಿತರಿದ್ದರೆ, ಇಟಲಿ ಮತ್ತು
ಸ್ಪೇನ್ ಕೂಡಾ ೧,೦೦,೦೦೦
ರೋಗಿಗಳ ಸಂಖ್ಯೆಯನ್ನು ದಾಟಿದೆ. ನಂತರದ ಸ್ಥಾನದಲ್ಲಿರುವ ಜರ್ಮನಿಯಲ್ಲಿ ೮೪,೨೬೪ ಸೋಂಕಿತರಿದ್ದರೆ, ಚೀನಾವು ಕನಿಷ್ಠ ೮೨,೪೩೨ ಸೋಂಕಿತರನ್ನು ಕಂಡಿತ್ತು ಎಂದು ಹಾಪ್
ಕಿನ್ಸ್ ವಿಶ್ವ ವಿದ್ಯಾಲಯದ ಅಂಕಿ ಅಂಶಗಳು ಹೇಳಿದವು.
ವಿಶ್ವಾದ್ಯಂತ ಕೊರೋನಾ ಸೋಂಕು: ೧೦,೪೦,೯೯೭
ಕೊರೋನಾದಿಂದ ಸಾವು: ೫೫,೧೯೫
ಚೇತರಿಸಿಕೊಂಡವರು: ೨,೨೨,೩೩೨
ಅತ್ಯಧಿಕ ಸೋಂಕು: ಅಮೆರಿಕ: ೨,೪೫,೪೪೨,
ಸಾವು ೬,೦೯೯
ಸ್ಪೇನ್ ಸೋಂಕು: ೧,೧೭,೭೧೦, ಸಾವು
೧೦,೯೩೫
ಇಟಲಿ
ಸೋಂಕು: ೧,೧೫,೨೪೨, ಸಾವು
೧೩,೯೧೫
ಜರ್ಮನಿ ಸೋಂಕು ೮೭,೨೪೪,
ಸಾವು ೧,೧೩೮
ಚೀನಾ
ಸೋಂಕು: ೮೧,೬೨೦,
ಸಾವು ೩,೩೨೨
ಭಾರತ
ಸೋಂಕು: ೨,೫೬೭,
ಸಾವು ೭೨
*ಶುಕ್ರವಾರ ಒಂದೇ
ದಿನ ಸ್ಪೇನಿನಲ್ಲಿ ೫೮೭
ಮತ್ತು ಇಂಗ್ಲೆಂಡಿನಲ್ಲಿ ೬೮೪
ಸಾವುಗಳು ಸಂಭವಿಸಿವೆ.
(ಅಂಕಿ
ಅಂಶಗಳು ವರ್ಲ್ಡೋಮೀಟರ್ ಅಂಕಿ
ಅಂಶಗಳನ್ನು ಆಧರಿಸಿವೆ.)
No comments:
Post a Comment