‘ಲಾಜಿಸ್ಟಿಕ್ಸ್’ ರಹಿತ ಮೆಜೆಸ್ಟಿಕ್..!
ಇದು ಸುವರ್ಣನೋಟ
ಕೊರೋನಾವೈರಸ್ ಪ್ರಸಾರಕ್ಕೆ ತಡೆ ಹಾಕಲು ಸರ್ಕಾರ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರೂ, ರಸ್ತೆಗಳಲ್ಲಿ ಜನಸಂಚಾರ ನಿಂತಿಲ್ಲ. ಬೆಂಗಳೂರಿನ ಪಾದರಾಯನಪುರ ಮತ್ತು ಬಾಪೂಜಿನಗರದಲ್ಲಿ ರಸ್ತೆಗೆ ಜನರ ‘ಪಾದಾರ್ಪಣೆ’ ತಡೆಯಲು ‘ಲಾಕ್ ಡೌನ್’ ನಡುವೆಯೇ ‘ಸೀಲ್ ಡೌನ್’ ಮಾಡಬೇಕಾದ ಪ್ರಸಂಗ ಬಂದಿದೆ. ಆದರೆ ‘ಮೆಜೆಸ್ಟಿಕ್’ ಪ್ರದೇಶ ಮಾತ್ರ ಬಹುತೇಕ ‘ಲಾಕ್ ಡೌನ್’ ಜಾರಿಗೆ ಬಂದಂದಿನಿಂದಲೂ ವಸ್ತುಶಃ ‘ಲಾಜಿಸ್ಟಿಕ್ಸ್’ ರಹಿತ ಪ್ರದೇಶವಾಗಿ ಮಾರ್ಪಟ್ಟಿದೆ. ‘ಲಾಜಿಸ್ಟಿಕ್ಸ್’ ರಹಿತ ‘ಮೆಜೆಸ್ಟಿಕ್’ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಸಲ್ಪಟ್ಟದ್ದು ಹೀಗೆ. (ಸಮೀಪ ನೋಟಕ್ಕಾಗಿ ಫೊಟೋಗಳನ್ನು ಕ್ಲಿಕ್ ಮಾಡಿರಿ)
No comments:
Post a Comment