Thursday, April 16, 2020

ಅಫ್ಘಾನ್ ಪಡೆಗಳಿಂದ ನಂಗರಹಾರ್ ಪ್ರಾಂತದಲ್ಲಿ ಜೈಶ್ ತರಬೇತಿ ಶಿಬಿರ ಪತ್ತೆ

ಅಫ್ಘಾನ್ ಪಡೆಗಳಿಂದ ನಂಗರಹಾರ್ ಪ್ರಾಂತದಲ್ಲಿ ಜೈಶ್ ತರಬೇತಿ ಶಿಬಿರ ಪತ್ತೆ
ನವದೆಹಲಿ: ಜಾಗತಿಕ ಭಯೋತ್ಪಾದಕ ಸಂಘಟನೆ ಜೈಶ್--ಮೊಹಮ್ಮದ್ ಕಾರ್ಯಕರ್ತರು ಅಫ್ಘಾನಿಸ್ಥಾನದ ನಂಗರಹಾರ್ ಪ್ರಾಂತದಲ್ಲಿ ಇರುವುದು ಪತ್ತೆಯಾಗಿದ್ದು ಇದರೊಂದಿಗೆ ಜೈಶ್ ಭಯೋತ್ಪಾದಕರು ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿರುವುದಾಗಿ ಭಾರತೀಯ ಗುಪ್ತಚರ ಸಂಸ್ಥೆಗಳು ಮಾಡಿದ್ದ ಅಂದಾಜು ದೃಢಪಟ್ಟಿದೆ.

ಕಾಶ್ಮೀರಕ್ಕೆ ನುಗ್ಗಿಸುವ ಸಲುವಾಗಿ ಆಯ್ದ ಭಯೋತ್ಪಾದಕ ಗುಂಪುಗಳಿಗೆ ಸಮರಗ್ರಸ್ಥ ಅಫ್ಘಾನಿಸ್ಥಾನದಲ್ಲಿ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್) ತರಬೇತಿ ಆರಂಭಿಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಸುಳಿವು ನೀಡಿದ್ದವು.

ನಂಗರಹಾರ್ ಪ್ರಾಂತದ ಮುಹಮಂಡ್ ದಾರಾದಲ್ಲಿ ಅಫ್ಘಾನಿಸ್ಥಾನ ಪಡೆಗಳು ತಾಲೀಬಾನ್ ಶಿಬಿರ ನಡೆಯುತ್ತಿದೆ ಎಂಬ ಗುಮಾನಿಯಲ್ಲಿ ದಾಳಿ ನಡೆಸಿದ್ದವು. ಆಗ ಭೀಕರ ಘರ್ಷಣೆ ನಡೆದಿತ್ತು. ಕೊನೆಗೆ ಏಪ್ರಿಲ್ ೧೩-೧೪ರ ರಾತ್ರಿ ಅಫ್ಘಾನಿಸ್ಥಾನದ ನಾಲ್ವರು ಭದ್ರತಾ ಸಿಬ್ಬಂದಿಯ ಬಲಿದಾನದ ಬಳಿಕ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಆಗ ಕದನದಲ್ಲಿ ಹತರಾದ ೧೫ ಜನರಲ್ಲಿ ಮಂದಿ ಮಾತ್ರವೇ ಅಫ್ಘನ್ ತಾಲೀಬಾನ್ ಮಂದಿಯಾಗಿದ್ದು ಉಳಿದ ೧೦ ಮಂದಿ ಜಮ್ಮು-ಕಾಶ್ಮೀರ ಸಮರಕ್ಕಾಗಿ ತರಬೇತಿ ಪಡೆಯುತ್ತಿದ್ದ ಜೈಶ್--ಮೊಹಮ್ಮದ್ ಭಯೋತ್ಪಾದಕರು ಎಂಬುದು ಖಚಿತವಾಗಿದೆ. ಗುಂಡಿನ ಘರ್ಷಣೆಯಲ್ಲಿ ಒಬ್ಬ ಜೈಶ್ ಭಯೋತ್ಪಾದಕ ಬದುಕಿದ್ದು ಆತನನ್ನು ಸೆರೆ ಹಿಡಿಯಲಾಗಿದೆ.

ದೆಹಲಿ ಮತ್ತು ಕಾಬೂಲಿನ ಭಯೋತ್ಪಾದನೆ ನಿಗ್ರಹ ಮೂಲಗಳ ಪ್ರಕಾರ ಮಸೂದ್ ಅಜರ್ ನಿಂದ ಸ್ಥಾಪನೆಗೊಂಡಿರುವ ಜೈಶ್--ಮೊಹಮ್ಮದ್ ದೇವಬಂದಿ ಮತ್ತು ತಾಲಿಬಾನ್ ಸಹಯೋಗದೊಂದಿಗೆ ಮುಸ್ತಾಖಿಲ್ ಹೆಸರಿನ ಮೂರು ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಎನ್ನಲಾಗಿದ್ದು, ನಂಗರಹಾರ ಪ್ರಾಂತದಲ್ಲಿ ನಾಲ್ಕು ಶಿಬಿರಗಳನ್ನು ನಡೆಸುತ್ತಿತ್ತು ಎನ್ನಲಾಗಿದೆ.
ಪಾಕಿಸ್ತಾನದ
ಜೆಇಎಂ ಶಿಬಿರಗಳಲ್ಲಿ ಹಖ್ಖಾನಿ ಜಾಲಕ್ಕೆ ತರಬೇತಿ ನೀಡಲಾಗುತ್ತಿದೆ ಎನ್ನಲಾಗಿದೆ.

ಭಾರತಕ್ಕೆ ಬೇಕಾಗಿರುವ ಮೌಲಾನಾ ಮಸೂದ್ ಅಜರ್ ಅನಾರೋಗ್ಯದ ಕಾರಣ ಅಶಕ್ತನಾಗಿದ್ದು ಪಾಕಿಸ್ತಾನದ ಬಹವಾಲಪುರದ ಮರ್ಕಜ್--ಉಸ್ಮಾನ್--ಅಲಿಯಲ್ಲಿನ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ವಾಸವಾಗಿದ್ದಾನೆ ಎಂದು ಹೇಳಲಾಗಿದೆ. ಅಜರ್ ಸಹೋದರ ಮುಫ್ತಿ ರೌಫ್ ಅಸ್ಘರ್ ಈಗ ಜೈಶ್ ಭಯೋತ್ಪಾದಕ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ.

ರೌಫ್ ಅಸ್ಘರನ ಪುತ್ರ ವಲಿ ಅಜರ್ಗೆ ಕೂಡಾ ಅಫ್ಘನ್ ಸಮರದಲ್ಲಿ ನೇತೃತ್ವ ವಹಿಸಿದ್ದ ಹರ್ಕತ್ -ಉಲ್-ಮುಜಾಹಿದೀನ್ ನಾಯಕ ಮುಫ್ತಿ ಅಸ್ಘರ್ ಕಾಶ್ಮೀರಿ ನೇತೃತ್ವದ ತರಬೇತಿ ಶಿಬಿರಗಳಲ್ಲಿ ತರಬೇತಿ ನೀಡಲಾಗಿದೆ ಎನ್ನಲಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಉಡಾವಣಾ ಶಿಬಿರಗಳ ಭಾವಚಿತ್ರಗಳ ಸಾಕ್ಷ್ಯ ನಮ್ಮಲ್ಲಿದೆ ಎಂದೂ ಅಧಿಕಾರಿಯೊಬ್ಬರು ಪತ್ರಿಕಾಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

No comments:

Advertisement