Sunday, April 12, 2020

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಗಗನಗಾಮಿ  ಕೃಷ್ಣಮೃಗ..!
(ಇದು ಸುವರ್ಣ ನೋಟ)
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮೈದನಹಳ್ಳಿ ಸಮೀಪದ ಜಯಮಂಗಲಿ   ಕೃಷ್ಣಮೃಗ ಅಭಯಾರಣ್ಯ  ನಿಸರ್ಗಪ್ರಿಯರ ಪ್ರೀತಿಯ ತಾಣ.  ಕೃಷ್ಣ ಮೃಗಗಳ (ಬ್ಲಾಕ್ ಬಕ್ಸೌಂದರ್ಯವನ್ನು ಕಣ್ತುಂಬಿಕೊಳ್ಳಲೆಂದೇ ಇಲ್ಲಿಗೆ ಬರುವ ಮಂದಿ ಬಹಳಕೆಲ ಸಮಯದ   ಹಿಂದಿನ ಕಥೆ ಹಿರಿಯ ಪತ್ರಿಕ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅದೊಂದು ದಿನ  ಕೃಷ್ಣ ಮೃಗಗಳನ್ನು ಶೂಟ್ ಮಾಡಬೇಕೆಂದು ಬಯಸಿ
 ಬೆಂಗಳೂರಿನಿಂದ ಮೈದನಹಳ್ಳಿಯತ್ತ ತಮ್ಮ ಕ್ಯಾಮರಾಸ್ತ್ರವನ್ನು ಹೆಗಲಿಗೇರಿಸಿಕೊಂಡು ಹೊರಟರು. 


ಅವರ
 ಗೆಳೆಯರಾದ ಇತರ ಮೂವರು   ಛಾಯಾಗ್ರಾಹಕರು ಮೈಸೂರಿನಿಂದ ಅಲ್ಲಿಗೆ ಪಯಣಿಸಿದರು.
ಮಧುಗಿರಿ ತಲುಪಿ ಮೈದನಹಳ್ಳಿಗೆ ಹೋದ   ನಾಲ್ಕೂ ಜನ ಜಯಮಂಗಲಿ ಕೃಷ್ಣಮೃಗ    ಅಭಯಾರಣ್ಯದಲ್ಲಿ ಸುತ್ತಾಡಿದರು.


 ಕೆಲವು ಕೃಷ್ಣಮೃಗಗಳನ್ನು ತಮ್ಮ ಕ್ಯಾಮರಾಗಳ ಒಳಕ್ಕೆ ಇಳಿಸಿಕೊಂಡರು.  ಅಲ್ಲಿನ ಕೃಷ್ಣ ಮೃಗಗಳಿಗೆ ಜನರನ್ನು ಕಂಡರೆ ಭಯ. ಏಕೆಂದರೆ ಕೆಲವರು ಅವುಗಳನ್ನು ಬೇಟೆಯಾಡುವುದೂ ಉಂಟಂತೆಹೀಗಾಗಿ ಜನರನ್ನು ಕಂಡರೆ  ಕಾಲಿಗೆ  ಬುದ್ಧಿ ಹೇಳಿ ಪರಾರಿಯಾಗುತ್ತವೆ.

 
ಬಹಳಷ್ಟು ಸುತ್ತಾಡಿದ ಬಳಿಕ ಸುವರ್ಣ ಬಂಡೆಯೊಂದರ ಸಮೀಪ ಆಯಾಸ       ಪರಿಹರಿಸಿಕೊಳ್ಳಲೆಂದು ಕುಳಿತಿದ್ದರು.
ಅಷ್ಟರಲ್ಲೇ ಕೃಷ್ಣಮೃಗಗಳ ಗುಂಪೊಂದು ನಾಗಾಲೋಟದಲ್ಲಿ ಓಡುತ್ತಾ ಬರುವುದು ಕಾಣಿಸಿತು. ಸುವರ್ಣರ ಒಳಗಿನ ಛಾಯಾಗ್ರಾಹಕ ಎದ್ದು ಕ್ಯಾಮರಾ ಕೈಗೆ ತೆಗೆದುಕೊಂಡು          ಚಕ ಚಕನೆ ಒಂದಷ್ಟು ‘ಶೂಟ್’ ಮಾಡಿಯೇ ಬಿಟ್ಟ.   ಅಷ್ಟೆ… ಗೆಳೆಯರಾರಿಗೂ ಸಿಗದೇ ಇದ್ದ ಗಗನಗಾಮಿ ಕೃಷ್ಣಮೃಗದ ಅಪೂರ್ವ ಚಿತ್ರ ಕ್ಯಾಮರಾದಲ್ಲಿ ಸೆರೆಯಾಗಿ ಬಿಟ್ಟಿತ್ತು ಸೊಬಗನ್ನು ಆಸ್ವಾದಿಸಬೇಕೆಂದರೆ  ಇಲ್ಲಿರುವ ಚಿತ್ರಗಳನ್ನು ಕ್ಲಿಕ್ ಮಾಡಿರಿ.

No comments:

Advertisement