ಗ್ರಾಹಕರ ಸುಖ-ದುಃಖ
My Blog List
Saturday, April 11, 2020
ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ವಿಸ್ತರಣೆ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ನಿರ್ಧಾರ
ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ವಿಸ್ತರಣೆ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ನಿರ್ಧಾರ
ಮುಂಬೈ: ಕೋವಿಡ್-೧೯ ದಿಗ್ಬಂಧನವನ್ನು (ಲಾಕ್ ಡೌನ್) ಏಪ್ರಿಲ್ ೩೦ರವರೆಗೆ ವಿಸ್ತರಿಸಲು ಮಹಾರಾಷ್ಟ್ರ ಸರ್ಕಾರ 2020 ಏಪ್ರಿಲ್ 11ರ ಶನಿವಾರ ನಿರ್ಧರಿಸಿದ್ದು, ಒಡಿಶಾ ಮತ್ತು ಪಂಜಾಬಿನ ಬಳಿಕ ದಿಗ್ಬಂಧನ ವಿಸ್ತರಿಸಿದ ಮೂರನೇ ರಾಜ್ಯವಾಗಿದೆ. ಬೆನ್ನಲ್ಲೇ ಕರ್ನಾಟಕ
ಮತ್ತು ತೆಲಂಗಾಣ ಕೂಡಾ ದಿಗ್ಬಂಧನವನ್ನು ಮಾಸಾಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದವು.
ದಿಗ್ಬಂಧನ ವಿಸ್ತರಣೆಯ ವಿಚಾರವನ್ನು ಇಲ್ಲಿ ಪ್ರಕಟಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಜನರು ಸಹಕರಿಸದೇ ಇದ್ದಲ್ಲಿ ಇದು ಮತ್ತೆ ವಿಸ್ತರಣೆ ಆಗಬಹುದು ಎಂದೂ ಒತ್ತಿ ಹೇಳಿದರು.
’ಪರಿಸ್ಥಿತಿ ನಿಯಂತ್ರಣದಲ್ಲಿ ಇರುವಂತೆ ಕಾಣುತ್ತಿದೆ, ಆದರೆ ನಾವು ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ನುಡಿದರು.
’ಕೊರೋನಾಸೋಂಕನ್ನು ತಡೆಯುವಲ್ಲಿ ಜನರು ಸಹಕರಿಸದೇ ಇದ್ದರೆ ದಿಗ್ಬಂಧನವು ಏಪ್ರಿಲ್ ೩೦ರ ಬಳಿವೂ ಮುಂದುವರೆಯಬಹುದು’ ಎಂದು ಉದ್ಧವ್ ಠಾಕ್ರೆ ಜನರನ್ನು ಉದ್ದೇಶಿಸಿ ಮಾಡಿದ ವಿಡಿಯೋ ಮೂಲಕ ಮಾಡಿದ ಭಾಷಣದಲ್ಲಿ ಹೇಳಿದರು.
ಮುಂಬೈಯಲ್ಲಿರುವ ಶೇಕಡಾ ೬೦-೭೦ರಷ್ಟು ಕೊರೋನಾ ಪಾಸಿಟಿವ್ ರೋಗಿಗಳಲ್ಲಿ ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ರೋಗಲಕ್ಷಣಗಳು ಕಾಣಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.
Labels:
Coronavirus,
Flash News,
India,
Lockdown,
Maharastra,
Nation,
News,
ಕೊರೋನಾವೈರಸ್,
ರಾಷ್ಟ್ರೀಯ,
ಲಾಕ್ಡೌನ್,
ಸುದ್ದಿ
Subscribe to:
Post Comments (Atom)
No comments:
Post a Comment