Saturday, April 11, 2020

ಲಾಕ್ ಡೌನ್: ಷರತ್ತಿನ ವಿಸ್ತರಣೆಗೆ ಪ್ರಧಾನಿ ಮೋದಿ ಒಲವು

ಲಾಕ್ ಡೌನ್: ಷರತ್ತಿನ ವಿಸ್ತರಣೆಗೆ ಪ್ರಧಾನಿ ಮೋದಿ ಒಲವು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಹನ ಕಾಲದಲ್ಲಿ ಒಂದೇ ವಾಕ್ಯದ ಮೂಲಕ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಷರತ್ತುಬದ್ಧವಾಗಿ ವಿಸ್ತರಿಸುವ ಸೂಚನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಮೂಲಗಳು 2020 ಏಪ್ರಿಲ್ 11ರ ಶನಿವಾರ ಹೇಳಿದವು.

ಮುಖ್ಯಮಂತ್ರಿಗಳ ಜೊತೆ ಸಂವಹನ ನಡೆಸಿರುವ ಪ್ರಧಾನಿಯವರು ಜೀವಗಳನ್ನು ಮಾತ್ರವೇ ಅಲ್ಲ, ಜೀವನಗಳನ್ನು ಕೂಡಾ ರಕ್ಷಿಸುವುದು ಈಗಿನ ಹೊಸ ಸವಾಲು ಎಂಬ ವಿಚಾರಕ್ಕೆ ಒತ್ತು ನೀಡಿದ್ದಾರೆ ಎಂದು ಮೂಲಗಳು ವ್ಯಾಖ್ಯಾನಿಸಿದವು.

ಪ್ರಧಾನಿ ಮೋದಿಯವರುಹಿಂದೆ ಸರ್ಕಾರದ ಗುರಿಜಾನ್ ಹೈ ತೊ ಜಹಾನ್ ಹೈ’ (ಜೀವ ಇದ್ದರೆ ಜೀವನ ಇದೆ) ಎಂಬುದಾಗಿತ್ತು. ಆದರೆ ಈಗ ಅದುಜಾನ್ ಭೀ ಜಹಾನ್ ಭೀ’ (ಉಳಿಸಿ ಜೀವ ಮತ್ತು ಜೀವನ)’ ಎಂಬುದಾಗಿದೆ. ಪ್ರಧಾನಿಯವರ ಒಂದೇ ಮಾತು ಕೇಂದ್ರದ ಧೋರಣೆಯಲ್ಲಿನ ವ್ಯತ್ಯಾಸವನ್ನು ತೋರಿಸುತ್ತದೆ. ಪ್ರಧಾನಿ ಮೋದಿಯವರು ಹೆಚ್ಚು ವಿವರಿಸಲಿಲ್ಲ ಎಂದು ಪ್ರಧಾನಿ ಕಚೇರಿಯ ಅಧಿಕಾರಿ ಹೇಳಿದರು.

 ಪ್ರಧಾನಿಯವರು ಇನ್ನಷ್ಟು ಸಮಾಲೋಚನೆಗಳ ಬಳಿಕ ಏಪ್ರಿಲ್ ೧೪ರ ವೇಳೆಗೆ ರಾಷ್ಟ್ರದ ಕಾರ್‍ಯತಂತ್ರವನ್ನು ಅಂತಿಮಗೊಳಿಸಲಿದ್ದಾರೆ ಎಂದು ಅವರು ನುಡಿದರು.

ಸಂವಹನ ಕಾಲದಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರದಂತಹ ವಿರೋಧ ಪಕ್ಷಗಳ ಆಳ್ವಿಕೆಯ ಬಹುತೇಕ ಮುಖ್ಯಮಂತ್ರಿಗಳು ದಿಗ್ಬಂಧನ (ಲಾಕ್ ಡೌನ್) ವಿಸ್ತರಣೆಗೆ ಆಗ್ರಹಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಎನ್‌ಡಿಎ ಮುಖ್ಯಮಂತ್ರಿಗಳು ನಿರ್ಧಾರವನ್ನು ಪ್ರಧಾನಿ ಮೋದಿಯವರಿಗೆ ಬಿಟ್ಟಿದ್ದರು.

ಹಿನ್ನೆಲೆಯಲ್ಲಿ ಬಾರಿ ಲಾಕ್ ಡೌನ್ ವಿಸ್ತರಣೆಯು ಷರತ್ತುಬದ್ಧವಾಗಿರುವ ಸಾಧ್ಯತೆ ಇದೆ. ತನ್ಮೂಲಕ ನಿರ್ಣಾಯಕ ಕ್ಷೇತ್ರಗಳಲ್ಲಿ ಆರ್ಥಿಕತೆಗೂ ಒತ್ತು ಸಿಗುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಮಂತ್ರಿ ಕಾರ್‍ಯಾಲಯದ ಇನ್ನೊಬ್ಬ ಅಧಿಕಾರಿ ನುಡಿದರು.

ರಾಷ್ಟ್ರದಲ್ಲಿ ರೋಗ ಹರಡಲು ಆರಂಭವಾಗುವುದಕ್ಕೆ ಸಾಕಷ್ಟು ಮುನ್ನವೇ ರಾಷ್ಟ್ರೀಯ ದಿಗ್ಬಂಧನ ಹೇರಿದ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಬ್ಲಾವ್ಟನಿಕ್ ಸ್ಕೂಲ್ ಆಫ್ ಗವರ್ನ್‌ಮೆಂಟ್ ನಡೆಸಿರುವ ಅಧ್ಯಯನದ ಪ್ರಕಾರ ಭಾರತವು ಬೇರೆ ಯಾವುದೇ ರಾಷ್ಟ್ರವು ದಿಗ್ಬಂಧನ ಹೇರುವುದಕ್ಕೆ ಮುಂಚಿತವಾಗಿಯೇ ಮಾರ್ಚ್ ೨೫ರಂದು ದಿಗ್ಬಂಧನ ಜಾರಿಗೊಳಿಸಿತ್ತು.

ಕ್ರಮವು ರೋಗ ಹರಡದಂತೆ ತಡೆಯುವಲ್ಲಿ ನೆರವಾಗಿದೆ. ರಾಷ್ಟ್ರವ್ಯಾಪಿ ರೋಗಹತೋಟಿ ಕ್ರಮ ಜಾರಿಗೊಳಿಸದೇ ಇದ್ದಲ್ಲಿ ಏಪ್ರಿಲ್ ೧೫ರ ವೇಳೆಗೆ ದೇಶದಲ್ಲಿ . ಲಕ್ಷ ಕೋವಿಡ್ -೧೯ ಪ್ರಕರಣಗಳು ಆಗಬಹುದು ಎಂದು ಸರ್ಕಾರ ಅಂದಾಜು ಮಾಡಿತ್ತು. ಲಾಕ್ ಡೌನ್ ಜಾರಿಗೊಳಿಸದೆ, ಕೇವಲ ಹತೋಟಿ ಕ್ರಮಗಳನ್ನು ಕೈಗೊಂಡರೆ ಪ್ರಕರಣಗಳು . ಲಕ್ಷಕಕ್ಕೆ ಇಳಿಯಬಹುದು ಎಂಬುದಾಗಿ ಅಂದಾಜು ಮಾಡಲಾಗಿತ್ತು ಎಂದು ಆರೋಗ್ಯ ಸಚಿವಾಲಯವು ಪ್ರಧಾನಿಯವರ ವಿಡಿಯೋ ಕಾನ್ಫರೆನ್ಸ್ ಬಳಿಕ ತಿಳಿಸಿತು.

ಸರ್ಕಾರವು ಮುಂಚಿತವಾಗಿಯೇ ಕ್ರಮ ಕೈಗೊಂಡದ್ದರಿಂದ ಭಾರತದಲ್ಲಿ ಏಪ್ರಿಲ್ ೧೧ರ ವೇಳೆಗೆ ಕೇವಲ ,೪೪೭ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿತು.

ಜಗತ್ತಿನಾದ್ಯಂತ ,೦೦,೦೦೦ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಕೊರೋನಾವೈರಸ್ ಹರಡುವಿಕೆಯನ್ನು ಭಾರತದಲ್ಲಿ ತಡೆಯುವಲ್ಲಿ ಲಾಕ್ ಡೌನ್ ಬೀರಿದ ಪರಿಣಾಮವನ್ನು ಗಮನಿಸಿಯೇ ಬಹುತೇಕ ಮುಖ್ಯಮಂತ್ರಿಗಳು ಇನ್ನೆರಡು ವಾರ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಸಲಹೆ ಮಾಡಿದ್ದಾರೆ.

ಈಗಿನ ಹಂತದಲ್ಲಿ ದಿಗ್ಬಂಧನವನ್ನು ಎರಡು ವಾರಗಳ ಕಾಲ ಸಾರಾಸಗಟು ವಿಸ್ತರಿಸುವುದು ಸರ್ಕಾರಕ್ಕೆ ಕೈಗೊಳ್ಳಲು ಸಾಧ್ಯವಿರುವ ಅತ್ಯಂತ ಸುಲಭದ ಕ್ರಮ ಎಂಬ ಅಭಿಪ್ರಾಯವಿದೆ. ಆದರೆ ಜೀವಹಾನಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೆಯೇ ರಾಷ್ಟ್ರದ ಆರ್ಥಿಕತೆ ಮತ್ತು ಜನರ ಬದುಕನ್ನು ಮತ್ತು ಹಳಿಗೆ ತರುವುದು ಹೆಚ್ಚು ಕಷ್ಟದ ಕೆಲಸ. ಕಾರ್‍ಯ ಸಾಧಿಸುವ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್‍ಯಮಗ್ನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೧೭,೨೫,೮೧೨, ಸಾವು ,೦೪,೯೦೧

ಚೇತರಿಸಿಕೊಂಡವರು- ,೯೦,೨೦೮

ಅಮೆರಿಕ ಸೋಂಕಿತರು ,೦೫,೭೭೮, ಸಾವು ೧೮,೮೭೦

ಸ್ಪೇನ್ ಸೋಂಕಿತರು ,೬೧,೮೫೨, ಸಾವು ೧೬,೩೫೩

ಇಟಲಿ ಸೋಂಕಿತರು ,೪೭,೫೭೭, ಸಾವು ೧೮,೮೪೯

ಜರ್ಮನಿ ಸೋಂಕಿತರು ,೨೨,೮೫೫, ಸಾವು ,೭೩೬

ಚೀನಾ ಸೋಂಕಿತರು ೮೧,೯೫೩, ಸಾವು ,೩೩೯

ಇಂಗ್ಲೆಂಡ್ ಸೋಂಕಿತರು ೭೮,೯೯೧, ಸಾವು ,೮೭೫

ಸ್ಪೇನಿನಲ್ಲಿ ೨೭೨, ಬೆಲ್ಜಿಯಂನಲ್ಲಿ ೩೨೭, ಇಂಗ್ಲೆಂಡಿನಲ್ಲಿ ೯೧೭, ಒಟ್ಟಾರೆ ವಿಶ್ವಾದ್ಯಂತ ,೨೧೭ ಮಂದಿ ಒಂದೇ ದಿನ ಹೊಸದಾಗಿ ಸಾವನ್ನಪ್ಪಿದ್ದಾರೆ.

No comments:

Advertisement