Thursday, April 30, 2020

ರಿಲಯನ್ಸ್ ಇಂಡಸ್ಟೀಸ್ ಕೆಲ ನೌಕರರಿಗೆ ವೇತನ ಕಡಿತ

 ರಿಲಯನ್ಸ್  ಇಂಡಸ್ಟೀಸ್  ಕೆಲ  ನೌಕರರಿಗೆ  ವೇತನ ಕಡಿತ
ನವದೆಹಲಿ: ಕೋರೋನಾವೈರಸ್ ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮವಾಗಿ ಇಂಧನ ಬೇಡಿಕೆ ಕುಗ್ಗಿರುವ ಹಿನ್ನೆಲೆಯಲ್ಲಿ ತನ್ನ ಹೈಡ್ರೋ ಕಾರ್ಬನ್ ವಿಭಾಗದ ಕೆಲವು ನೌಕರರಿಗೆ ಶೇಕಡಾ ೧೦ರಷ್ಟು ವೇತನ ಕಡಿತಗೊಳಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್   2020 ಏಪ್ರಿಲ್  30ರ ಗುರುವಾರ ಪ್ರಕಟಿಸಿತು.

ಕಂಪೆನಿಯ ಆಡಳಿತ ಮಂಡಳಿ ಸದಸ್ಯರೂ ತಮ್ಮ ವೇತನದ ಶೇಕಡಾ ೩೦ರಿಂದ ೫೦ರಷ್ಟನ್ನು ತ್ಯಜಿಸಲಿದ್ದಾರೆ ಮತ್ತು ಕಂಪೆನಿಯ ಅಧ್ಯಕ್ಷ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಅವರು ಸಂಪೂರ್ಣ ವೇತನವನ್ನು ಪರಿಹಾರಕ್ಕಾಗಿ ತ್ಯಜಿಸಲಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯಕಾರಿ ನಿರ್ದೇಶಕ ಹಿತಲ್ ಆರ್ ಮೇಸ್ವಾನಿ ಅವರು ಸಹಿ ಮಾಡಿರುವ ಪತ್ರ ತಿಳಿಸಿದೆ.

ವೇತನ ಕಡಿತವು ವಾರ್ಷಿಕ ೧೫ ಲಕ್ಷ ರೂಪಾಯಿಗಳಿಗಿಂತ ಹೆಚ್ಚು  ವರಮಾನ ಹೊಂದಿರುವ ಹೈಡ್ರೋಕಾರ್ಬನ್ ವಿಭಾಗದ ನೌಕರರಿಗೆ ಅನ್ವಯಿಸುತ್ತದೆ. ಇದಕ್ಕಿಂತ ಕಡಿಮೆ ವರಮಾನ ಹೊಂದಿರುವವರಿಗೆ ನಿರ್ಧಾರದಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಪತ್ರ ಸ್ಪಷ್ಟ ಪಡಿಸಿದೆ.

ಸಂಸ್ಕರಿತ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್ಸ್ ಬೇಡಿಕೆ ಕುಸಿದಿರುವುದರಿಂದ ಹೈಡ್ರೋಕಾರ್ಬನ್ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಇದು ನಮ್ಮ ಹೈಡ್ರೋಕಾರ್ಬನ್ಸ್ ವ್ಯವಹಾರದ ಮೇಲೆ ಒತ್ತಡ ಉಂಟು ಮಾಡಿದ್ದು ಎಲ್ಲ ರಂಗಗಳಲ್ಲಿ ವೆಚ್ಚ ಇಳಿಕೆಯನ್ನು ಗರಿಷ್ಠಗೊಳಿಸುವ ಅಗತ್ಯವನ್ನು ಸೃಷ್ಟಿಸಿದೆ ಎಂದು ಪತ್ರ ಹೇಳಿದೆ.

ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಪಾವತಿ ಮಾಡಲಾಗುವ ವಾರ್ಷಿಕ ನಗದು ಬೋನಸ್ ಮತ್ತು ಸಾಧನೆ ಆಧಾರಿತ ಪ್ರೋತ್ಸಾಹಕಗಳನ್ನು ಕೂಡಾ ಮುಂದೂಡಲಾಗಿದೆ ಎಂದು ಪತ್ರ ಹೇಳಿದೆ.
ಕಂಪೆನಿಯು ಆರ್ಥಿಕ ಮತ್ತು ವ್ಯವಹಾರ ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುವುದು ಮತ್ತು ವ್ಯವಹಾರದ ಸಂಪಾದನಾ ಸಾಮರ್ಥ್ಯಯ ವೃದ್ಧಿಗೆ ನಿರಂತರ ಯತ್ನಿಸುವುದು ಹಾಗೂ ಸ್ಥಿತಿಗತಿಗಳ ಮರುಮೌಲ್ಯಮಾಪನ ಮಾಡುವುದು ಎಂದೂ ಪತ್ರ ಹೇಳಿದೆ.

ವೇತನ ಕಡಿತ ನಿರ್ಧಾರವು ರಿಲಯನ್ಸ್ ಕಂಪೆನಿಯ ಇತರ ವಿಭಾಗಗಳ ಮೇಲೆ ಪರಿಣಾಮವಾಗಿದೆಯೇ ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಕಂಪೆನಿಯ ಟೆಲಿಕಾಂ ಘಟಕವಾಗಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಮೇಲೆ ಗುರುವಾರದ ನಿರ್ಧಾರದಿಂದ ಯಾವುದೇ ಪರಿಣಾಮ ಆಗಿಲ್ಲ ಎಂದು ಮೂರು ಮೂಲಗಳು ತಿಳಿಸಿವೆ.

೨೦೨೦ರ ಮಾರ್ಚ್ ವೇಳೆಗೆ ತನ್ನ ಸಾಲ ಮರುಪಾವತಿ ಬದ್ಧತೆಯನ್ನು  ಸ್ವಲ್ಪಾಂಶವನ್ನು ಈಡೇರಿಸುವ ಸಲುವಾಗಿ ೩೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಮೊದಲ ಹಕ್ಕುಗಳ ಷೇರುಗಳನ್ನು ಮಾರುವ bgಜಿge ಪರಿಗಣಿಸುವುದಾಗಿ ರಿಲಯನ್ಸ್ ವಾರ ತಿಳಿಸಿತ್ತು. ಕಳೆದ ವರ್ಷಾಂತ್ಯದ ವೇಳೆಗೆ ರಿಲಯನ್ಸ್ ಸಾಲ ಬಾಕಿ ಮೊತ್ತ ೪೩ ಬಿಲಿಯನ್ (೪೩೦೦ ಕೋಟಿ) ಡಾಲರುಗಳಷ್ಟಿತ್ತು..

ಕೊರೋನಾವೈರಸ್ ಬಿಕ್ಕಟ್ಟು ಹಾಗೂ ಸೋಂಕನ್ನು ತಡೆಯಲು ವಿಧಿಸಲಾಗಿರುವ ಪ್ರವಾಸೀ ನಿರ್ಬಂಧಗಳ ಜಾರಿಯ ಪರಿಣಾಮವಾಗಿ ಸೆಪ್ಟೆಂಬರಿನಿಂದೀಚೆಗೆ ಮಾರ್ಚ್ವರೆಗಿನ ಭಾರತದ ಕಚ್ಛಾತೈಲ ಸಂಸ್ಕರಣೆ  ವರ್ಷದ ಹಿಂದೆ ಇದ್ದುದಕ್ಕಿಂತ ಶೇಕಡಾ .೭ರಷ್ಟು ಕುಸಿದಿದೆ. ಇದು ಇಂಧನ ಬೇಡಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು ಸಂಸ್ಕರಣಾಗಾರಗಳೂ ತಮ್ಮ ಉತ್ಪಾದನೆಯನ್ನು ಕಡಿತಗೊಳಿಸುವಂತೆ ಮಾಡಿದೆ.
ರಿಲಯನ್ಸ್ ತನ್ನ ದೇಶೀಯ-ಮಾರುಕಟ್ಟೆ ಕೇಂದ್ರಿತ ಸ್ಥಾವರದಲ್ಲಿ ಕಚ್ಚಾ ಸಂಸ್ಕರಣೆಯನ್ನು ಶೇಕಡಾ ರಷ್ಟು ಹೆಚ್ಚಿಸಿದ್ದರೆ, ಕಳೆದ ವರ್ಷ ಇದೇ ತಿಂಗಳಿನಿಂದ ಮಾರ್ಚ್ನಲ್ಲಿ ತನ್ನ ರಫ್ತು ಕೇಂದ್ರಿತ ಸ್ಥಾವರದಲ್ಲಿ ತೈಲ ಸಂಸ್ಕರಣೆಯನ್ನು ೨೪% ರಷ್ಟು ಕಡಿತಗೊಳಿಸಿದೆ.

ರಿಲಯನ್ಸ್ ಡಿಜಿಟಲ್ ವಿಭಾಗz ಶೇ .೯೯ ರಷ್ಟು ಪಾಲನ್ನು ಖರೀದಿಸಲು . ಬಿಲಿಯನ್  ಡಾಲರ್ ಖರ್ಚು ಮಾಡುವ ಯೋಜನೆಯನ್ನು ಫೇಸ್ಬುಕ್ ತಿಂಗಳು ಬಹಿರಂಗಪಡಿಸಿತ್ತು.

No comments:

Advertisement