Tuesday, April 7, 2020

ಐಸಿಯುನಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್; ಆರೋಗ್ಯ ಸ್ಥಿರ

ಐಸಿಯುನಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್;  ಆರೋಗ್ಯ ಸ್ಥಿರ
ಲಂಡನ್: ಕೋವಿಡ್ -೧೯ ಲಕ್ಷಣಗಳು ಉಲ್ಬಣಿಸಿ ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ  ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೇಹಸ್ಥಿತಿ ಸ್ಥಿರವಾಗಿದ್ದು ಅವರು ಉಲ್ಲಸಿತರಾಗಿದ್ದಾರೆ ಎಂದು ಅವರ ವಕ್ತಾರರು 2020 ಏಪ್ರಿಲ್ 07ರ ಮಂಗಳವಾರ ತಿಳಿಸಿದರು.

ಏಪ್ರಿಲ್ 5ರ ಭಾನುವಾರ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿಯವರಿಗೆ ಆಮ್ಲಜನಕ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಈಗ ಇತರ ಸಲಕರಣೆಯ ನೆರವು ಇಲ್ಲದೆಯೇ ಉಸಿರಾಡುತ್ತಿದ್ದಾರೆ. ಅವರಿಗೆ ಯಾಂತ್ರಿಕ ವೆಂಟಿಲೇಟರ್‌ನ ಅಗತ್ಯ ಬಿದ್ದಿಲ್ಲ ಎಂದು ವಕ್ತಾರರು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಕಳೆದ ರಾತ್ರಿ ಪೂರ್ತಿ ಪ್ರಧಾನಿಯವರು ಸ್ಥಿರವಾಗಿದ್ದರು ಮತ್ತು ಅತ್ಯಂತ ಉಲ್ಲಸಿತರಾಗಿದ್ದರು. ಅವರಿಗೆ ಆಮ್ಲಜನಕ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಯಾವುದರ ನೆರವು ಕೂಡಾ ಇಲ್ಲದೆಯೇ ಅವರು ಉಸಿರಾಡುತ್ತಿದ್ದಾರೆ. ಅವರಿಗೆ ಮೆಕ್ಯಾನಿಕಲ್ ವೆಂಟಿಲೇಶನ್, ಅಥವಾ ಬೇರಾವುದೇ ಉಸಿರಾಟ ಬೆಂಬಲ ಸಲಕರಣೆ ಬೇಕಾಗಿ ಬಂದಿಲ್ಲ ಎಂದು ವಕ್ತಾರ ನುಡಿದರು.

No comments:

Advertisement