ಎಲ್ಲವೂ ಭಣ ಭಣ, ಬೆಂಗಳೂರಿನ ರಸ್ತೆಗಳೂ ಹಳ್ಳಿಗಾಡಿನ ಹೊಲಗಳೂ…!
ಇದು ಸುವರ್ಣ ನೋಟ
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಜನ ಗಿಜಿಗಿಡುವ ರಸ್ತೆಗಳೆಲ್ಲ ಭಣ ಭಣ- ಇದು ಕೊರೋನಾ ಅಟ್ಟಹಾಸದ ರಿಂಗಣ. ಅತ್ತ ಗ್ರಾಮೀಣ ಭಾಗದಲ್ಲಿ ಹೊಲಗಳೂ ಭಣ ಭಣ, ಹನಿ ನೀರಿಗಾಗಿ ಪ್ರಾಣಿ ಪಕ್ಷಿಗಳೂ ಹೈರಾಣ- ಇದು ರಣ ಬಿಸಿಲಿನ ಕಣ. ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾ ಬತ್ತಳಿಕೆಯ ನಿರ್ಜನ ರಸ್ತೆಗಳ ಚಿತ್ರಗಳು ಬೆಂಗಳೂರಿನ ಇತ್ತೀಚಿನ ಚಿತ್ರಗಳಾದರೆ ಉಳಿದವುಗಳು ಕೆಲ ಸಮಯದ ಹಿಂದಿನ ಗ್ರಾಮೀಣ ಭಾಗದ ಚಿತ್ರಗಳು. ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್ಕಿಸಿ.
No comments:
Post a Comment