Saturday, April 25, 2020

ಪುಟ್ಟ ಮಕ್ಕಳ ಹೃದಯವಂತಿಕೆ..!

ಪುಟ್ಟ ಮಕ್ಕಳ ಹೃದಯವಂತಿಕೆ..!
ವಿಟ್ಲ: ವಿಶೇಷ  ಚೇತನರನ್ನು ಪ್ರಧಾನಿ ನರೇಂದ್ರ ಮೋದಿಯವರು ‘ದಿವ್ಯಾಂಗ’ರು ಎಂಬುದಾಗಿ ಹೇಳಿ ಕೈ ಮುಗಿದಿದ್ದರು. ಅವರನ್ನು ಸಮಾಜ ಹೆಚ್ಚು ಮುತುವರ್ಜಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದ್ದರು.

ದಕ್ಷಿಣ ಕನ್ನಡಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೂರ್ಲುಪಾಡಿಯ ಮಕ್ಕಳಿಗೆ ಪ್ರಧಾನಿ ಹೇಳಿದ ಈ ವಿಚಾರಗಳು ಗೊತ್ತಿದ್ದೀತು ಎಂದು ಹೇಳಲು ಸಾಧ್ಯವಿಲ್ಲ. ಆದರೆ ತಮ್ಮ ಮನೆಗಳ ಬಳಿಯಲ್ಲೇ ಇರುವ  ಮನುಭಟ್,ಆತನ ಸಹೋದರ ಮಧುಭಟ್ ಇವರೆಲ್ಲರ ಪಾಲಿಗೆ ಪ್ರೀತಿಯ ಅಣ್ಣ.

ಮನುಭಟ್ ದಿವ್ಯಾಂಗ ಎಂಬುದು ಅವರೆಲ್ಲರಿಗೂ ಗೊತ್ತು. ಆದರೆ ಅತ್ತ ಬಂದಾಗಲೆಲ್ಲ ಕರೆದು ಮಾತನಾಡಿಸದೆ ಹೋಗುವವರಲ್ಲ.

ಏಪ್ರಿಲ್ 24-  ಮನು, ಮಧು ಜನ್ಮದಿನ.  ಊರಲ್ಲೇ ಇರುವ  ಮನುಭಟ್  ಬಳಿಗೆ ಜನ್ಮದಿನದ ಶುಭಾಶಯಗಳ  ಪೋಸ್ಟರ್  ಹಿಡಿದುಕೊಂಡು ಬಂದ ಮಕ್ಕಳು ಮನು ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು.

ಪುಟ್ಟ ಮಕ್ಕಳ ದೊಡ್ಡ ಹೃದಯದ ಸಂಭ್ರಮದ ಚಿತ್ರ, ಮನುವಿನ ಮೊಗದಲ್ಲಿ ನಗು ಅರಳಿಸಿದ ವಿಡಿಯೋ ಇಲ್ಲಿದೆ.  ಹೃದಯವಂತಿಕೆ ಮೆರೆದ ಈ ಮಕ್ಕಳೆಲ್ಲರನ್ನೂ ಅಭಿನಂದಿಸೋಣ.


ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ.

No comments:

Advertisement