ಗ್ರಾಹಕರ ಸುಖ-ದುಃಖ
My Blog List
Saturday, April 11, 2020
ರಜಾ ಕಾಲದ ಲಂಡನ್ ಪ್ರವಾಸ: ಕರಟಿ ಹೋದ ಭಾರತೀಯರ ಕನಸು
ರಜಾ ಕಾಲದ ಲಂಡನ್ ಪ್ರವಾಸ: ಕರಟಿ ಹೋದ ಭಾರತೀಯರ ಕನಸು
ಲಂಡನ್: ರಜಾ ಬಂದರೆ ಸಾಕು, ಲಂಡನ್ನಿಗೆ ಪ್ರವಾಸ ಹೋಗಲು ಕಾಯುತ್ತಿದ್ದ ಭಾರತೀಯರ ಲಂಡನ್ ಪ್ರವಾಸದ ಕನಸು ಈಗ ಕರಟಿಹೋಗಿದೆ. ಹೌದು, ೨೦೧೪ರ ಆದಿಯಲ್ಲಿ ಲಂಡನ್ನಿಗೆ ಹೋಗಿದ್ದ ಐಟಿ ತಜ್ಞ ದೀಪಕ್ ಜೋಶಿ ಅವರ ಫ್ಲ್ಯಾಟಿಗೆ ಪ್ರತಿವರ್ಷ ಈ ಸಮಯದಲ್ಲಿ ಅಂದರೆ, ಸೆಕೆ ಮತ್ತು ಚಳಿ ಹದವಾಗಿ ಇರುವ ಕಾಲದಲ್ಲಿ ಭಾರತೀಯ ಬಂಧು ಮಿತ್ರರು ಬರದೇ ಇದ್ದ ದಿನಗಳೇ ಇರಲಿಲ್ಲ. ಆದರೆ ಈಗ ಆ ಸ್ಥಿತಿ ಇಲ್ಲ.
ಈ ವರ್ಷದ ಬೇಸಿಗೆಯಲ್ಲಿ ದೆಹಲಿ, ಗುವಾಹಟಿ, ಇಂದೋರ್ ಮತ್ತು ಗೋವಾ- ಹೀಗೆ ಕನಿಷ್ಠ ೩-೪ ಕಡೆಯಿಂದ ಗೆಳೆಯರು ಬರುತ್ತಾರೆ ಎಂದು ಜೋಶಿ ನಿರೀಕ್ಷಿಸಿದ್ದರು. ಆದರೆ ಎಲ್ಲವೂ ರದ್ದಾಗಿವೆ. ’ಅಬ್ ಕೌನ್ ಆಯೇಗಾ ಯಹಾಂ?’ (ಈಗ ಇಲ್ಲಿಗೆ ಯಾರು ಬರುತ್ತಾರೆ?) ಲಂಡನ್ನಿನಲ್ಲಿ ಇರುವ ಪ್ರಕರಣಗಳ ಸಂಖ್ಯೆ ಇಂಗ್ಲೆಂಡಿನಲ್ಲೇ ಅತ್ಯಧಿಕ’ ಎಂದು 2020 ಏಪ್ರಿಲ್ 11ರ ಶನಿವಾರ ನಿಟ್ಟುಸಿರು ಬಿಟ್ಟರು ಜೋಶಿ.
ಸುಮಾರು ೯೦೦೦ ಮಂದಿಯ ಸಾವು, ಆಸ್ಪತ್ರೆಗಳಲ್ಲಿ ಸಹಸ್ರಾರು ಪ್ರಕರಣಗಳು- ಇಂಗ್ಲೆಂಡಿನ ಜನರ ದೈನಂದಿನ ಭ್ರಮನಿರಸನದ ಇಲ್ಲವೇ ಅನುದಿನದ ಬದುಕಿನ ಹೊಂದಾಣಿಕೆಯ ಇಂತಹ ಕಥೆಗಳನ್ನೇ ಹೇಳುತ್ತವೆ. ಕಾರ್‍ಯಕ್ರಮ ರದ್ದು, ಟಿಕೆಟ್ ರದ್ದು, ಸೂಪರ್ ಮಾರುಕಟ್ಟೆಗಳ ಅವಸ್ಥೆಗಳು ಇಲ್ಲವೇ ಕ್ಯೂಗಳ ಕಥೆಗಳು ಸಾಲು ಸಾಲು.
ಇಂಗ್ಲೆಂಡಿನ ಭಾರತೀಯ ಸಮುದಾಯದ ಹೆಚ್ಚು ಕಡಿಮೆ ಪ್ರತಿಯೊಬ್ಬ ವ್ಯಕ್ತಿಗೂ ಯಾರಿಗೆ ವೈರಸ್ ಸೋಂಕು ತಗುಲಿದೆ, ಯಾರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ ಅಥವಾ ಯಾರು ಆಸ್ಪತ್ರೆಯಲ್ಲಿ ಇದ್ದಾರೆ ಎಂಬುದು ಗೊತ್ತಿದೆ.
ಲಂಡನ್ನಿನಲ್ಲಿ ಭಾರತೀಯ ಮೂಲದ ಜನರು ಹೆಚ್ಚು ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಲಿಂಗ್, ಸೌಥಾಲ್, ಬ್ರೆಂಟ್, ಬರ್‍ನೆಟ್ ಮತ್ತು ಹ್ಯಾರೋ ಇವುಗಳಲ್ಲಿ ಸೇರಿವೆ. ’ಮನೆಯೊಳಗೆ ಇರುವುದು ಎಂದರೆ ಬೇಜಾರು. ಆದರೆ ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ಮೈಡೆನ್ ಹೆಡ್ ಮೂಲದ ರವಿ ಸಿಂಗ್.
ಭಾರತ ಮತ್ತು ಇಂಗ್ಲೆಂಡಿನ ಅನುದಿನದ ಬದುಕು ಈಗ ಹಿಂದೆಂದಿಗಿಂತ ಹೆಚ್ಚಾಗಿ ಜೋಡಿಕೊಂಡಿದೆ. ಸುದ್ದಿ ಚಾನೆಲ್‌ಗಳು, ಇಂಟರ್ ನೆಟ್, ಸಾಮಾಜಿಕ ಮಾಧ್ಯಮಗಳು ಇಲ್ಲಿನ ಭಾರತೀಯರನ್ನು ಭಾರತದ ಜನರ ಜೊತೆಗೆ ನಿಕಟವಾಗುವಂತೆ ಮಾಡಿವೆ. ’ಲಂಡನ್ ರಿಟರ್ನ್ಡ್’ ಎಂಬುದಾಗಿ ಹೇಳುವುದು ಪ್ರತಿಷ್ಠೆಯ ವಿಷಯ ಭಾರತದಲ್ಲಿ ಇನ್ನು ಯಾರೂ ಹೇಳಲಾರರು, ಕೆಲವರು ಲಂಡನ್‌ನಲ್ಲಿ ಇದ್ದೆವು ಎಂಬುದನ್ನೇ ಮುಚ್ಚಿಡಲೂ ಬಹುತು ಎಂದು ಸಿಂಗ್ ಹೇಳುತ್ತಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೊಡ್ಡ ಸಮಸ್ಯೆ ಎನ್ನುತ್ತಾರೆ ದೀರ್ಘ ಕಾಲದಿಂದ ಲಂಡನ್ನಿನಲ್ಲಿ ವಾಸವಾಗಿರುವ ಬರಹಗಾರ ಮಿಹಿರ್ ಬೋಸ್. ಆದರೆ ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಕಾನ್ಫರೆನ್ಸಿಂಗ್‌ನ ಲಾಭಗಳನ್ನು ಪತ್ತೆ ಹಚ್ಚಿರುವ ಹಿರಿಯರು ಪ್ರತ್ಯೇಕವಾಸದ ಸಂದರ್ಭದಲ್ಲಿ ಸಂಪರ್ಕ ಇಟ್ಟುಕೊಳ್ಳುವಲ್ಲಿ ಸಫಲತೆ ಸಾಧಿಸಿದ್ದಾರೆ.
’ನನ್ನ ಹಲವಾರು ಹಿರಿಯ ಬ್ರಿಟಷ್ ಗೆಳೆಯರು ಈಗ ವಸ್ತುಶಃ ಕುಡಿತದ ಸಮಯದಲ್ಲಿ ಭೇಟಿ ಮಾಡುತ್ತಾರೆ. ಇಂತಹ ಹಲವಾರು ಚಟುವಟಿಕೆಗಳನ್ನು ನಾವು ಕ್ಯಾಲೆಂಡರಿನಲ್ಲಿ ಗುರುತಿಸಿಕೊಂಡಿದ್ದೇವೆ’ ಎನ್ನುತ್ತಾರೆ ಒಬ್ಬರು.
ಲಂಡನ್ನಿನಲ್ಲಿ ಸುಸ್ತಾದರೆ, ಬದುಕೇ ಸುಸ್ತಾದಂತೆ ಎಂಬ ಮಾತಿದೆ, ಆದರೆ ಸ್ಯಾಮ್ಯುಯೆಲ್ ಜಾನ್ಸನ್ ಅವರು ಎಂದೂ ಇಂತಹ ಲಾಕ್ ಡೌನ್‌ನ್ನು ಎದುರಿಸಿಯೇ ಇರಲಿಲ್ಲವಂತೆ. ಲಂಡನ್ ಇನ್ನೆಂದಿಗೂ ಎಲ್ಲರಿಗೂ ಗೊತ್ತಿರುವ ಲಂಡನ್ ಆಗಿರಲು ಸಾಧ್ಯವಿಲ್ಲ. ಬೃಹತ್ ಗಾತ್ರದ ಪೊರಕೆಯೊಂದು ಲಂಡನ್ನಿನ ರಸ್ತೆಗಳನ್ನು ಬದುಕಿನ ಸಹಿತವಾಗಿ ಗುಡಿಸಿಬಿಟ್ಟಿದೆ ಎನ್ನುತ್ತಾರೆ ಜಾನ್ಸನ್.
ಕೇಂದ್ರ ಲಂಡನ್ನಿನ ಜನನಿಬಿಡ ಸ್ಥಳಗಳಾಗಿದ್ದ ಆಕ್ಸ್ ಫರ್ಡ್ ಸ್ಟ್ರೀಟ್, ಪಿಕ್ಕಾಡಿಲ್ಲಿ ಮತ್ತು ಟ್ರಫಾಲ್ಗರ್ ಚೌಕ ಈಗ ಭಣಗುಡುತ್ತಿರುವ ದೃಶ್ಯ ಕಾಣಿಸುತ್ತದೆ.
ದೀಪಗಳು ಬೆಳಗುತ್ತವೆ. ಆದರೆ ಪೊಲೀಸ್ ಕಾರುಗಳ ಹೊರತಾಗಿ ಬೇರೆ ಯಾವ ವಾಹನಗಳ ಸಂಚಾರವೂ ಇಲ್ಲ. ಕಂಡರೆ ಅಲ್ಲೊಂದು ಇಲ್ಲೊಂದು ಆಂಬುಲೆನ್ಸ್, ಎಲೆಕ್ಟ್ರೀಷಿಯನ್ನರ, ಪ್ಲಂಬರುಗಳು ಅಥವಾ ರಸ್ತೆ ನಿರ್ವಾಹಕ ಸಿಬ್ಬಂದಿ ವ್ಯಾನುಗಳು ಕಾಣುತ್ತವೆ ಅಷ್ಟೆ. ಪೆಟ್ರೋಲ್ ಬೆಲೆ ಹತ್ತಿರ ಹತ್ತಿ ಒಂದು ಪೌಂಡ್‌ಗೆ ಕುಸಿದಿದೆ, ಆದರೂ ವಸತಿ ಪ್ರದೇಶಗಳಲ್ಲಿನ ಕಾರುಗಳು ಒಂದು ಅಂಗುಲದಷ್ಟೂ ಚಲಿಸುವುದಿಲ್ಲ.
ನಿಯಾಸಡೆನ್‌ನಲ್ಲಿನ ಸ್ವಾಮಿನಾರಾಯಾಣ ದೇವಾಲಯ ಮಾರ್ಚ್ ೧೩ರಿಂದ ಮುಚ್ಚಿದೆ. ಲಂಡನ್ ಮತ್ತು ಇಂಗ್ಲೆಂಡಿನ ಭಕ್ತರಿಗೆ ದೈನಂದಿನ ಆರತಿಯನ್ನು ಆನ್ ಲೈನಿನಲ್ಲಿ ತೋರಿಸಲಾಗುತ್ತಿದೆ. ಇತರ ಪ್ರಾರ್ಥನಾ ಸ್ಥಳಗಳಲ್ಲೂ ಜನಜಂಗುಳಿ ಸೇರದಂತೆ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಲೀಸೆಸ್ಟರ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ಕಮಲೇಶ ಖುಂಟಿಯಂತಹ ವೈದ್ಯಕೀಯ ತಜ್ಞರು ಜನಾಂಗವಾರು ಪಟ್ಟಿಯಂತೆ ನೋಡಿದಾಗ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಸೋಂಕು ಕಾಣುತ್ತಿರುವುದ ಬಗ್ಗೆ ಚಿಂತೆ ವ್ಯಕ್ತ ಪಡಿಸುತ್ತಾರೆ. ಪ್ರಾಥಮಿಕ ಮಾಹಿತಿಯೂ ಇದನ್ನೇ ಹೇಳಿತ್ತು ಎಂದು ಅವರು ಬೊಟ್ಟು ಮಾಡುತ್ತಾರೆ
Labels:
Coronavirus,
England,
Flash News,
Lockdown,
News,
World,
ಕೊರೋನಾವೈರಸ್,
ಲಾಕ್ಡೌನ್,
ಸುದ್ದಿ
Subscribe to:
Post Comments (Atom)
No comments:
Post a Comment