೫ ಲಕ್ಷ ರೂವರೆಗಿನ ಬಾಕಿ ತತ್ ಕ್ಷಣ
ಮರುಪಾವತಿ
೧೪ ಲಕ್ಷ ತೆರಿಗೆ ಪಾವತಿದಾರರಿಗೆ ಅನುಕೂಲ
ನವದೆಹಲಿ: ಐದು ಲಕ್ಷ ರೂಪಾಯಿಗಳವರೆಗಿನ ತೆರಿಗೆ ಮರುಪಾವತಿ ಬಾಕಿಗಳನ್ನು ತತ್ ಕ್ಷಣವೇ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ 2020 ಏಪ್ರಿಲ್ 08ರ ಬುಧವಾರ ಪ್ರಕಟಿಸಿತು. ಈ ಕ್ರಮದಿಂದ ೧೪ ಲಕ್ಷ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ.
ಸರ್ಕಾರ ಕೂಡಾ ಬಾಕಿ ಇರುವ ೧೮,೦೦೦ ಕೋಟಿ
ರೂಪಾಯಿಗಳ ಜಿಎಸ್ ಟಿ ಮತ್ತ ಕಸ್ಟಮ್ಸ್ ಮರುಪಾವತಿಗಳನ್ನು ಬಿಡುಗಡೆ ಮಾಡುವ
ಮೂಲಕ ಉದ್ಯಮ ಸಂಸ್ಥೆಗಳಿಗೆ ನಿರಾಳತೆ ಒದಗಿಸಿತು.
ಎಲ್ಲ
ಜಿಎಸ್ ಟಿ ಮತ್ತು
ಕಸ್ಟಮ್ ಮರುಪಾವತಿಗಳನ್ನು ಕೂಡಾ
ಬಿಡುಗಡೆ ಮಾಡಲಾಗುವುದು. ಇದು
ಎಂಸ್ ಎಂಇಗಳು ಸೇರಿದಂತೆ ಸುಮಾರು ೧ ಲಕ್ಷ
ಉದ್ಯಮ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಡಿಯಲ್ಲಿನ ಕಂದಾಯ ಇಲಾಖೆ
ತಿಳಿಸಿತು.ಮಂಜೂರು ಮಾಡಲಾಗಿರುವ ಒಟ್ಟು ಮರುಪಾವತಿ ಮೊತ್ತ
೧೮,೦೦೦ ಕೋಟಿ
ರೂಪಾಯಿಗಳು ಎಂದು ಇಲಾಖೆ
ಹೇಳಿತು.
ಕೋವಿಡ್-೧೯ ಪರಿಸ್ಥಿಯ ಪರಿಶೀಲನೆ ಬಳಿಕ ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ತತ್
ಕ್ಷಣದ ನಿರಾಳತೆ ಒದಗಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಬಾಕಿ
ಉಳಿದಿರುವ ಎಲ್ಲ ಜಿಎಸ್
ಟಿ ಮತ್ತು ಕಸ್ಟಮ್ ಮರುಪಾವತಿಗಳನ್ನು ಕೂಡಾ ಬಿಡುಗಡೆಮಾಡಲು ನಿರ್ಧರಿಸಲಾಯಿತು. ಇದರಿಂದ ಎಂಎಸ್
ಎಂಇಗಳು ಸೇರಿದಂತೆ ೧ ಲಕ್ಷ ಉದ್ಯಮ
ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು
ಹೇಳಿಕೆ ತಿಳಿಸಿತು.
ದೇಶಾದ್ಯಂತ ಕೋವಿಡ್ ೧೯ ಸೋಂಕಿಗೆ ೧೫೦ ಮಂದಿ ಅಸು
ನೀಗಿದ್ದು, ೫೦೦೦ ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ.
No comments:
Post a Comment