Thursday, April 30, 2020

ಹೊಸ ಸ್ಮಾರ್ಟ್ ಫೋನ್‌ಗಳಿಗೆ ‘ಆರೋಗ್ಯ ಸೇತು ‘ ಅಳವಡಿಕೆ ಕಡ್ಡಾಯ

ಹೊಸ  ಸ್ಮಾರ್ಟ್ ಫೋನ್ಗಳಿಗೆ  ಆರೋಗ್ಯ ಸೇತುಅಳವಡಿಕೆ  ಕಡ್ಡಾಯ
ನವದೆಹಲಿ: ಎಲ್ಲ ಹೊಸ ಸ್ಮಾರ್ಟ್ ಪೋನ್ಗಳನ್ನು ನೋಂದಾಯಿಸಲು ಇನ್ನು ಮುಂದೆ ಅವುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಸರ್ಕಾರಿ ಮೂಲಗಳು   2020 ಏಪ್ರಿಲ್ 30ರ ಗುರುವಾರ ತಿಳಿಸಿದವು.

ಫೋನ್ ಪ್ರತಿಷ್ಠಾಪನೆ ಮತ್ತು ಅದನ್ನು ಬಳಸುವ ಮೊದಲು ಆರೋಗ್ಯ ಸೇತು ಆಪ್ನ್ನು ಅದರಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಮೂಲಗಳು ಹೇಳಿದವು.

ದಿಗ್ಬಂಧನ (ಲಾಕ್ ಡೌನ್) ಬಳಿಕ ಭಾರತ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲ ಸ್ಮಾರ್ಟ್ ಫೋನ್ಗಳಲ್ಲೂ  ಆರೋಗ್ಯ ಸೇತು ಅಪ್ಲಿಕೇಷನ್ ಸೇರ್ಪಡೆ ಮಾಡುವುದು ಮಾತ್ರವೇ ಅಲ್ಲ, ಖರೀದಿಸಿದ ಎಲ್ಲರೂ ಬಳಸುವ ಮುನ್ನ ಆಪ್ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳುವುದನ್ನೂ ಖಚಿತಪಡಿಸಿಕೊಳ್ಳುವುದನ್ನೂ ಕಡ್ಡಾಯಗೊಳಿಸಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿದವು. 
ಎಲ್ಲ ಹೊಸ ಫೋನ್ ಉಪಕರಣಗಳಲ್ಲೂ ಯಾರೂ ತಪ್ಪಿಸಿಕೊಳ್ಳದಂತೆ ಆರೋಗ್ಯಸೇತು ಆಪ್ ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳೂವ ಹೊಣೆಗಾರಿಕೆಯನ್ನು ನೋಡಲ್ ಸಂಸ್ಥೆಗಳಿಗೆ ವಹಿಸುವ ನಿರ್ಧಾರಕ್ಕೂ ಸರ್ಕಾರ ಬಂದಿದೆ.

ಇದರಿಂದ ಆರೋಗ್ಯ ಸೇತು ಅಪ್ಲಿಕೇಷನ್ ಭಾರತದಲ್ಲಿ ನಿರ್ಮಾಣಗೊಳ್ಳುವ ಹಾಗೂ ಮಾರಾಟವಾಗುವ ಎಲ್ಲ ಹೊಸ ಸ್ಮಾರ್ಟ್ ಫೋನುಗಳಲ್ಲೂ ಅಂತರ್ಗತ ವೈಶಿಷ್ಠ್ಯವಾಗಲಿದೆ. (ಇನ್ ಬಿಲ್ಟ್ ಫೀಚರ್ ).

ಹೀಗಾಗಿ ಭಾರತದ ಮೊಬೈಲ್ ಫೋನ್ಗಳ ಗಣನೀಯ ಭಾಗವಾಗಿರುವ ಫೀಚರ್ ಫೋನ್ಗಳಲ್ಲಿ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಲು ಸರ್ಕಾರವು ಬೇರೆ  ಯಾವುದೇ ಪರಿಹಾರೋಪಾಯಗಳನ್ನು ಘೋಷಿಸಬೇಕಾಗುವುದಿಲ್ಲ.

ಆರೋಗ್ಯ ಸೇತು ಅಪ್ಲಿಕೇಷನ್ನ್ನು ಪರಿಚಯಿಸಿದಾಗಿನಿಂದ ಈವರೆಗೆ ದೇಶಾದ್ಯಂತ . ಕೋಟಿ ಮಂದಿ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಕೇವಲ ಗೂಗಲ್ ಪ್ಲೇ ಸ್ಟೋರ್ ಒಂದರಲ್ಲೇ ಆರೋಗ್ಯ ಸೇತು ಡೌನ್ಲೋಡ್ಗಳು ಕೋಟಿಯ ಗಡಿ ದಾಟಿವೆ. ಭಾರತದ ಬಹುಪಾಲು ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ನಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ನಿರೀಕ್ಷಿತವೇ ಆಗಿತ್ತು.

ಆರೋಗ್ಯ ಸೇತು ಅಳವಡಿಕೆಯನ್ನು ಸರ್ಕಾರವು ಕಡ್ಡಾಯಗೊಳಿಸಲು ಯೋಜಿಸುತ್ತಿರುವುದರಿಂದ ಪ್ರಾಯೋಗಿಕವಾಗಿ ಅದನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಭಾರತದ ಅಧಿಕೃತ ಸಂಪರ್ಕ ಪತ್ತೆ ಅಪ್ಲಿಕೇಶನ್ ಆಗಿರುವ ಆರೋಗ್ಯ ಸೇತು ಅಪ್ಲಿಕೇಷನ್, ಕೋವಿಡ್ -೧೯ ಸಾಂಕ್ರಾಮಿಕ ರೋಗದ ಯಾವುದೇ ಸಮುದಾಯ ಹರಡುವಿಕೆಯನ್ನು ಪತ್ತೆಹಚ್ಚಲು ಬಳಕೆದಾರರ ಸ್ಥಳ ಮಾಹಿತಿಯನ್ನು ಸ್ಮಾರ್ಟ್ಫೋನ್ ಜಿಯೋಲೋಕಲೈಸೇಶನ್ ಸೆನ್ಸರ್ ಮತ್ತು ಬ್ಲೂಟೂತ್ ಮೂಲಕ ಸಂಗ್ರಹಿಸುತ್ತದೆ ಮತ್ತು ದಾಖಲಿತ ಕೋವಿಡ್ -೧೯ ರೋಗಿಗಳ ಜಾಡನ್ನು ಇರಿಸಿಕೊಳ್ಳುತ್ತದೆ.

ಕೋವಿಡ್ -೧೯ ರೋಗಿಗಳ ಪ್ರಯಾಣದ ಇತಿಹಾಸವನ್ನು ಪತ್ತೆಹಚ್ಚಲು, ಆರೋಗ್ಯವಂತ ವ್ಯಕ್ತಿಗಳು ಮಾರ್ಗಗಳನ್ನು ದಾಟಿ ಕೋವಿಡ್ -೧೯ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನೂ ಆರೋಗ್ಯ ಸೇತು ದಾಖಲಿಸಿ ಮಾಹಿತಿ ವಿನಿಮಯ ಮಾಡುತ್ತದೆ.

ಆರೋಗ್ಯ ಸೇತು ಅಪ್ಲಿಕೇಶನ್ ಕೋವಿಡ್ -೧೯ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರ್ಕಾರಿ ಸಂವಹನಕ್ಕಾಗಿ ಅಧಿಕೃತ ಮಾಹಿತಿ ಪೋರ್ಟಲ್ ಆಗಿಯೂ ಕೆಲಸ ಮಾಡುತ್ತದೆ ಮತ್ತು ರೋಗಲಕ್ಷಣದ ಪರೀಕ್ಷಕವನ್ನು ಒದಗಿಸುತ್ತದೆ. ಇದನ್ನು ಬಳಸಿ ವ್ಯಕ್ತಿಗಳು ತಮ್ಮಲ್ಲಿ ಅಥವಾ ತಮ್ಮ ಸಮೀಪವಿರುವ ಇತರ ವ್ಯಕ್ತಿಗಳಲ್ಲಿ  ಕೋವಿಡ್ -೧೯ ಸೋಂಕಿನ ಲಕ್ಷಣಗಳಿವೆಯೇ ಎಂದು ಅಂದಾಜು ಮಾಡಿಕೊಳ್ಳಬಹುದು ಮತ್ತು ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಅದು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬಹುದು.

No comments:

Advertisement