Thursday, April 16, 2020

ವಿಡಿಯೋ ಕಾನ್ಫರೆನ್ಸಿಗೆ ಜೂಮ್ ಬಳಕೆ ಅಸುರಕ್ಷಿತ: ಕೇಂದ್ರ

ವಿಡಿಯೋ ಕಾನ್ಫರೆನ್ಸಿಗೆ ಜೂಮ್ ಬಳಕೆ  ಸುರಕ್ಷಿತ:  ಕೇಂದ್ರ
ನವದೆಹಲಿ: ಖಾಸಗಿ ವ್ಯಕ್ತಿಗಳು ಜೂಮ್ ವಿಡಿಯೋ ಕಾನ್ಪರೆನ್ಸಿಂಗ್ ಆಪ್ ಬಳಸಿ ವಿಡಿಯೋ ಸಂವಹನ ನಡೆಸುವುದು ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ 2020 ಏಪ್ರಿಲ್ 16ರ ಗುರುವಾರ ಎಚ್ಚರಿಕೆ ನೀಡಿತು.
ಜೂಮ್ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಬಳಸಲು ಸರ್ಕಾರಿ ಅಧಿಕಾರಿಗಳಿಗೆ ಮುನ್ನವೇ ನಿಷೇಧ ವಿಧಿಸಲಾಗಿತ್ತು.

ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (ಸಿಇಜರ್ಟಿ-ಇನ್) ಜನಪ್ರಿಯ ಆಪ್ನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುವ ಬಗ್ಗೆ ಸುಳಿವು ನೀಡಿದ ಬಳಿಕ ಸರ್ಕಾರ ಎಚ್ಚರಿಕೆಯನ್ನು ನೀಡಿತು.

ಅತ್ಯಂತ ಜನಪ್ರಿಯವಾಗಿರುವ ಜೂಮ್ ಆಪ್ನ್ನು ಸಹಸ್ರಾರು ಮಂದಿ ವೃತ್ತಿ ನಿರತರು ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮಾಡಲು ಬಳಸಿಕೊಳ್ಳುತ್ತಿದ್ದಾರೆ.

ಎನ್ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ/ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್) ವೇದಿಕೆಯನ್ನು ಬಹುತೇಕ ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಗಳಿಗೆ ಬಳಸಲಾಗುತ್ತಿದೆ ಎಂಬುದನ್ನು  ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿUಳಿಗೆ ಸರ್ಕಾರದ ಸೈಬರ್ ಸಮನ್ವಯ ಕೇಂದ್ರ ಅಥವಾ ಸೈಕೋರ್ಡ್ (ಸಿವೈಸಿಒಆರ್ಡಿ) ಗಮನಕ್ಕೆ ತಂದಿತು.
ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಮೂರನೇ ವ್ಯಕ್ತಿಗಳ ಆಪ್ ಮತ್ತು ಸೇವೆಗಳನ್ನು ಸಭೆಗಳಿಗಾಗಿ ಬಳಸದಂತೆ ಸೂಚಿಸಲಾಗಿದೆ. ಸೈಕೋರ್ಡ್ ಪೋರ್ಟಲ್ನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೧೮ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಸೈಬರ್ ಸಂಬಂಧಿತ ವಿಷಯಗಳನ್ನು ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಪಾಲುದಾರರ ಜೊತೆ ಹಂಚಿಕೊಳ್ಳುವ ಸಲುವಾಗಿ ಆರಂಭಿಸಿದ್ದರು.

ಜೂಮ್ ಆಪ್ನ್ನು ಬಳಸುವ ಖಾಸಗಿ ವ್ಯಕ್ತಿಗಳಿಗೆ ಸೂಚಿತ ಮಾರ್ಗದರ್ಶಿ ಸೂತ್ರಗಳನ್ನು  ಅನುಸರಿಸುವಂತೆ ಗೃಹ ಸಚಿವಾಲಯವು ಸೂಚನೆ ನೀಡಿದೆ.

ಸಮ್ಮೇಳನ ಸಭಾಂಗಣಕ್ಕೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಬೇಡಿ, ಅನಧಿಕೃತ ವ್ಯಕ್ತಿ ಇತರರ ಟರ್ಮಿನಲ್ಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಸದಂತೆ ನೋಡಿಕೊಳ್ಳಿ ಮತ್ತು ಬಳಕೆದಾರರು ಪಾಸ್ ವರ್ಡ್ ಮತ್ತು ಆಕ್ಸೆಸ್ ಅನುಮತಿ ಪಡೆದು ಡೋಸ್ ದಾಳಿ ನಡೆಸದಂತೆ ನೋಡಿಕೊಳ್ಳಿ ಎಂದು ಮಾರ್ಗದರ್ಶಿ ಸೂತ್ರ ಹೇಳಿದೆ.

ಡೋಸ್ (ಸೇವೆ ನಿರಾಕರಣೆ) ದಾಳಿಯು ಉದ್ದೇಶಿತ ಬಳಕೆದಾರರಿಗೆ ಕಂಪ್ಯೂಟರ್ ಅಥವಾ ಜಾಲ ಮೂಲಗಳು (ನೆಟ್ ವರ್ಕ್ ಸೋರ್ಸ್) ಲಭಿಸದಂತೆ ಹ್ಯಾಕರುಗಳು ನಡೆಸುವ ಕೃತ್ಯವಾಗಿದೆ.
ರಕ್ಷಣೆ ರಹಿತ ಜೂಮ್ ಆಪ್  ಬಳಕೆಯು ಸೂಕ್ಷ್ಮ ಕಚೇರಿ ಮಾಹಿತಿಯನ್ನು ಕ್ರಿಮಿನಲ್ಗಳಿಗೆ ಸೋರಿಕೆ ಮಾಡುವುದೂ ಸೇರಿದಂತೆ ಸೈಬರ್ ದಾಳಿಗಳಿಗೆ ಆಸ್ಪದ ನೀಡಬಹುದು ಎಂದು ಇದಕ್ಕೆ ಮುನ್ನ ಸಿಇಜರ್ಟಿ-ಇನ್ ತಿಳಿಸಿತ್ತು.

ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಹಲವಾರು ಸಂಸ್ಥೆಗಳು ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿವೆ. ಜೂಮ್, ಮೈಕ್ರೋಸಾಫ್ಟ್ ತಂಡಗಳು ಮತ್ತು ಶಿಕ್ಷಣ ತಂಡಗಳು, ಸ್ಲ್ಯಾಕ್, ಸಿಸ್ಕೊ ವೆಬೆಕ್ಸ್ ಇತ್ಯಾದಿ ಆನ್ ಲೈನ್ ಕಮ್ಯೂನಿಕೇಷನ್ ವೇದಿಕೆಗಳನ್ನು ದೂರದ ಸಭೆಗಳು ಮತ್ತು ವೆಬಿನಾರ್ಸ್ (ವೆಬ್ ಸೆಮಿನಾರ್)ಗೆ ಬಳಸುತ್ತಿವೆ ಎಂದು ಮಾರ್ಚ್ ೩೦ ಮತ್ತು ಏಪ್ರಿಲ್ ೬ರ ಸರ್ಕಾರಿ ಹೇಳಿಕೆ ತಿಳಿಸಿದೆ.

ಅಭದ್ರ ವೇದಿಕೆಯ ಬಳಕೆಯು ಸೈಬರ್ ಕ್ರಿಮಿನಲ್ಗಳಿಗೆ ಸಭೆಯ ವಿವರಗಳು ಮತ್ತು ಸಂಭಾಷಣೆಗಂತಹ  ಸೂಕ್ಷ್ಮ ಮಾಹಿತಿ ಕಳವಿಗೆ ಅವಕಾಶ ನೀಡಬಹುದು ಎಂದು ಸರ್ಕಾರದ ಎಚ್ಚರಿಕೆ ಹೇಳಿದೆ.

ಸಿಎನ್ಎನ್ ಜೊತೆಗಿನ ಸಂದರ್ಶನದಲ್ಲಿ ಕಳೆದ ವಾರ ಜೂಮ್ ಸಿಇ ಎರಿಕ್ ಎಸ್ ಯುವಾನ್ ಅವರು ತಮ್ಮ ಸಂಸ್ಥೆಯು ಅತ್ಯಂತ ಕ್ಷಿಪ್ರವಾಗಿ ಸಾಗುತ್ತಿದೆ. ಮತ್ತು ನಮ್ಮಲ್ಲಿ ಕೆಲವು ತಪ್ಪುಗಳು ಆಗಿವೆ. ಆದರೆ ಕಂಪೆನಿಯ ಪಾಠಗಳನ್ನು ಕಲಿತಿದೆ ಮತ್ತು ಖಾಸಗಿತನ ಮತ್ತು ಭದ್ರತೆ ಬಗ್ಗೆ ಗಮನ ಹರಿಸಿದೆ ಎಂದು ಹೇಳಿದ್ದರು.

No comments:

Advertisement