ದೆಹಲಿ: ೧೮೩ ಹೊಸ ಕೊರೋನಾ ಕೇಸ್, ಈ ಪೈಕಿ ೧೫೪ ತಬ್ಲಿಘಿ ಕೊಂಡಿಗಳು!
ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ 2020 ಏಪ್ರಿಲ್ 10ರ ಶುಕ್ರವಾರ ಹೊಸದಾಗಿ ಕೊರೋನಾವೈರಸ್ ಸೋಂಕಿನ ೧೮೩ ಪ್ರಕರಣಗಳು ವರದಿಯಾಗಿದ್ದು ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೯೦೩ಕ್ಕೆ ಏರಿತು.
ಶುಕ್ರವಾರ ಹೊಸದಾಗಿ ದಾಖಲಾದ ೧೮೩ ಪ್ರಕರಣಗಳ ಪೈಕಿ ೧೫೪ ಪ್ರಕರಣಗಳು ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶಕ್ಕೆ ಸಂಬಂಧಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಎರಡು ಕೊರೋನಾಸಾವುಗಳೂ ವರದಿಯಾಗಿವೆ.
ಇ ಮಧ್ಯೆ ಸರ್ಕಾರವು ಕೇಂದ್ರ ಮತ್ತು ಉತ್ತರ ದೆಹಲಿಯ ಇನ್ನೆರಡು ಪ್ರದೇಶಗಳನ್ನು ಕಠಿಣ ಲಾಕ್ ಡೌನ್ ವ್ಯಾಪ್ತಿಗೆ ಸೇರಿಸಿತು. ಈ ಪ್ರದೇಶದಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಠಿಣ ಲಾಕ್ ಡೌನ್ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಉನ್ನತ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಜಹಾಂಗೀರಪುರಿಯ ಬಿ ಬ್ಲಾಕ್, ನಬಿ ಕರೀಮ್ ಮತ್ತು ಚಾಂದನಿ ಮಹಲ್ ಈ ಪ್ರದೇಶಗಳು ಕಠಿಣ ಲಾಕ್ ಡೌನ್ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಮೂರು ಪ್ರದೇಶಗಳು ಎಂದು ವರದಿಗಳು ಹೇಳಿವೆ.
No comments:
Post a Comment