‘ಸ್ನೇಕ್ ಬರ್ಡ್’
ಭೋಜನ ಚಮತ್ಕಾರ..!
(ಇದು ಸುವರ್ಣ
ನೋಟ)
ಇದು ‘ಡಾರ್ಟರ್’ ಅಥವಾ ‘ಸ್ನೇಕ್ ಬರ್ಡ್’. ಆನ್ಹಿಂಜಿಡೆ ಜಾತಿಗೆ ಸೇರಿದ ಉಷ್ಣವಲಯದ ವಿಶಿಷ್ಟವಾದ ನೀರು ಹಕ್ಕಿ. ಇವುಗಳಲ್ಲಿ೪ ಜಾತಿಯ ಪಕ್ಷಿಗಳಿವೆ. ಅವುಗಳ ಪೈಕಿ ಮೂರು ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತವೆ. ಆದರೆ ನಾಲ್ಕನೆಯದು ಅತಿ ವಿರಳವಾಗಿದೆ ಎಂದು ಐಯುಸಿಎನ್ ವರ್ಗೀಕರಿಸಿದೆ.
ಯಾವುದೇ ಪ್ರದೇಶದ ನಿರ್ದಿಷ್ಟ ಹಕ್ಕಿಗೆ ಸೂಚಿಸದೇ ಈ ಜಾತಿಗೆ ಸೇರುವ ವಿವಿಧ ಪಕ್ಷಿಗಳನ್ನು ಸಾಮಾನ್ಯವಾಗಿ ‘ಸ್ನೇಕ್ ಬರ್ಡ್’ ಎಂಬುದಾಗಿ ಕರೆಯಲಾಗುತ್ತದೆ. ತೆಳುವಾದ ಉದ್ದನೆಯ ಕುತ್ತಿಗೆ ಇವುಗಳ ವಿಶೇಷ. ಈ ಕುತ್ತಿಗೆಯು ಹಾವಿನ ರೀತಿಯಲ್ಲಿ ಕಾಣುತ್ತವೆ. ಇವು ನೀರಿನಲ್ಲಿ ಈಜುವಾಗ ಇವುಗಳ ದೇಹವು ನೀರಿನಲ್ಲಿ ಮುಳುಗಿರುತ್ತವೆ, ಕುತ್ತಿಗೆ ಮಾತ್ರ ನೀರಿನಿಂದ ಮೇಲೆ ನಿಂತ ಹಾವಿನ ರೀತಿ ಕಾಣಿಸುತ್ತಿರುತ್ತದೆ.
ಈ ಹಕ್ಕಿಗಳು ಮೀನುಗಳನ್ನು ತನ್ನ ಚಿಕ್ಕ ಹಾಗೂ ಚೂಪಾದ ಕೊಕ್ಕಿನಿಂದ ಹೆಕ್ಕಿ ತಿನ್ನುತ್ತವೆ. ಅಮೆರಿಕಾದ ಡಾರ್ಟರ್ (ಎ.ಆನ್ಹಿಂಗಾ) ಅನ್ನು ಆನ್ಹಿಂಗಾ ಎಂದು ಗುರುತಿಸಲಾಗುತ್ತದೆ. ಇದನ್ನು ನೀರು ಕೋಳಿ (ವಾಟರ್ ಟರ್ಕಿ) ಎಂಬುದಾಗಿ ಉತ್ತರ ಸಂಯುಕ್ತ ರಾಷ್ಟ್ರಗಳಲ್ಲಿ ಕರೆಯುತ್ತಾರೆ.
ಸ್ಥಳೀಯ ಪುರಾಣ ಕಥೆ ಪ್ರಕಾರ ಕೆಟ್ಟದ್ದನ್ನು ಮಾಡುವ ಅತಿಮಾನುಷ ಶಕ್ತಿಯುಳ್ಳ ಕಾಡಿನ ಪಕ್ಷಿ ಇದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಇದಕ್ಕೆ ‘ದೆವ್ವದ ಹಕ್ಕಿ’(ಡೆವಿಲ್ ಬರ್ಡ್) ಎಂಬ ಹೆಸರೂ ಇದೆ. ಮೂಲತಃ ಪೂರ್ಚುಗೀಸ್ ಪದವಾದ ಇದರ ಹೆಸರನ್ನು ೧೮೧೮ರಲ್ಲಿ ಇಂಗ್ಲಿಷಿನಲ್ಲಿ ದಾಖಲಿಸಲಾಗಿತ್ತು.
ನೀರಿನ ಅಡಿಯಲ್ಲಿ ಮುಳುಗಿಕೊಂಡೇ ತನ್ನ ಆಹಾರವಾದ ಮೀನನ್ನು ಹಿಂಬಾಲಿಸುವ ಈ ಹಕ್ಕಿ, ಕೊಳ್ಳೆ ಹತ್ತಿರ ಬಂದ ತತ್ ಕ್ಷಣ ಅದನ್ನು ನೀರಿನಿಂದ ಮೇಲಕ್ಕೆ ಹಾರಿಸಿ, ಉದ್ಧವಾದ ಕೊರಳನ್ನು ಚಾಚಿ ಕೆಳಕ್ಕೆ ಬೀಳುವಾಗ ಕೊಕ್ಕಿನಿಂದ ಹಿಡಿದು ಬಳಿಕ ತಿನ್ನುತ್ತದೆ.
ಹಕ್ಕಿಯ ಮೀನು
ತಿನ್ನುವ ವೈಖರಿ ಚಿತ್ರ
ಲಭಿಸುವುದು
ಅತ್ಯಂತ ದುರ್ಲಭ. ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ
ಕ್ಯಾಮರಾದಲ್ಲಿ
ಸೆರೆಯದ ಇಂತಹ ಸಂದರ್ಭ
ಒಂದರ ಅಪರೂಪದ ಚಿತ್ರ
ಇದು.
ಸಮೀಪ
ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.
No comments:
Post a Comment