Tuesday, April 7, 2020

ಏಪ್ರಿಲ್ ಮಾಸಾಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆ: ಕೇಂದ್ರ ಪರಿಶೀಲನೆ

 ಏಪ್ರಿಲ್ ಮಾಸಾಂತ್ಯದವರೆಗೆ ಲಾಕ್ ಡೌನ್ ವಿಸ್ತರಣೆ:  ಕೇಂದ್ರ ಪರಿಶೀಲನೆ
ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸುವಂತೆ ರಾಜ್ಯಗಳು ಮತ್ತು ತಜ್ಞರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಮಾಸಾಂತ್ಯದವರೆಗೆ ದಿಗ್ಬಂಧನ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸರ್ಕಾರಿ ಮೂಲಗಳು 2020 ಏಪ್ರಿಲ್ 07ರ ಮಂಗಳವಾರ ತಿಳಿಸಿದವು.
ಏನಿದ್ದರೂ, ದಿಗ್ಬಂಧನ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ಹೇಳಿದವು. ದಿಗ್ಬಂಧನ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರವನ್ನು ಈವರೆಗೂ ತೆಗೆದುಕೊಳ್ಳಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು. ಯಾವುದೇ ವದಂತಿಗಳನ್ನು ಹರಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದರು.

ವಿಶ್ವಾದ್ಯಂತ ೭೫,೮೦೦ ಮಂದಿಯನ್ನು ಬಲಿ ಪಡೆದು, ೧೮೩ ರಾಷ್ಟ್ರಗಳ ೧೩. ಲಕ್ಷ ಜನರನ್ನು ಬಾಧಿಸಿರುವ ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ ದಿಗ್ಬಂಧನ ಮಂಗಳವಾರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಲವಾರು ರಾಜ್ಯ ಸರ್ಕಾರಗಳು ಮತ್ತು ತಜ್ಞರು ದಿಗ್ಬಂಧನ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರವು ಬಗ್ಗೆ ಪರಿಶೀಲಿಸುತ್ತಿದೆ ಎಂದು ಸುದ್ದಿ ಮೂಲ ತಿಳಿಸಿತು.

ಕೊರೋನಾವೈರಸ್ ವಿರೋಧಿ ಹೋರಾಟ ಸುದೀರ್ಘವಾದದ್ದು, ಬಳಲಬೇಡಿ ಅಥವಾ ವಿಶ್ರಮಿಸಬೇಡಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರವಷ್ಟೇ ಪಕ್ಷ ಕಾರ್‍ಯಕರ್ತರಿಗೆ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ನೀಡಿದ್ದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.
ಭಾರತದಲ್ಲಿ ಕೋವಿಡ್ -೧೯ ಈವರೆಗೆ ,೪೨೧ ಮಂದಿಯನ್ನು ಬಾಧಿಸಿದ್ದು, ಸಾವಿನ ಸಂಖ್ಯೆ ೧೧೭ಕ್ಕೆ ತಲುಪಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸರ್ಕಾರವು ಅಗತ್ಯ ಬಿದ್ದಲ್ಲಿ ದಿಗ್ಬಂಧನವನ್ನು ವಿಸ್ತರಿಸುವುದು ಎಂದು ಹೇಳಿದ್ದರೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ರಾಜ್ಯದಲ್ಲಿ ತತ್ ಕ್ಷಣವೇ ದಿಗ್ಬಂಧನ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ, ಅದನ್ನು ಹಂತಹಂತವಾಗಿ ಮಾತ್ರವೇ ಹಿಂತೆಗೆದುಕೊಳ್ಳಬಹುದು ಎಂದು ಹೇಳಿದ್ದರು.

ಆರ್ಥಿಕ ಚಟುವಟಿಕೆಯನ್ನು ಅಸ್ತವ್ಯಸ್ತಗೊಳಿಸಿರುವ ಹಾಗೂ ವಲಸೆ ಕಾರ್ಮಿಕರ ಭಾರೀ ಮರುವಲಸೆಗೆ ಕಾರಣವಾಗಿರುವ ದಿಗ್ಬಂಧನವು ಮಾರಕ ರೋಗವನ್ನು ತಡೆಯಲು ಅನಿವಾರ್ಯ ಕ್ರಮ ಎಂದು ತಜ್ಞರು ಹೇಳಿದ್ದರು.

ಕೊರೋನಾವೈರಸ್ ಸೋಂಕನ್ನು ರಾಷ್ಟ್ರದಲ್ಲಿ ಹರಡದಂತೆ ತಡೆಯುವ ಸಲುವಾಗಿ ದಿಗ್ಬಂಧನವನ್ನು ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಸೋಮವಾರ ಹೇಳಿದ್ದರು.
ಪ್ರಧಾನಿಯವರು
ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮಾರ್ಚ್ ೨೪ರಂದು ಘೋಷಿಸಿದ್ದರು.
ಪ್ರಸ್ತುತ ಹಂತದಲ್ಲಿ ಲಾಕ್ ಡೌನ್ ತೆರವುಗೊಳಿಸಿದರೆ ಅದು ಹಲವಾರು ಜೀವಹಾನಿಗೆ ಕಾರಣವಾದೀತು ಎಂದೂ ರಾವ್ ಎಚ್ಚರಿಸಿದ್ದರು.

ಕೆಸಿಆರ್ ಎಂಬುದಾಗಿಯೇ ಪರಿಚಿತರಾಗಿರುವ ಕೆಸಿಆರ್ ಅವರಿಗಿಂತ ಮುಂಚಿತವಾಗಿ ಉತ್ತರ ಪ್ರದೇಶದ ಉನ್ನತ ಅಧಿಕಾರಿಯೊಬ್ಬರೂ ರಾಜ್ಯದಲ್ಲಿ ಏಪ್ರಿಲ್ ೧೪ರಂದ ದಿಗ್ಬಂಧನ ತೆರವುಗೊಳಿಸುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರು.

ಪಂಜಾಬಿನ ಹಿರಿಯ ಅಧಿಕಾರಿಯೊಬ್ಬರು ಕೂಡಾ ದಿಗ್ಬಂಧನವನ್ನು ವಿಸ್ತರಿಸುವ ಬಗ್ಗೆ ಒಲವು ವ್ಯಕ್ತ ಪಡಿಸಿದ್ದಾರೆ. ಶುಕ್ರವಾರ ಮಹಾರಾಷ್ಟ್ರದ ಸಚಿವರೊಬ್ಬರು ಕೂಡಾ ಏಪ್ರಿಲ್ ೧೪ಂದು ನಿರ್ಬಂಧಗಳು ಕೊನೆಯಾಗುವುದಿಲ್ಲ ಎಂದು ಹೇಳಿದ್ದರು. ಮಹಾರಾಷ್ಟ್ರವು ದೇಶದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೊರೋನಾವೈರಸ್ ಸೋಂಕಿನ ಬಾಧೆಗೆ ತುತ್ತಾಗಿರುವ ರಾಜ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ ಮರುದಿನ, ಮಾರ್ಚ್ ೨೫ರಿಂದ ೨೧ ದಿನಗಳ ದಿಗ್ಬಂಧನ ದೇಶಾದ್ಯಂತ ಜಾರಿಗೆ ಬಂದಿದೆ. ಕೊರೋನಾವೈರಸ್ ಸೋಂಕಿನ ಪ್ರಸಾರ ಸರಪಣಿಯನ್ನು ತುಂಡರಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಘೋಷಿಸಿದ್ದರು. ಎಲ್ಲಿಗೂ ಪ್ರಯಾಣ ಮಾಡದಂತೆ ಜನತೆಯನ್ನು ಆಗ್ರಹಿಸಿದ್ದ ಮೋದಿ, ಎಲ್ಲಿದ್ದೀರೋ ಅಲ್ಲೇ ೨೧ ದಿನಗಳೂ ವಾಸ್ತವ್ಯ ಹೂಡಿ ಎಂದು ಸಲಹೆ ಮಾಡಿದ್ದರು.

ಮಂಗಳವಾರ ಬೆಳಗ್ಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಪ್ರಸ್ತುತ ಜಾರಿಯಲ್ಲಿರುವ ದಿಗ್ಬಂಧನ ಅಂತಿಮ ವಾರವು ಮುಂದಿನ ಕಾರ್‍ಯತಂತ್ರ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಅಂಕಿಸಂಖ್ಯೆಗಳು ನಿರ್ಗಮನ ತಂತ್ರದ ಬಗ್ಗೆ ಸರ್ಕಾರಕ್ಕೆ ನಿರ್ಣಯ ತೆಗೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದ್ದರು.

ಅಂತಿಮವಾಗಿ ಸರ್ಕಾರ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೋ ನಿರ್ಧಾರವನ್ನು ಪಾಲಿಸುವಂತೆ ಜನತೆಗೆ ಮನವಿ ಮಾಡಿದ ಉಪರಾಷ್ಟ್ರಪತಿ, ಏಪ್ರಿಲ್ ೧೪ರ ಆಚೆಗೂ ದಿಗ್ಬಂಧನ ಮುಂದುವರೆದರೆ, ಕಷ್ಟಗಳನ್ನು ಎದುರಿಸುವಲ್ಲಿ ಈವರೆಗೆ ತೋರಿದ ಸ್ಫೂರ್ತಿಯೊಂದಿಗೇ ಸರ್ಕಾರದ ಜೊತೆ ಸಹಕರಿಸಿ ಎಂದು ಕೋರಿದರು.

ಮಾರ್ಚ್ ೨೫ರಂದು ಜಾರಿಯಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧವು ಮಂಗಳವಾರ ಎರಡು ವಾರಗಳನ್ನು ಪೂರೈಸಿz. ಕೊರೋನಾವೈರಸ್ ಉಂಟು ಮಾಡಿರುವ ಹಾಲಿ ಬಿಕ್ಕಟ್ಟನ್ನು ನಿವಾರಿಸಲು ನಡೆಯುತ್ತಿರುವ ಯತ್ನಗಳ ಮಧ್ಯೆ ನನ್ನ ಅಭಿಪ್ರಾಯಗಳನ್ನು ಮತ್ತು ಕಾಳಜಿಯನ್ನು ಹೊತ್ತಿನಲ್ಲಿ ಜನತೆ ಮತ್ತು ನಾಯಕತ್ವಕ್ಕೆ ಮುಟ್ಟಿಸುವುದು ಸೂಕ್ತ ಎಂಬುದು ನನ್ನ ಭಾವನೆ ಎಂದು ಉಪರಾಷ್ಟ್ರಪತಿ ನುಡಿದರು.

No comments:

Advertisement