ತಬ್ಲಿಘಿ ಜಮಾತ್ ಲಿಂಕ್: ೧೪ ರಾಜ್ಯಗಲ್ಲಿ ೬೪೭ ಪ್ರಕರಣ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಪಿಡುಗಿದೆ ಸಂಬಂಧಿಸಿದ ೬೪೭ ಪ್ರಕರಣಗಳು ದೇಶದಲ್ಲಿ ರೋಗದ ’ಹಾಟ್
ಸ್ಪಾಟ್’ ಆಗಿ ಪರಿಣಮಿಸಿದರುವ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್
ಧಾರ್ಮಿಕ ಸಮಾವೇಶಕ್ಕೆ ಸಂಬಂಧ
ಪಟ್ಟ ಪ್ರಕರಣಗಳಾಗಿವೆ ಎಂದ
ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್
03ರ ಶುಕ್ರವಾರ ಪ್ರಕಟಿಸಿತು.
ಈ ಪ್ರಕರಣಗಳು ೧೪ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,
ಅಸ್ಸಾಂ, ದೆಹಲಿ, ಹಿಮಾಚಲ, ಹರಿಯಾಣ, ಜಮ್ಮು ಮತ್ತು
ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು
ಉತ್ತರ ಪ್ರದೇಶ ಈ ರಾಜ್ಯಗಳಲ್ಲಿ ಈ ಪ್ರಕರಣಗಳು ದೃಢಪಟ್ಟಿವೆ ಎಂದು ಅವರು ನುಡಿದರು.
ಇಸ್ಲಾಮೀ ಧರ್ಮ ಪ್ರಚಾರ ಗುಂಪಿನ ಸಮಾವೇಶವು ಮಾರ್ಚ್ ತಿಂಗಳಲ್ಲಿ ರಾಜಧಾನಿಯಲ್ಲಿನ ಆರು ಅಂತಸ್ತುಗಳ ಜಮಾತ್ ಕೇಂದ್ರ ಕಚೇರಿ
ಕಟ್ಟಡದಲ್ಲಿ ನಡೆದಿದ್ದು, ಇದು
ಅಪಾಯದ ಕರೆಗಂಟೆಗಳನ್ನು ಬಾರಿಸಿದೆ. ನಿಜಾಮುದ್ದೀನ್ ಪ್ರದೇಶದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಾಗೂ ಪ್ರಸ್ತುತ ದೇಶಾದ್ಯಂತ ಚದುರಿಹೋಗಿರುವ ಜಮಾತ್
ಪ್ರತಿನಿಧಿಗನ್ನು ಮತ್ತು ಅವರ
ಜೊತೆಗೆ ಸಂಪರ್ಕ ಹೊಂದಿದವರ ಪತ್ತೆಗಾಗಿ ಅಧಿಕಾರಿಗಳು ತೀವ್ರ
ಯತ್ನ ನಡೆಸುತ್ತಿದ್ದಾರೆ.
ಕಳೆದ
೨೪ ಗಂಟೆಗಳಲ್ಲಿ ಹನ್ನೆರಡು ಕೋವಿಡ್ -೧೯ ಸಾವುಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೫೬ ಮುಟ್ಟಿದೆ ಎಂದು
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.
ಹನ್ನೆರಡು ಸಾವುಗಳಲ್ಲಿ ಜಮಾತ್ ಸಮಾವೇಶಕ್ಕೆ ಸಂಬಂಧಿಸಿದ ಪ್ರಕರಣಗಳು ಎಷ್ಟು
ಎಂಬ ಪ್ರಶ್ನೆಗೆ ಈ ಹಂತದಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ
ಎಂದು ಅಗರವಾಲ್ ಉತ್ತರಿಸಿದರು.
ದೇಶದಲ್ಲಿ ೨,೩೦೧ ಪ್ರಕರಣಗಳು ದಾಖಲಾಗಿವೆ ಮತ್ತು ಅವುಗಳ
ಪೈಕಿ ೩೩೬ ಪ್ರಕರಣಗಳು ಗುರುವಾರದಿಂದೀಚೆಗೆ ವರದಿಯಾಗಿವೆ ಎಂದು
ಅಗರವಾಲ್ ನುಡಿದರು. ೧೫೭
ರೋಗಿಗಳು ಚೇತರಿಸಿದ್ದಾರೆ ಎಂದು
ಅವರು ನುಡಿದರು.
ಮೂರು
ಮಿಲಿಯನ್ (೩೦ ಲಕ್ಷ)
ಜನರು ಆರೋಗ್ಯ ಸೇತು
ಆಪ್ ಡೌನ್ಲೋಡ್
ಮಾಡಿಕೊಂಡಿದ್ದಾರೆ ಎಂದ ಅಗರವಾಲ್ ಹೇಳಿದರು. ಕೊರೋನಾವೈರಸ್ ಸೋಂಕು ತಗುಲುವಿಕೆಯ ಅಪಾಯ
ಬಗ್ಗೆ ಅಂದಾಜು ಮಾಡುವಲ್ಲಿ ಸರ್ಕಾರ ಮತ್ತು ಖಾಸಗಿ
ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ಆರೋಗ್ಯ ಸೇತು
ಆಪ್ ನೆರವಾಗುತ್ತದೆ.
ಶಂಕಿತ
ಕೊರೋನಾವೈರಸ್ ರೋಗಿಗಳನ್ನು ತಪಾಸಣೆ ಮಾಡುವ ಸಲುವಾಗಿ ಮನೆ
ಮನೆಗೆ ಭೇಟಿ ನೀಡುತ್ತಿರುವ ವೈದ್ಯರ ಮೇಲೆ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲ
ನೀಡುವಂತೆ ಅಗರವಾಲ್ ನಾಗರಿಕರಿಗೆ ಮನವಿ ಮಾಡಿದರು.
ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ (ಹರ್ಷವರ್ಧನ್) ತಿಳಿಸಲಾಗಿದ್ದು, ಅವರು
ಈ ಬಗ್ಗೆ ಕಾಳಜಿ
ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಕೂಡಾ ಆರೋಗ್ಯ ಕಾರ್ಯಕರ್ತರ ಕೆಲಸವನ್ನು ಶ್ಲಾಘಿಸಿದ್ದಾರೆ. ಇಂತಹ
ಸವಾಲಿನ ಪರಿಸ್ಥಿತಿಯಲ್ಲಿ ಸಾಧ್ಯವಿರುವ ಪ್ರತಿಯೊಂದು ವಿಧಾನದಲ್ಲೂ ನಾವು
ಅವರನ್ನು ಬೆಂಬಲಿಸಬೇಕು ಎಂದು
ಅಗರವಾಲ್ ಹೇಳಿದರು.
ಆರೋಗ್ಯ ಕಾರ್ಯಕರ್ತರನ್ನು ಗುರಿಮಾಡಿ ದಾಳಿ
ನಡೆಸುವವರ ವಿರುದ್ಧ ಕಠಿಣ
ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ
ನೀಡಿದೆ ಎಂದು ಇದೇ
ಸಂದರ್ಭದಲ್ಲಿ ಕೇಂದ್ರ ಗೃಹ
ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ
ಸಲಿಲ ಶ್ರೀವಾಸ್ತವ ಹೇಳಿದರು.
ತ್ವರಿತ ಪ್ರತಿಕಾಯ ರೋಗ ನಿರ್ಣಯಕ್ಕೆ (ರಾಪಿಡ್ ಆಂಟಿಬಾಡಿ ಡಯಗ್ನಾಸ್ಟಿಕ್ಸ್) ಮಾರ್ಗದರ್ಶನಗಳನ್ನು ಶನಿವಾರದ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮನೋಜ್ ಮುರ್ಹೇಕರ್ ಹೇಳಿದರು.
ಭಾರತವು ಅತ್ಯಂತ ತ್ವರಿತವಾದ ಮತು
ಅಗ್ಗದ ಪ್ರತಿಕಾಯ ರೋಗ
ನಿರ್ಣಯ ವಿಧಾನವನ್ನು ’ಹಾಟ್
ಸ್ಟಾಟ್’ ಸ್ಥಳಗಳಲ್ಲಿ ಕೊರೋನಾವೈರಸ್ ರೋಗ ಪತ್ತೆಗಾಗಿ ಅನುಸರಿಸಲು ಅನುಮತಿ ನೀಡಿದೆ. ದೇಶದ
೨೦ ಸ್ಥಳಗಳನ್ನು ಗುಂಪು
ಸೋಂಕು ಹರಡುವಿಕೆ ಕೇಂದ್ರಗಳಾಗಿ (ಹಾಟ್ ಸ್ಪಾಟ್) ಗುರುತಿಸಲಾಗಿದೆ.
ಭಾರತ
ಈವರೆಗೆ ೬೬,೦೦೦
ಪರೀಕ್ಷೆಗಳನ್ನು ನಡೆಸಿದ್ದು, ಅವುಗಳ
ಪೈಕಿ ೮೦೦೦ ಪರೀಕ್ಷೆಗಳನ್ನು ಗುರುವಾರ ಒಂದೇ ದಿನ
ನಡೆಸಲಾಗಿದೆ. ಒಂದೇ ದಿನ
ಇಷ್ಟೊಂದು ಪರೀಕ್ಷೆ ನಡೆಸಿದ್ದು ಇದೇ ಹೆಚ್ಚು’ ಎಂದು
ಅವರು ನುಡಿದರು.
No comments:
Post a Comment