Sunday, April 12, 2020

ಕೊರೊನಾ ಸೋಂಕು: ಅಮೆರಿಕದಲ್ಲಿ ೨೦ ಸಾವಿರ ಜನ ಬಲಿ

ಕೊರೊನಾ ಸೋಂಕು: ಅಮೆರಿಕದಲ್ಲಿ ೨೦ ಸಾವಿರ ಜನ ಬಲಿ
ವಾಷಿಂಗ್ಟನ್: ವಿಶ್ವಾದ್ಯಂತ  ವ್ಯಾಪಿಸಿರುವ ಕೊರೊನಾವೈರಸ್ ಸೋಂಕಿಗೆ ಈವರೆಗೆ ೧.೮ ಲಕ್ಷ ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಪ್ರಕರಣದಲ್ಲಿ ಅಮೆರಿಕವು ಚೀನಾವನ್ನೂ ಹಿಂದಿಕ್ಕಿದ್ದು, ೨೦ ಸಾವಿರ ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ೨೪ ಗಂಟೆಯಲ್ಲಿ ೯೧೧ ಜನರು ಕೋವಿಡ್ -19 ಸೋಂಕಿಗೆ ಮೃತರಾದರು. ಶನಿವಾರ ೨೬ ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ೫.೩ ಲಕ್ಷ ದಾಟಿತು.

ಬರೋಬ್ಬರಿ ೨೦,೫೭೭ ಜನರು ಮೃತರಾದರು.  ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿರಲಿಲ್ಲ. ಇದು ಕೊರೋನಾ ವೈರಸ್ ಹರಡಲು ಪ್ರಮುಖ ಕಾರಣ ಎನ್ನಲಾಯಿತು.

ಜನ ನಿಬಿಡ ನಗರಗಳಾದ ನ್ಯೂಯಾರ್ಕ್ ಸೇರಿ ಹಲವು ಕಡೆಗಳಲ್ಲಿ ಕೊರೋನಾಸೋಂಕು  ಕಾಣಿಸಿಕೊಂಡಿದ್ದು, ವೈರಸ್ ಕಬಂದ ಬಾಹು ಚಾಚುತ್ತಿದೆ.

ಸ್ಪೇನ್ ಕೂಡ ಈ ಭೀಕರ ವೈರಸ್ ದಾಳಿಗೆ ತತ್ತರಿಸಿದೆ. ೧.೬೩ ಲಕ್ಷ ಜನರಿಗೆ  ಕೊರೋನಾ ಸೋಂಕು ಬಾಧಿಸಿದೆ. ೧೬ ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ೧೫ ಲಕ್ಷ ಜನರಿಗೆ ಸೋಂಕು ಅಂಟಿದ್ದು, ೧೯ ಸಾವಿರ ಮಂದಿ ಅಸುನೀಗಿದ್ದಾರೆ.

ಮೊಟ್ಟ ಮೊದಲು ಕೊರೋನಾ ವೈರಸ್ ಕಾಣಿಸಿಕೊಂಡಿದ್ದ ಚೀನಾದಲ್ಲಿ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಕೊರೋನಾ ಮುಕ್ತ ರಾಷ್ಟ್ರ ಆಗುವ ಭರವಸೆಯನ್ನು ಚೀನಾ ವ್ಯಕ್ತಪಡಿಸಿದೆ. 

No comments:

Advertisement