ಭಾರತ: ಕೊರೋನಾವೂ
ಹೆಚ್ಚು, ಚೇತರಿಕೆಯೂ ಹೆಚ್ಚು
ನವದೆಹಲಿ: ಒಂದೇ ದಿನ ೭,೯೬೪ ಹೊಸ ಪ್ರಕರಣಗಳೊಂದಿಗೆ ಕೋವಿಡ್ -೧೯ ಸೋಂಕಿಗೆ ಒಳಗಾದವರ ಸಂಖ್ಯೆ ಭಾರತದಲ್ಲಿ 2020 ಮೇ 30ರ ಶನಿವಾರ ೧,೭೩,೭೬೩ಕ್ಕೆ ಏರಿತು. ಒಂದೇ ದಿನ ೨೬೫ ಜನರ ಸಾವಿನೊಂದಿಗೆ ಸಾವಿನ ಸಂಖ್ಯೆ ಕೂಡಾ ೪೯೭೧ಕ್ಕೆ ತಲುಪಿತು. ಆದರೆ ಕೊರೋನಾವೈರಸ್ಸಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡಾ ಗಮನಾರ್ಹವಾಗಿ ವೃದ್ಧಿಯಾಗಿದ್ದು ಹೊಸ ಭರವಸೆಯನ್ನು ಮೂಡಿಸಿತು.
ನಾಲ್ಕನೇ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಮುಕ್ತಾಯಕ್ಕೆ ಕೇವಲ ಒಂದು ದಿನ ಇರುವಾಗ ದೇಶzಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೧,೨೬೪ ಮಂದಿ ರೋಗಿಗಳು ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ ಚೇತರಿಕೆ ಪ್ರಮಾಣ ಶೇಕಡಾ ೪.೫೧ರಷ್ಟು ಹೆಚ್ಚಿದ್ದು, ಒಟ್ಟು ಚೇತರಿಕೆ ಪ್ರಮಾಣ ಶೇಕಡಾ ೪೭.೪೦ಕ್ಕೆ ಏರಿದೆ. ಇದರಿಂದಾಗಿ ಸಕ್ರಿಯ ರೋಗಿಗಳ ಸಂಖ್ಯೆ ೮೯,೯೮೭ರಿಂದ ೮೬,೪೨೨ಕ್ಕೆ ಇಳಿದಿದೆ ಎಂದು ಸರ್ಕಾರ ತಿಳಿಸಿತು.
ಈ ಮಧ್ಯೆ ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ದಿಗ್ಬಂಧನವನ್ನು ಜೂನ್ ೧೫ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಶುಕ್ರವಾರ ಬೆಳಗ್ಗಿನಿಂದ ಶನಿವಾರದವರೆಗಿನ ವರದಿಗಳ ಪ್ರಕಾರ ೨೬೫ ಜನರು ಕೊರೋನಾಕ್ಕೆ ಬಲಿಯಾಗಿದ್ದು, ಇವರ ಪೈಕಿ ೧೧೬ ಮಂದಿ ಮಹಾರಾಷ್ಟ್ರದಲ್ಲಿ, ೮೨ ಮಂದಿ ದೆಹಲಿಯಲ್ಲಿ, ೨೦ ಮಂದಿ ಗುಜರಾತಿನಲ್ಲಿ, ೧೩ ಮಂದಿ ಮಧ್ಯಪ್ರದೇಶದಲ್ಲಿ, ೯ ಮಂದಿ ತಮಿಳುನಾಡಿನಲ್ಲಿ, ೭ ಮಂದಿ ಪಶ್ಚಿಮ ಬಂಗಾಳದಲ್ಲಿ ತಲಾ ನಾಲ್ವರು ತೆಲಂಗಾಣ ಮತ್ತು ರಾಜಸ್ಥಾನದಲ್ಲಿ, ಇಬ್ಬರು ಪಂಜಾಬಿನಲ್ಲಿ ಮತ್ತು ತಲಾ ಒಬ್ಬರು ಛತ್ತೀಸಗಢ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಮೃತರಾಗಿದ್ದಾರೆ.
ಒಟ್ಟು ೪,೯೭೧ ಸಾವುಗಳ ಪೈಕಿ, ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ೨,೦೯೮ ಮಂದಿ ಸಾವನ್ನಪ್ಪಿದ್ದಾರೆ. ಗುಜರಾತಿನಲ್ಲಿ ೯೮೦, ದೆಹಲಿಯಲ್ಲಿ ೩೯೮, ಮಧ್ಯಪ್ರದೇಶದಲ್ಲಿ ೩೩೪, ಪಶ್ಚಿಮ ಬಂಗಾಳದಲ್ಲಿ ೩೦೨, ಉತ್ತರ ಪ್ರದೇಶದಲ್ಲಿ ೧೯೮, ರಾಜಸ್ಥಾನದಲ್ಲಿ ೧೮೪, ತಮಿಳುನಾಡಿನಲ್ಲಿ ೧೫೪, ತೆಲಂಗಾಣದಲ್ಲಿ ೭೧ ಮತ್ತು ಆಂಧ್ರಪ್ರದೇಶದಲ್ಲಿ ೬೦ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸಾವಿನ ಸಂಖ್ಯೆ ೪೮ಕ್ಕೆ, ಪಂಜಾಬಿನಲ್ಲಿ ೪೨ಕ್ಕೆ, ಜಮ್ಮು ಮತ್ತು ಕಾಶ್ಮೀರದಲ್ಲಿ ೨೮ಕ್ಕೆ, ಹರಿಯಾಣದಲ್ಲಿ ೧೯ಕ್ಕೆ, ಬಿಹಾರದಲ್ಲಿ ೧೫ಕ್ಕೆ, ಕೇರಳದಲ್ಲಿ ೮ಕ್ಕೆ ಮತ್ತು ಒಡಿಶಾದಲ್ಲಿ ೭ಕ್ಕೆ ಏರಿದೆ.
ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡ ಈವರೆಗೆ ತಲಾ ೫ ಕೋವಿಡ್ ಸಾವುಗಳನ್ನು ದಾಖಲಿಸಿದ್ದು ಚಂಡೀಗಢ ಮತ್ತು ಅಸ್ಸಾಮಿನಲ್ಲಿ ಈವರೆಗೆ ತಲಾ ೪ ಸಾವುಗಳು ದಾಖಲಾಗಿವೆ. ಮೇಘಾಲಯ ಮತ್ತು ಛತ್ತೀಸಗಢದಲ್ಲಿ ತಲಾ ೧ ಕೊರೋನಾ ಸಾವುಗಳು ದಾಖಲಾಗಿವೆ ಎಂದು ಸಚಿವಾಲಯ ಮಾಹಿತಿ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ಮಾಹಿತಿ ಪ್ರಕಾರ ಶೇಕಡಾ ೭೦ರಷ್ಟು ಸಾವುUಳು ತೀವ್ರತರದ ಅಸ್ವಸ್ಥತೆಗಳಿದ್ದವರಲ್ಲಿ ಸಂಭವಿಸಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೬೦,೬೭,೨೮೩, ಸಾವು ೩,೬೭,೫೮೬
ಚೇತರಿಸಿಕೊಂಡವರು- ೨೬,೮೭,೦೬೬
ಅಮೆರಿಕ ಸೋಂಕಿತರು ೧೭,೯೭,೦೨೫, ಸಾವು ೧,೦೪,೬೩೨
ಸ್ಪೇನ್ ಸೋಂಕಿತರು ೨,೮೫,೬೪೪, ಸಾವು ೨೭,೧೨೧
ಇಟಲಿ ಸೋಂಕಿತರು ೨,೩೨,೨೪೮, ಸಾವು ೩೩,೨೨೯
ಜರ್ಮನಿ ಸೋಂಕಿತರು ೧,೮೩,೧೧೮, ಸಾವು ೮,೫೯೮
ಚೀನಾ ಸೋಂಕಿತರು ೮೨,೯೯೯, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೭೧,೨೨೨, ಸಾವು ೩೮,೧೬೧
ಅಮೆರಿಕದಲ್ಲಿ ೯೦ ಇರಾನಿನಲ್ಲಿ ೫೭, ಬೆಲ್ಜಿಯಂನಲ್ಲಿ ೨೩, ಇಂಡೋನೇಷ್ಯ ೫೩, ನೆದರ್ ಲ್ಯಾಂಡ್ಸ್ನಲ್ಲಿ ೨೦, ರಶ್ಯಾದಲ್ಲಿ ೧೮೧, ಸ್ವೀಡನ್ನಲ್ಲಿ ೪೫s, ಮೆಕ್ಸಿಕೋದಲ್ಲಿ ೩೭೧ ಒಟ್ಟಾರೆ ವಿಶ್ವಾದ್ಯಂತ ೧,೧೬೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment