Saturday, May 2, 2020

ಮೇ ೧೭ರವರೆಗೆ ಎಲ್ಲ ವಿಮಾನಯಾನ ಅಮಾನತು

ಮೇ ೧೭ರವರೆಗೆ ಎಲ್ಲ ವಿಮಾನಯಾನ ಅಮಾನತು
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪ್ರಸರಣವನ್ನು ತಡೆಗಟ್ಟಲು ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸಿದ ಕ್ರಮಕ್ಕೆ ಅನುಗುಣವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನೂ 2020 ಮೇ 02ರ ಶನಿವಾರ ಮೇ ೧೭ರವರೆಗೆ ವಿಸ್ತರಿಸಲಾಯಿತು.

ನಿರ್ಬಂಧವು ಎಲ್ಲ ಅಂತಾರಾಷ್ಟ್ರೀಯ ಸರಕು ಸಾಗಾಟಕ್ಕೆ ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಅನುಮತಿ ನೀಡಿದ ವಿಶೇಷ ವಿಮಾನ ಯಾನಗಳಿಗೆ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ತಿಳಿಸಿತು.

ವಿದೇಶೀ ಮತ್ತು ದೇಶೀಯ ವಿಮಾನಯಾನಗಳ ಪುನಾರಂಭದ ವೇಳೆಯನ್ನು ಮುಂದಕ್ಕೆ ತಿಳಿಸಲಾಗುವುದು ಎಂದೂ ಡಿಜಿಸಿಎ ಹೊರಡಿಸಿದ ಸುತ್ತೋಲೆ ಹೇಳಿತು.

ಮಧ್ಯೆ ವಿಮಾನಯಾನ ಸಂಸ್ಥೆಗಳು ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನೂತನ ಸಾಮಾಜಿಕ ಅಂತರದ ಬಗ್ಗೆ ಸಿಬ್ಬಂದಿಗೆ ಶಿಕ್ಷಣ ನೀಡಲು ಅಣಕು ಕವಾಯತುಗಳನ್ನು ಆರಂಭಿಸಿದವು.

ಪ್ರಧಾನಿ ಮೋದಿಯವರು ಈಗಾಗಲೇ ದೋ ಗಜ್ ದೂರಿ (ಎರಡು ಯಾರ್ಡ್ ಅಂತರ) ಮಹತ್ವದ ಬಗ್ಗೆ ಒತ್ತು ನೀಡಿದ್ದಾರೆ. ದೋ ಗಜ್ ದೂರಿ ಎಂಬುದು ಕೋರೋನಾವೈರಸ್ ಸಾಂಕ್ರಾಮಿಕ ವಿರೋಧಿ ಸಮರದಲ್ಲಿ ನಮ್ಮ ಮಂತ್ರವಾಗಬೇಕು ಎಂದು ಮೋದಿ ಹೇಳಿದರು.

ಶುಕ್ರವಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ತನ್ನ ದೇಶೀಯ ವಾಯು ಸಂಚಾರವನ್ನು .- ಕೋಟಿ ಇಳಿಸಿ ಪರಿಷ್ಕರಿಸಿದ ಜಾಗತಿಕ ವಾಯುಯಾನ ಸಲಹಾ ಪ್ರಾಧಿಕಾರ ಸಿಎಪಿಎ, ರಚನಾತ್ಮಕ ಹಾನಿ ಮತ್ತು ಗ್ರಾಹಕರ ದುರ್ಬಲ ಮನೋಭಾವ ಎದ್ದು ಕಾಣುತ್ತಿದೆ ಎಂದು ಉಲ್ಲೇಖಿಸಿತ್ತು.

ಇತ್ತೀಚಿನ ಮುನ್ಸೂಚನೆಯು ಇದೇ ಅವಧಿಗೆ ಮೊದಲೇ ಅಂದಾಜು ಮಾಡಲಾದ - ಕೋಟಿ ಪ್ರಯಾಣಿಕರ ದಟ್ಟಣೆಗೆ ಹೋಲಿಸಿದರೆ ಗಣನೀಯವಾದ ಕೆಳಮುಖ ಪರಿಷ್ಕರಣೆಯಾಗಿದೆ.
ಸಾಮಾಜಿಕ ಅಂತರ ಪಾಲನೆಯ ಶಿಷ್ಟಾಚಾರವು ವಿಮಾನಗಳ ಪ್ರಯಾಣಿಕ ಸಂಖ್ಯೆಯ ಮೇಲೂ ಪರಿಣಾಮ ಬೀರಲಿದ್ದು. ನಿರ್ಬಂಧಗಳು ಇಲ್ಲದೇ ಇದ್ದರೂ ಪ್ರಯಾಣಿಕರ ಸಂಖ್ಯೆ ತಗ್ಗುವ ನಿರೀಕ್ಷೆಯಿದೆ ಎಂದು ಸಿಎಪಿಎ ಹೇಳಿದೆ.

ಭಾರತದ ನಾಗರಿಕ ವಿಮಾನಯಾನ ರಂಗವನ್ನು ಹೆಚ್ಚು ದಕ್ಷಗೊಳಿಸಲು ಮತ್ತು ಹಾಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಮತ್ತು ಕೊರೋನಾವೈರಸ್ ವಿರೋಧೀ ಹೋರಾಟಕ್ಕಾಗಿ ಭಾರತೀಯ ಗಗನಯಾನವನ್ನು ಸ್ಥಗಿತಗೊಳಿಸಿದ್ದರಿಂದ ಆಗಿರುವ ಪರಿಣಾಮಗಳನ್ನು ನಿಭಾಯಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಯೋಜನೆಗಳ ಪುನರ್ ಪರಿಶೀಲನಾ ಸಭೆಯನ್ನೂ ನಡೆಸಿದ್ದರು.

No comments:

Advertisement