Monday, May 4, 2020

ಆಕ್ರಮಿತ ಕಾಶ್ಮೀರ ತೆರವು: ಪಾಕಿಸ್ತಾಕ್ಕೆ ಭಾರತ ಸೂಚನೆ

ಆಕ್ರಮಿತ  ಕಾಶ್ಮೀರ ತೆರವು: ಪಾಕಿಸ್ತಾಕ್ಕೆ  ಭಾರತ ಸೂಚನೆ
ನವದೆಹಲಿ: ಭಾರತದ ಅವಿಭಾಜ್ಯ  ಅಂಗವಾಗಿರುವ ಜಮ್ಮು- ಕಾಶ್ಮೀರ ಕೆಲ ಪ್ರದೇಶಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ಅಲ್ಲಿ ಚುನಾವಣೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನದ ಯತ್ನಗಳನ್ನು ವಿರೋಧಿಸಿರುವ ಭಾರತ, ತಿಕ್ರಮಿಸಿಕೊಂಡಿರುವ ಪ್ರದೇಶಗಳಿಂದ  ತತ್ ಕ್ಷಣವೇ ತೊಲಗುವಂತೆ ಪಾಕಿಸ್ತಾನಕ್ಕೆ  2020 ಮೇ 04 ಸೋಮವಾರ ಸೂಚಿಸಿತು.

ಗಿಲ್ಗಿಟ್-ಬಾಲ್ಟಿಸ್ಥಾನದಲ್ಲಿ  ಚುನಾವಣೆ ನಡೆಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಇತ್ತೀಚೆಗೆ ಆದೇಶ ನೀಡಿತ್ತು. ೨೦೧೮ರಲ್ಲಿ ನೀಡಲಾಗಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿ ಸುಪ್ರೀಂಕೋರ್ಟ್ ಹೊಸ  ಆದೇಶ ನೀಡಿತ್ತು.

ಪಾಕ್ ಸುಪ್ರೀಂಕೋರ್ಟಿನ  ಹೊಸ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಭಾರತ, ಕೂಡಲೇ  ಅತಿಕ್ರಮಿತ ಪ್ರದೇಶಗಳಿಂದ ವಾಪಸ್ ತೆರಳುವಂತೆ ಸೂಚನೆ ನೀಡಿದೆ.

ಗಿಲ್ಗಿಟ್-ಬಾಲ್ಟಿಸ್ತಾನ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಪಾಕಿಸ್ತಾನಕ್ಕೆ ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿತು.

ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ  ಅಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಕುರಿತು ಆಕ್ಷೇಪ ವ್ಯಕ್ತಪಡಿಸಲಾಗಿದೆಎಂದೂ ಸಚಿವಾಲಯ ತಿಳಿಸಿತು.

ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹೀಗಾಗಿ ಪ್ರದೇಶಗಳ ಮೇಲೆ ಪಾಕಿಸ್ತಾನಕ್ಕಾಗಲೀ ದೇಶದ ಸುಪ್ರೀಂ ಕೋರ್ಟಿಗಾಗಲೇ ಯಾವುದೇ ಹಕ್ಕಿಲ್ಲ ಎಂದು ಸಚಿವಾಲಯ ಹೇಳಿತು.

ಪಾಕಿಸ್ತಾನದ ಕ್ರಮಗಳನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ದೇಶ ಅತಿಕ್ರಮಿಸಿಕೊಂಡಿರುವ ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆಎಂದೂ ಸಚಿವಾಲಯ ತಿಳಿಸಿತು.

No comments:

Advertisement