ವಿಶ್ವ ಆರೋಗ್ಯ ಸಂಸ್ಥೆ ಕಾರ್ಯ ನಿರ್ವಾಹಕ ಮಂಡಳಿ
ಅಧ್ಯಕ್ಷರಾಗಿ ಹರ್ಷ ವರ್ಧನ್
ಅಧ್ಯಕ್ಷರಾಗಿ ಹರ್ಷ ವರ್ಧನ್
ನವದೆಹಲಿ: ದೇಶದಲ್ಲಿ ಕೋವಿಡ್ -೧೯ ವಿರುದ್ಧದ ಯುದ್ಧವನ್ನು ಮುನ್ನಡೆಸುತ್ತಿರುವ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಮುಂದಿನ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಲು ಭಾರತದ ನಾಮನಿರ್ದೇಶಿತರಾಗಲಿದ್ದಾರೆ ಎಂದು ನಂಬಲರ್ಹ ಮೂಲಗಳು 2020 ಮೇ 19ರ ಮಂಗಳವಾರ ತಿಳಿಸಿದವು.
ಮೇ ೨೨ ರಂದು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಆರೋಗ್ಯ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣೆಯು ಕಾರ್ಯವಿಧಾನದ ಔಪಚಾರಿಕತೆ ಮಾತ್ರವಾಗಿದೆ.
"ಇದು ಪೂರ್ಣಾವಧಿಯ ಹುದ್ದೆ ಅಲ್ಲ ... ಆದರೆ ಕಾರ್ಯನಿರ್ವಾಹಕ ಮಂಡಳಿಯ ದ್ವೆ-ವಾರ್ಷಿಕ ಸಭೆಗಳ ಅಧ್ಯಕ್ಷತೆಯನ್ನು ವಹಿಸಲು ಡಾ. ಹರ್ಷ ವರ್ಧನ್ ಇರಬೇಕಾಗುತ್ತದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಗುಂಪು ಕಳೆದ ವರ್ಷ ಭಾರತವನ್ನು 2020ರ ಮೇ ತಿಂಗಳಿನಿಂದ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಾಹಕ ಮಂಡಳಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿತ್ತು.
No comments:
Post a Comment