ಭಾರತದಲ್ಲಿ ಕೋವಿಡ್ ಪ್ರಕರಣ ೮೨,೦೦೦, ಸಾವು ೨೬೪೯
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು 2020 ಮೇ 15ರ ಶುಕ್ರವಾರ ೮೨,೦೦೦ದ ಸಮೀಪಕ್ಕೆ ಬಂದಿವೆ. ಸಾವಿನ ಸಂಖ್ಯೆ ೨,೬೪೯ಕ್ಕೆ ಏರಿದೆ.
ಏನಿದ್ದರೂ, ಕೋವಿಡ್-೧೯ ಪರೀಕ್ಷೆಯ ಪ್ರಮಾಣವೂ ಹನ್ನೆರಡು ದಿನಗಳಲ್ಲಿ ದುಪ್ಪಟ್ಟಾಗಿದ್ದು, ಗುರುವಾರ ಒಂದೇ ದಿನ ೨೦ ಲಕ್ಷ ಜನರನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.
ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ ಕೊರೋನಾವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ೮೧,೯೭೦. ಸಾವಿನ ಸಂಖ್ಯೆ ೨೬೪೯. ಗುಣಮುಖರಾದವರ ಸಂಖ್ಯೆ ೨೭,೯೨೦. ಸಕ್ರಿಯ ಪ್ರಕರಣಗಳ ಸಂಖ್ಯೆ ೫೧,೪೦೧.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೫,೬೯,೦೬೪, ಸಾವು ೩,೦೪,೭೯೪
ಚೇತರಿಸಿಕೊಂಡವರು- ೧೭,೨೪,೯೦೭
ಅಮೆರಿಕ ಸೋಂಕಿತರು ೧೪,೬೦,೯೮೮, ಸಾವು ೮೭,೦೨೫
ಸ್ಪೇನ್ ಸೋಂಕಿತರು ೨,೭೪,೩೬, ಸಾವು ೨೭,೪೫೯
ಇಟಲಿ ಸೋಂಕಿತರು ೨,೨೩,೦೯೬,
ಸಾವು ೩೧,೩೬೮
ಜರ್ಮನಿ ಸೋಂಕಿತರು ೧,೭೫,೧೨೩, ಸಾವು ೭,೯೩೩
ಚೀನಾ ಸೋಂಕಿತರು ೮೨,೯೩೩, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೨,೩೬,೭೧೧, ಸಾವು ೩೩,೯೯೮
ಅಮೆರಿಕದಲ್ಲಿ ೧೧೩, ಇರಾನಿನಲ್ಲಿ ೪೮, ಬೆಲ್ಜಿಯಂನಲ್ಲಿ ೫೬, ಸ್ಪೇನಿನಲ್ಲಿ ೧೩೮, ನೆದರ್ ಲ್ಯಾಂಡ್ಸ್‌ನಲ್ಲಿ ೫೩, ರಶ್ಯಾದಲ್ಲಿ ೧೧೩, ಸ್ವೀಡನ್‌ನಲ್ಲಿ ೧೧೭, ಮೆಕ್ಸಿಕೋದಲ್ಲಿ ೨೫೭, ಇಂಗ್ಲೆಂಡಿನಲ್ಲಿ ೩೮೪ ಒಟ್ಟಾರೆ ವಿಶ್ವಾದ್ಯಂತ ೧,೭೧೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment