‘ಪ್ರಕಾಶವಾಣಿ’ ಕೇಳಿದಿರಾ?
ಮದ್ಯ
ಅಂತರ ಕಾಪಾಡಿಕೊಂಡವರು..!
ಕೊರೋನಾವೈರಸ್ ವಿರುದ್ಧದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್ ) ಮೂರನೇ ಆವೃತ್ತಿ ಆರಂಭವಾಗಿದೆ. ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಸೃಷ್ಟಿಸಿ, ಹಲವಾರು ನಿರ್ಬಂಧಗಳನ್ನು ಸಡಿಲಿಸಿ ಸರ್ಕಾರ ಆದೇಶಗಳನ್ನು ಹೊರಡಿಸಿದ್ದರೂ, ದೇಶಾದ್ಯಂತ ಬಹಳಷ್ಟು ಸದ್ದು ಮಾಡುತ್ತಿರುವುದು ಕುಡುಕರ ಸುದ್ದಿ.
ದಿನ ಮುಂಚಿತವಾಗಿಯೇ, ಸಾಲುಗಟ್ಟಿ ಮದ್ಯದಂಗಡಿಗಳ ಮುಂದೆ ನಿಂತವರು, ಸಾಲಿನಲ್ಲಿ ‘ಗಟ್ಟಿ’ ಇಲ್ಲದಿದ್ದವರು ಕುಸಿದು ಬಿದ್ದದ್ದು, ಮದ್ಯದಂಗಡಿಗಳು ದೀಪಾರತಿ ಮಾಡಿದ್ದು ಇತ್ಯಾದಿ ವರದಿಗಳ ಮಧ್ಯೆ, ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಕುಡುಕರನ್ನು ನಿಯಂತ್ರಿಸಲಾಗದೆ ದೆಹಲಿಯಲ್ಲಿ ಅಂಗಡಿಗಳನ್ನೇ ಮುಚ್ಚಿಸಿದ ವರ್ತಮಾನ ಬಂದರೆ, ಕೆಲವೆಡೆಗಳಲ್ಲಿ ಕುಡುಕರು ‘ಶಿಸ್ತಿನ’ ಸೈನಿಕರಂತೆ ನಿಂತ ಚಿತ್ರಗಳೂ ವಾಟ್ಸಪ್, ಟ್ವಿಟ್ಟರುಗಳಲ್ಲಿ ಹರಿದಾಡುತ್ತಿವೆ.
ದಕ್ಷಿಣ ಕನ್ನಡ
ಜಿಲ್ಲೆಯ ವಿಟ್ಲದ ಕುಡುಕರ ಶಿಸ್ತಿನ ಚಿತ್ರವೊಂದನ್ನು ಇಲ್ಲಿ
ಗಮನಿಸಬಹುದು. (ಚಿತ್ರ:
ಶ್ರೀಪ್ರಕಾಶ, ವಿಟ್ಲ ಸುದ್ದಿಗಳು)
ಕೊರೋನಾವೈರಸ್ ಸೋಂಕಿನಿಂದಾಗಿ ಗೃಹ ಬಂಧನಕ್ಕೆ ಒಳಗಾಗಿರುವ ಮಂದಿಗೆ ಕಾಲ ಕಳೆಯಲು ‘ಪ್ರಕಾಶವಾಣಿ’ ಆರಂಭಿಸಿರುವ ಹಿರಿಯ
ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರು
ಈ ಬಗ್ಗೆ ಹೇಗೆ
ಪ್ರತಿಕ್ರಿಯಿಸಿದ್ದಾರೆ ಗೊತ್ತೇ?
ಕೇಳಿಸಿಕೊಳ್ಳಿ. ಇದು
ಮೂರನೇ ಲಾಕ್ ಡೌನ್
ಗೆ ಐದನೇ ಪ್ರಕಾಶವಾಣಿ. ‘ಮದ್ಯ
ಅಂತರ ಕಾಪಾಡಿಕೊಂಡವರು’ ಈ ಸಂಚಿಕೆಯ ವಿಷಯ
ವಿಶೇಷ ಅಂದಿದ್ದಾರೆ. ಪ್ರಕಾಶ್.
No comments:
Post a Comment