Tuesday, May 5, 2020

ಭಾರತದ ವಿರುದ್ಧ ಜಿಹಾದ್: ಅಲ್ ಖೈದಾ ಕರೆ

ಭಾರತದ ವಿರುದ್ಧ ಜಿಹಾದ್: ಅಲ್ ಖೈದಾ ಕರೆ
ನವದೆಹಲಿ: ಕೊರೊನಾವೈರಸ್ ವಿರುದ್ಧ ಹೋರಾಟ ನಡೆಸಿರುವ ಭಾರತದ ವಿರುದ್ಧ ಮುಸ್ಲಿಮರು ಜಿಹಾದ್ ನಡೆಸಬೇಕಾಗಿದೆ ಎಂದು ಅರಬ್ ಪರ್ಯಾಯದ್ವೀಪದ ದಕ್ಷಿಣ ತುದಿಯಲ್ಲಿರುವ  ಯೆಮೆನ್ ಅಲ್ ಖೈದಾ (ಎಕ್ಯೂಎಪಿ) ಉಗ್ರ ಸಂಘಟನೆ 2020 ಮೇ 05ರ ಮಂಗಳವಾರ ಕರೆ ನೀಡಿದೆ.

ಕಾಶ್ಮೀರದಲ್ಲಿರುವ ಉಗ್ರರಿಗೆ ಭಾರತದ ವಿರುದ್ಧ ಸಮರ ಸಾರುವಂತೆ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಹಿಂದೆ ಕರೆ ನೀಡಿದ್ದ.

ಮುಸ್ಲಿಮರ ವಿರುದ್ಧ ನಡೆದಿರುವ ಜಾಗತಿಕ ಸಮರದಲ್ಲಿ ಭಾರತವೂ ಕೈಜೋಡಿಸಿದೆ ಎಂಬುದಾಗಿ ಜಾಗತಿಕ ನಿಷೇಧಕ್ಕೆ ಒಳಗಾಗಿರುವ ಯೆಮನ್ ಅಲ್ ಖೈದಾ ಸಂಘಟನೆ ಆಪಾದಿಸಿದೆ. ಭಾರತವನ್ನು ಇಸ್ಲಾಮೋಫೋಬಿಕ್ ಎಂದು ಕುವೈತ್ ಸರ್ಕಾರ, ಅರಬ್ ಸಂಘಟನೆಗಳು, ಇಸ್ಲಾಮಿಕ್ ಕೋ ಆಪರೇಷನ್ ಆರ್ಗನೈಜೇಷನ್(ಒಐಸಿ) ಪರಿಗಣಿಸಿವೆ ಎಂದು ಅಲ್ ಖೈದಾ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆ, ತಬ್ಲಿಘಿ ಸಂಘಟನೆ ಮೇಲೆ ಆರೋಪ ಇವೆಲ್ಲವೂ ಭಾರತವನ್ನು ಮುಸ್ಲಿಂ ದ್ವೇಷಿ ಎಂಬುದಾಗಿ ತೋರಿಸಲು ಪಾಕಿಸ್ತಾನ ಹೂಡಿರುವ ತಂತ್ರವಾಗಿದ್ದು, ಇದಕ್ಕೆ ಪೂರಕವಾಗಿ ಅರಬ್ ಸಂಘಟನೆ ಭಾರತದ ವಿರುದ್ಧ ತಿರುಗಿ ಬಿದ್ದಿದೆ.

ಅಮೆರಿಕದ ಅವಳಿ ಗೋಪುರಗಳ ಮೇಲೆ ಸೆಪ್ಟೆಂಬರ್ ೧೧ರಂದು ದಾಳಿ ನಡೆಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಹೊಸ ರೂಪದ ಗುಂಪಾಗಿ ಎಕ್ಯೂಎಪಿ ಗುರುತಿಸಿಕೊಂಡಿದೆ. ಆದರೆ, ಇದು ಅಲ್ ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಆಶಯದಂತೆಯೇ ಕಾರ್ ನಿರ್ವಹಿಸುತ್ತಿದೆ. ಈಜಿಪ್ಟಿನ ಡಾಕ್ಟರ್ ಆಯ್ಮಾನ್ ಅಲ್ ಜವಾಹಿರಿ ಸದ್ಯ ಯೆಮನ್ ಹಾಗೂ ಸೌದಿ ಅರೇಬಿಯಾದಿಂದ ಉಗ್ರ ಸಂಘಟನೆಗಳನ್ನು ಪ್ರಚೋದಿಸುತ್ತಿದ್ದಾನೆ. ಎಲ್ಲರೂ ಒಂದಾಗಿ ಶಸ್ತ್ರಾಸ್ತ್ರ ಹಿಡಿದು ಜಿಹಾದ್ ನಡೆಸಲು ಮುಂದಾಗಿ ಎಂದು ಆತ ಭಾರತೀಯ ಮುಸ್ಲಿಮರು ಮತ್ತು ವಿದ್ವಾಂಸರಿಗೆ ಕರೆ ಕೊಟ್ಟಿದ್ದಾನೆ.

ಅಲ್-ಖೈದಾದ ಮಧ್ಯಪ್ರಾಚ್ಯ ಘಟಕದ ಕರೆಯು ಜಾಗತಿಕ ಜಿಹಾದಿ ಗುಂಪು ಮತ್ತು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ ) ನಡುವಿನ ಅಸಾಮಾನ್ಯ ಸಾಮ್ಯತೆಯನ್ನು ಬಹಿರಂಗಪಡಿಸುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಭಾರತವು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ನಡೆಸುತ್ತಿದ್ದು, ಜನಾಂಗ ಹತ್ಯೆಯಲ್ಲೂ ನಿರತವಾಗಿದೆ ಎಂದು ಜಿಹಾದಿ ಸಂಘಟನೆ ಆಪಾದಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಆರು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ವಲಸಿಗರಿಗೆ ಯಾವುದೇ ದಾಖಲೆ ರಹಿತವಾಗಿ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಭಯೋತ್ಪಾದಕ ಗುಂಪು ಉಲ್ಲೇಖಿಸಿದೆ. ಐದು ತಿಂಗಳ ಹಿಂದೆ, ೨೦೧೯  ಡಿಸೆಂಬರ್ನಲ್ಲಿ ಭಾರತದಲ್ಲಿ ಕಾನೂನು ಜಾರಿಗೆ ಬಂದಿತ್ತು.

ಮುಸ್ಲಿಂ ಬಹುಸಂಖ್ಯಾತ ಕೊಲ್ಲಿ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವನ್ನು ಹಾಳುಮಾಡುವ ನಿಟ್ಟಿನಲ್ಲಿ ಪ್ರತಿಕೂಲ ಪ್ರಭಾವ ಬೀರಲು ಮತ್ತು ನಿಟ್ಟಿನಲ್ಲಿ ಪ್ರಚೋದನೆ ನೀಡುವುದು ಕರೆಯ ಹಿಂದಿನ ಗುರಿ ಎಂಬುದಾಗಿ ಭಾರತೀಯ ಭದ್ರತಾ ಸಂಸ್ಥೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ನಾವು ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಮೊದಲಿನಿಂದಲೂ ಬೆನ್ನತ್ತಿದ್ದೇವೆ. ಮತ್ತು ಮಾಹಿತಿ ಯುದ್ಧದಲ್ಲಿ ಅತ್ಯಂತ ಸಕ್ರಿಯ ಪಾತ್ರ ವಹಿಸಿರುವ ,೭೯೪ ಟ್ವಿಟರ್ ಹ್ಯಾಂಡಲ್ಗಳನ್ನು ಗುರುತಿಸಿದ್ದೇವೆ.  ಮುಸ್ಲಿಮರ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತ ಅಥವಾ ಸರ್ಕಾರವನ್ನು ಗುರಿಯಾಗಿಸಲು ರಚಿಸಲಾದ ಪ್ರತಿಯೊಂದು ಹ್ಯಾಶ್ಟ್ಯಾಗ್ ಪತ್ತೆಹಚ್ಚಲು ನಮಗೆ ಸಾಧ್ಯವಾಗಿದೆ ಎಂದು ಅಧಿಕಾರಿ ನುಡಿದರು.

ಐಎಸ್ ಪ್ರಯತ್ನದಲ್ಲಿ ಅರೇಬಿಯನ್ ಪರ್ಯಾಯ ದ್ವೀಪದ ಅಲ್-ಖೈದಾದ ಪಾಲ್ಗೊಳ್ಳುವಿಕೆಯು ಕಳೆದ ವರ್ಷ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಐಎಸ್ಐಯ  ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ರೂಪುಗೊಂಡಿದ್ದ ಯೋಜನೆಯಾಗಿತ್ತು ಎನ್ನಲಾಗಿದೆ.

No comments:

Advertisement