ಕೋವಿಡ್ ವಿರುದ್ಧ ಆಯುರ್ವೇದ ಕಷಾಯ ಪರಿಣಾಮಕಾರಿ; ಗುಜರಾತ್ ಪ್ರತಿಪಾದನೆ
ಕ್ವಾರಂಟೈನಿನಲ್ಲಿ ಇದ್ದ ೩,೫೮೫ ಮಂದಿಗೆ ಆಯುರ್ವೇದ ಕಷಾಯ (ಆಯುರ್ವೇದಿಕ್ ಕಧ) ನೀಡಿದರೆ, ೨,೬೨೫ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿತ್ತು. ಈ ಪೈಕಿ ೧೧ ಮಂದಿಯಲ್ಲಿ ಮಾತ್ರ ವರದಿ ಪಾಸಿಟಿವ್ ಆಗಿತ್ತು. ಏಕೆಂದರೆ ಅವರು ಸೂಚಿತ ಪ್ರಮಾಣದಲ್ಲಿ ಈ ಔಷಧ ಸೇವಿಸುವಲ್ಲಿ ವಿಫಲರಾಗಿದ್ದರು’ ಎಂದು ಗುಜರಾತಿನ ಮುಖ್ಯ ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಈ ಪ್ರಯೋಗವು ಕ್ವಾರಂಟೈನಿನಲ್ಲಿ ಇರುವವರಿಗೆ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಇಲ್ಲವೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸೆ ನೀಡುವುದು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ತೋರಿಸಿದೆ’ ಎಂದು ಜಯಂತಿ ರವಿ ಹೇಳಿದರು.
ಜಯಂತಿ ರವಿ ಅವರ ಭಾಷಣವನ್ನು ಡಿಡಿ ನ್ಯೂಜ್ ಗುಜರಾತಿಯ ಟ್ವಿಟ್ಟರಿನಲ್ಲೂ ಹಂಚಿಕೊಳ್ಳಲಾಗಿತ್ತು. ’ಕ್ವಾರಂಟೈನಿನಲ್ಲಿ ಇದ್ದ ೬೦೦೦ ಮಂದಿಗೆ ಆಯುರ್ವೇದ ಕಷಾಯದಿಂದ ಅನುಕೂಲವಾಗಿರುವುದಕ್ಕೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯದ ಯಶೋಗಾಥೆಯನ್ನು ಗುಜರಾತ್ ಸರ್ಕಾರವು ಹಂಚಿಕೊಳ್ಳುತ್ತದೆ’ ಎಂಬ ಬರಹದೊಂದಿಗೆ ಈ ಭಾಷಣವನ್ನೂ ಟ್ವೀಟ್ ಮಾಡಲಾಗಿತ್ತು. ಸೂಚಿತ ಆಯುರ್ವೇದ ಕಷಾಯವನ್ನು ಸೇವಿಸಿದ ಕ್ವಾರಂಟೈನಿನಲ್ಲಿ ಇದ್ದ ಜನರ ಕೋವಿಡ್-೧೯ ಪರೀಕ್ಷೆಯು ನೆಗೆಟಿವ್ ಆಗಿ ಬಂದಿದೆ’ ಎಂದು ಟ್ವೀಟ್ ತಿಳಿಸಿತ್ತು.
ಜಯಂತಿ ರವಿ ಅವರ ಭಾಷಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು (ನೆಟಿಜನ್ಸ್) ಈ ಹೇಳಿಕೆಯನ್ನು ಟೀಕಿಸಿ ಅದರ ’ಅಧಿಕೃತತೆ’ಯನ್ನು ಪ್ರಶ್ನಿಸಿದರು.
ಕೋವಿಡ್-೧೯ ಸೋಂಕನ್ನು ಕಾಯಂ ಆಗಿ ವಾಸಿ ಮಾಡುವಂತಹ ಲಸಿಕೆ ಕಂಡು ಹಿಡಿಯಲು ಅಂತಾರಾಷ್ಟ್ರೀಯ ಸಂಸ್ಥೆಗಳು ಶತಾಯಗತಾಯ ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ ಇದು ಭಾರತೀಯರನ್ನು ವೈರಸ್ ವಿರುದ್ಧ ಪರಿಹಾರಗಳ ಸರಣಿ ಹೇಳುವುದನ್ನು ತಡೆದಿಲ್ಲ. ಇಂತಹ ಅನೇಕ ಮನೆಮದ್ದುಗಳು ಕೊರೋನಾವೈರಸ್ಸನ್ನು ತಡೆಯುವಲ್ಲಿ ಅಥವಾ ಗುಣಪಡಿಸುವಲ್ಲಿ ವಿಫಲವಾಗಿವೆ ಎಂದು ಹಲವಾರು ನೆಟ್ಟಿಗರು ಟೀಕಿಸಿದ್ದಾರೆ.
ವರದಿಗಳ ಪ್ರಕಾರ ಗುಜರಾತಿನಲ್ಲಿ ಬುಧವಾರ ೩೮೨ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೨೯೧ ಪ್ರಕರಣಗಳು ಕೇವಲ ಅಹಮದಾಬಾದಿನಲ್ಲಿ ದಾಖಲಾಗಿವೆ.
No comments:
Post a Comment