Friday, May 29, 2020

ಕೇರಳಕ್ಕೆ ಮುಂಗಾರು ಮಳೆ ಜೂ.೧ಕ್ಕೆ

ಕೇರಳಕ್ಕೆ ಮುಂಗಾರು ಮಳೆ ಜೂ.೧ಕ್ಕೆ

ಕೋಚಿ (ಕೇರಳ): ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ  ಅಂಫಾನ್ ಚಂಡಮಾರುತದಿಂದ ಮುಂಗಾರು ಮಾರುತದ ಚಲನೆಗೆ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದ್ದು, ಇದೀಗ ನೈಋತ್ಯ ಮುಂಗಾರು ಮಾರುತವು ಅರಬ್ಬಿ ಸಮುದ್ರದಲ್ಲಿ ಕೇರಳ ತೀರದತ್ತ ಪಯಣ ಮುಂದುವರೆಸಿವೆ ಎಂದು ವರದಿಗಳು 2020 ಮೇ 28ರ  ಗುರುವಾರ ತಿಳಿಸಿದವು.

ಜೂನ್ ೧ರ ವೇಳೆಗೆ ಮುಂಗಾರು ಮಾರುತ ಕೇರಳ ತೀರ ಪ್ರವೇಶಿಸಲಿವೆ. ಮೇ ೩೧ರಿಂದ ಜೂನ್ ೪ರವರೆಗೆ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಹೀಗಾಗಿ ಮುಂಗಾರು ಮಳೆ ತರುವ ನೈಋತ್ತ ಮುಂಗಾರು ಮಾರುತದ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತು.

ನೈಋತ್ಯ ಮುಂಗಾರು ಮಾರುತವು ಗುರುವಾರ ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪಕ್ಕೆ ಪ್ರವೇಶ ಮಾಡಿವೆ.

ಮುಂದಿನ ೪೮ ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇದ್ದು, ಮುಂಗಾರು ಮಾರುತವು ಆಗ್ನೇಯ ದಿಕ್ಕಿನತ್ತ ಚಲಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್ ತೀರ ತಲುಪಲಿವೆ ಎಂದು ಹವಾಮಾನ ವರದಿ ಹೇಳಿದೆ.

ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ ೨೯ರಿಂದ ಜೂನ್ ೪ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಿನ ಮೊದಲೇ ಮುಂಗಾರು ಪ್ರವೇಶ:

ಮೊದಲು ಜೂನ್ ೬ಕ್ಕೆ ( ದಿನ ಮುಂಚೆ ಅಥವಾ ದಿನ ತಡವಾಗಿ) ಮುಂಗಾರು ಮಾರುತವು ಭಾರತವನ್ನು ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಏರ್ಪಡುವುದರಿಂದರಿಂದ, ದಿನ ಮುಂಚಿತವಾಗಿಯೇ ಮುಂಗಾರು ಮಾರುತ ಕೇರಳ ತೀರ ತಲುಪಲಿವೆ.

No comments:

Advertisement