ಫೇಸ್ ಬುಕ್ ಬೆನ್ನಲ್ಲೇ ಜಿಯೋ-ಸಿಲ್ವರ್ ಲೇಕ್ ಒಪ್ಪಂದ
ಮುಂಬೈ: ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಲು ಫೇಸ್
ಬುಕ್ ಮುಂದೆ ಬಂದ ಬೆನ್ನಲ್ಲೇ ವಿಶ್ವದ
ಇನ್ನೊಂದು ದಿಗ್ಗಜ ಕಂಪೆನಿ ಸಿಲ್ವರ ಲೇಕ್
ಜಿಯೋದಲ್ಲಿ ಹಣ ಹೂಡಲು ಮುಂದೆ ಬಂದಿದೆ ಎಂದು 2020 ಮೇ 04ರ ಸೋಮವಾರ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಖಾಸಗಿ ಹೂಡಿಕೆ ನಿರ್ವಹಣಾ ಕಂಪೆನಿಯಾದ
ಸಿಲ್ವರ್ ಲೇಕ್ ಜಿಯೋದಲ್ಲಿ
ಶೇ.೧ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು ೭೫೦ ಮಿಲಿಯನ್ ಡಾಲರ್, ಅಂದರೆ ಸುಮಾರು ೫,೬೫೫.೭೫ ಕೋಟಿ ರೂ ಮೊತ್ತವಾಗುತ್ತದೆ.
ಈ ಒಪ್ಪಂದದ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, ‘ಸಿಲ್ವರ್ ಲೇಕಿನಿಂದ ಜಿಯೋಗೆ ಹೂಡಿಕೆಯಾಗಿರುವುದು ಉತ್ತಮ ಬೆಳವಣಿಗೆ. ಭಾರತೀಯ ಡಿಜಿಟಲ್ ವ್ಯವಸ್ಥೆಗೆ ಪುಷ್ಟಿ ನೀಡಲು ಇದು ಸಹಕಾರಿಯಾಗಲಿದೆ. ಅಲ್ಲದೆ, ಇದರಿಂದ ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತಷ್ಟು ಮುಂಚೂಣಿಗೆ ಸಾಗಲಿದೆ’ ಎಂದು ಹೇಳಿದರು.
ಫೇಸ್ ಬುಕ್ ಈಗಾಗಲೇ ಜಿಯೋದಲ್ಲಿ
ಶೇ.೯.೯೯ ರಷ್ಟು ಷೇರು ಖರೀದಿ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಕಂಪೆನಿಗೆ ೫.೭ ಬಿಲಿಯನ್ ಡಾಲರ್ ಹಣ ಹೂಡಿಕೆಯ ರೂಪದಲ್ಲಿ ಹರಿದು ಬಂದಿತ್ತು. ಇದೀಗ ಸಿಲ್ವರ್ ಲೇಕಿನಿಂದ ೭೫೦ ಮಿಲಿಯನ್ ಡಾಲರ್ ಹಣ ಹೂಡಿಕೆಯಾಗಿದ್ದು, ಈ ಒಪ್ಪಂದದಿಂದ ರಿಲಯನ್ಸ್ ಇಂಡಸ್ಟ್ರೀಸ್
ಸಂಸ್ಥೆಯ ಮೌಲ್ಯ ಸುಮಾರು ೬೫ ಬಿಲಿಯನ್ ಡಾಲರಿಷ್ಟು ಆಗಿದೆ.
ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಮಹತ್ವದ್ದಾಗಿದೆ. ಭಾರತದಲ್ಲಿ
ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ
ಜಿಯೋದಲ್ಲಿ ವಿದೇಶೀ ಹೂಡಿಕೆಯಾಗುತ್ತಿರುವುದು ಒಳ್ಳೆಯದು ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟರು.
No comments:
Post a Comment