Saturday, May 30, 2020

ಸಂಸತ್ ಆವರಣದಲ್ಲಿ ಇನ್ನೊಂದು ಕೊರೋನಾ

ಸಂಸತ್ ಆವರಣದಲ್ಲಿ ಇನ್ನೊಂದು ಕೊರೋನಾ

ನವದೆಹಲಿ: ಸಂಸತ್ತಿನ ಮೇಲ್ಮನೆ ಅಥವಾ ರಾಜ್ಯಸಭೆಯ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಅವರ ಪತ್ನಿ ಹಾಗೂ ಮಕ್ಕಳಿಗೂ ರೋಗ ಹರಡಿದೆ ಎಂದು ಅಧಿಕಾರಿಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ತಿಳಿಸಿದರು.

ಕೊರೋನಾ ಸೋಂಕಿತ ಅಧಿಕಾರಿ ಕೆಲಸ ಮಾಡುತ್ತಿದ್ದ ಕಚೇರಿಗೆ ಬೀಗಮುದ್ರೆ ಮಾಡಲಾಗಿದ್ದು ಶುಚೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಯ ಜೊತೆ ಸಂಪರ್ಕಕ್ಕೆ ಬಂದಿದ್ದವರಿಗೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು.

ಸಂಸತ್ತಿನ ಸಂಪಾದಕೀಯ ಮತ್ತು ಭಾಷಾಂತರ ಸೇವಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಒಂದು ವಾರದ ಬಳಿಕ ಘಟನೆ ಘಟಿಸಿತು.

ಸದನ ಸಮಿತಿ ಸಭೆಗಳು ನಡೆಯುವ ಕೊಠಡಿಗಳು ಮತ್ತು ಬಹುತೇಕ ಸಂಸದೀಯ ಅಧಿಕಾರಿಗಳು ಇರುವ ಪಾರ್ಲಿಮೆಂಟ್ ಅನೆಕ್ಸ್ ಕಟ್ಟಡದ ೫ನೇ ಮಹಡಿಯಲ್ಲಿ ಇರುವ ತನ್ನ ಕಚೇರಿಗೆ ಅಧಿಕಾರಿ ಮೇ ೧೨ರವೆಗೆ ಹಾಜರಾಗಿದ್ದರು.

ಸಂಸದೀಯ ಸಿಬ್ಬಂದಿಗೆ ಬಂದ ಎರಡನೇ ಕೋವಿಡ್-೧೯ ಪ್ರಕರಣ ಇದಾಗಿದೆ. ಏಪ್ರಿಲ್ ತಿಂಗಳಲ್ಲಿ ಹಿರಿಯ ಹೌಸ್ ಕೀಪರ್ ಒಬ್ಬರಿಗೆ ಸೋಂಕು ತಗುಲಿತ್ತು. ಲೋಕಸಭಾ ಸಚಿವಾಲಯದ ೩೦೦೦ಕ್ಕೂ ಹೆಚ್ಚು ಸಿಬ್ಬಂದಿಯ ಪೈಕಿ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿತ್ತು.

ಪಾರ್ಲಿಮೆಂಟ್ ಅನೆಕ್ಸ್ ಕಟ್ಟಡವು ಮುಖ್ಯ ಸಂಸತ್ ಕಟ್ಟಡದಿಂದ ೧೦೦ ಮೀಟರ್ ದೂರದಲ್ಲಿದೆ ಮತ್ತು ಹಿಂದೆ ತಲ್ಕಟೋರಾ ರಸ್ತೆಯ ಭಾಗವಾಗಿದ್ದ ರಸ್ತೆಗೆ ಸಂಪರ್ಕಿಸಿದೆ.

ಮೇ ೩ರಂದು ದಿಗ್ಬಂಧನ (ಲಾಕ್ ಡೌನ್) ಮುಕ್ತಾಯವಾದ ಬಳಿಕ ಮೂರನೇ ಒಂದರಷ್ಟು ಸಿಬ್ಬಂದಿಯೊಂದಿಗೆ ಸಂಸತ್ತು ಕಚೇರಿಗಳು ಆರಂಭವಾಗಿದ್ದವು.

ಏಪ್ರಿಲ್ ತಿಂಗಳಲ್ಲಿ ಕೋವಿಡ್ -೧೯ ಸೋಂಕಿಗೆ ಒಳಗಾಗಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ಸಂಸತ್ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿರಲಿಲ್ಲ, ಬದಲಿಗೆ ಗುರುದ್ವಾರ ರಾಕಬ್ ಗಂಜ್ ರಸ್ತೆಯ ನಂ.೩೬ರಲ್ಲಿನ ಲೋಕಸಭಾ ಸಚಿವಾಲಯದ ಕಚೇರಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಮಾರ್ಚ್ ೨೩ರಂದು ಸಂಸತ್ತಿನ ಮುಂಗಡಪತ್ರ ಅಧಿವೇಶನ ಮುಂದೂಡಿಕೆಯಾದ ಕಾರಣ  ವಿಶೇಷ ಹೌಸ್ ಕೀಪರ್ ತನ್ನ ಮನೆಯಲ್ಲಿದ್ದರು ಎಂದು ಮೂವರು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೫೯,೪೨,೯೫೧, ಸಾವು ,೬೨,೮೬೧

ಚೇತರಿಸಿಕೊಂಡವರು- ೨೬,೦೭,೬೭೬

ಅಮೆರಿಕ ಸೋಂಕಿತರು ೧೭,೭೦,೩೩೦, ಸಾವು ,೦೩,೩೭೯

ಸ್ಪೇನ್ ಸೋಂಕಿತರು ,೮೪,೯೮೬, ಸಾವು ೨೭,೧೧೯

ಇಟಲಿ ಸೋಂಕಿತರು ,೩೧,೭೩೨, ಸಾವು ೩೩,೧೪೨

ಜರ್ಮನಿ ಸೋಂಕಿತರು ,೮೨,೫೭೨, ಸಾವು ,೫೭೪

ಚೀನಾ ಸೋಂಕಿತರು ೮೨,೯೯೫, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೬೯,೧೨೭, ಸಾವು ೩೭,೮೩೭

ಅಮೆರಿಕದಲ್ಲಿ ೪೯ ಇರಾನಿನಲ್ಲಿ ೫೦, ಬೆಲ್ಜಿಯಂನಲ್ಲಿ ೪೨, ಇಂಡೋನೇಷ್ಯ ೨೪, ನೆದರ್ ಲ್ಯಾಂಡ್ಸ್ನಲ್ಲಿ ೨೮, ರಶ್ಯಾದಲ್ಲಿ ೨೩೨, ಸ್ವೀಡನ್ನಲ್ಲಿ ೮೪s, ಮೆಕ್ಸಿಕೋದಲ್ಲಿ ೪೪೭ ಒಟ್ಟಾರೆ ವಿಶ್ವಾದ್ಯಂತ ೧೩೧೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.


No comments:

Advertisement