Tuesday, May 5, 2020

ಭಾರತ: ಒಂದೇ ದಿನದಲ್ಲಿ ೩೯೦೦ ಕೊರೋನಾ ಹೊಸ ಪ್ರಕರಣ, ೧೯೫ ಸಾವು

ಭಾರತ: ಒಂದೇ ದಿನದಲ್ಲಿ ೩೯೦೦ ಕೊರೋನಾ ಹೊಸ ಪ್ರಕರಣ, ೧೯೫ ಸಾವು
ನವದೆಹಲಿ: ಕೊರೋನಾವೈರಸ್ ಸೋಂಕಿನ ಪ್ರಕರಣ ಹಾಗೂ ಸಾವು ಪ್ರಕರಣಗಳು 2020 ಮೇ 05ರ ಮಂಗಳವಾರ ಭಾರತದಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ೨೪ ಗಂಟೆಗಳ ಅವಧಿಯಲ್ಲಿ ೩೯೦೦ ಸೋಂಕಿನ ಹೊಸ ಪ್ರಕರಣಗಳು ಮತ್ತು ವಿವಿಧ ಆಸ್ಪತ್ರೆಗಳಲ್ಲಿ  ಕೋವಿಡ್-೧೯ ರೋಗಿಗಳ ೧೯೫ ಸಾವಿನ ಪ್ರಕರಣಗಳು ವರದಿಯಾದವು.

೨೪ ಗಂಟೆಗಳ ಅವಧಿಯಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಪ್ರಮಾಣ ಶೇಕಡಾ ೫೦ರಷ್ಟು ಏರಿಕೆಯಾಗಿದ್ದು ಮೇ ೩ರಂದು ದಾಖಲೆಯ ,೬೪೪ ಹೊಸ ಪ್ರಕರಣ ದಾಖಲಾಗಿದ್ದವು.

ಈದಿನದ
೨೯೦೦ ಹೊಸ ಪ್ರಕರಣಗಳೊಂದಿಗೆ ಭಾರತದ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೪೬,೭೧೧ಕ್ಕೆ ಏರಿದೆ. ಇದರಲ್ಲಿ ಒಟ್ಟು ೧೫೮೩ ಸಾವು ಪ್ರಕರಣಗಳೂ ಸೇರಿದೆ. ಒಟ್ಟು ಪ್ರಕರಣಗಳಲ್ಲಿ ೧೨,೭೨೭ ರೋಗಿಗಳು ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೨೭ನ್ನು ದಾಟಿತು..

ಸೋಮವಾರ ಸಂಜೆಯಿಂದೀಚೆಗೆ ಒಟ್ಟು ೧೭೯ ಸಾವುಗಳು ವರದಿಯಾಗಿದ್ದು, ಪೈಕಿ ೯೮ ಪ್ರಕರಣಗಳು ಪಶ್ಚಿಮ ಬಂಗಾಳ, ೩೫ ಪ್ರಕರಣಗಳು ಮಹಾರಾಷ್ಟ್ರ, ೨೯ ಪ್ರಕರಣಗಳು ಗುಜರಾತ್, ಪ್ರಕರಣಗಳು ರಾಜಸ್ಥಾನ, ಪ್ರಕರಣಗಳು ಉತ್ತರ ಪ್ರದೇಶ, ಎರಡು ಪ್ರಕರಣಗಳು ಪಂಜಾಬ್ ಮತ್ತು ತಲಾ ಒಂದು ಪ್ರಕರಣ ಚಂಡೀಗಢ, ಹರಿಯಾಣ, ಕರ್ನಾಟಕ ಮತ್ತು ತಮಿಳುನಾಡಿನಿಂದ ವರದಿಯಾಗಿವೆ.

ಪಶ್ಚಿಮ ಬಂಗಾಳದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ೭೨ ಮಂದಿ ಕೋವಿಡ್ -೧೯ ರೋಗಿಗಳ ಸಾವಿನೊಂದಿಗೆ ರಾಜ್ಯದಲ್ಲ್ಲಿ ದೈನಂದಿನ ಸಾವಿನ ಸಂಖ್ಯೆ ಅತ್ಯಂತ ಹೆಚ್ಚಾಗಿದೆ.

ಈವರೆಗೆ ದಾಖಲಾಗಿರುವ ೧೫೬೮ ಸಾವಿನ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ೫೮೩ ಸಾವುಗಳು ಸಂಭವಿಸಿವೆ. ೩೧೯ ಸಾವಿನೊಂದಿಗೆ ಗುಜರಾತ್ ೨ನೇ ಸ್ಥಾನದಲ್ಲಿ, ೧೬೫ ಸಾವಿನೊಂದಿಗೆ ಮಧ್ಯಪ್ರದೇಶ ೩ನೇ ಸ್ಥಾನದಲ್ಲಿ, ೧೩೩ ಸಾವಿನೊಂದಿಗೆ ಪಶ್ಚಿಮ ಬಂಗಾಳ ೪ನೇ ಸ್ಥಾನದಲ್ಲಿ, ೭೭ ಸಾವಿನೊಂದಿಗೆ ರಾಜಸ್ಥಾನ ೫ನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (೬೪ ಸಾವು), ಉತ್ತರ ಪ್ರದೇಶ (೫೦ ಸಾವು) ಮತ್ತು ಆಂಧ್ರಪ್ರದೇಶ (೩೬ ಸಾವು) ಇವೆ.

ಸಾವಿನ ಸಂಖ್ಯೆ ತಮಿಳುನಾಡಿನಲ್ಲಿ ೩೧ಕ್ಕೆ ಏರಿದ್ದು, ತೆಲಂಗಾಣದಲ್ಲಿ ೨೯ಕ್ಕೇ ಎರಿದೆ, ಕರ್ನಾಟಕದಲ್ಲಿ ಉಸಿರಾಟದ ತೊಂದರೆಯ ರೋಗಕ್ಕೆ ೨೭ ಮಂದಿ ಬಲಿಯಾಗಿದ್ದಾರೆ. ಪಂಜಾಬಿನಲ್ಲಿ ೨೩, ಜಮ್ಮು ಮತ್ತು ಕಾಶ್ಮೀರದಲಿ , ಹರಿಯಾಣದಲ್ಲಿ , ಕೇರಳ ಮತ್ತು ಬಿಹಾರದಲ್ಲಿ ತಲಾ ಸಾವುಗಳು ಸಂಭವಿಸಿವೆ. ಜಾರ್ಖಂಡಿನಲ್ಲಿ ಕೋವಿಡ್ಗೆ ಮಂದಿ ಬಲಿಯಾಗಿದ್ದಾರೆ.

ಸಾವುಗಳ ಪೈಕಿ ಶೇಕಡಾ ೭೦ರಷ್ಟು ಸಾವುಗಳು ತೀವ್ರತರವಾದ ಇತರ ರೋಗಗಳು ಕೂಡಾ ಇದ್ದ ಪರಿಣಾಮವಾಗಿ ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ವೆಬ್ ಸೈಟಿನಲ್ಲಿ ತಿಳಿಸಿದೆ.

ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಅತ್ಯಂತ ಹೆಚ್ಚು ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಮಹಾರಾಷ್ಟ್ರದಿಂದ (೧೪,೫೪೧) ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಗುಜರಾತ್ (,೮೦೪), ದೆಹಲಿ (,೮೯೮), ತಮಿಳುನಾಡು (,೫೫೦), ರಾಜಸ್ಥಾನ (,೦೬೧), ಮಧ್ಯಪ್ರದೇಶ (,೯೪೨) ಮತ್ತು ಉತ್ತರಪ್ರದೇಶ (,೭೬೬) ಇವೆ.

ಆಂಧ್ರಪ್ರದೇಶದಲ್ಲಿ ದೃಢಪಟ್ಟ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ,೬೫೦ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ,೨೫೯ಕ್ಕೆ ಏರಿಕೆಯಾಗಿದೆ. ಪಂಜಾಬಿನಲ್ಲಿ ಅದು ,೨೩೩ಕ್ಕೆ, ತೆಲಂಗಾಣದಲ್ಲಿ ,೦೮೫ಕ್ಕೆ, ಜಮ್ಮು ಮತ್ತು ಕಾಶ್ಮೀರದಲ್ಲಿ ೭೨೬ಕ್ಕೆ, ಕರ್ನಾಟಕದಲ್ಲಿ ೬೫೧ಕ್ಕೆ, ಬಿಹಾರದಲ್ಲಿ ೫೨೮ಕ್ಕೆ ಮತ್ತು ಹರಿಯಾಣದಲ್ಲಿ ೫೧೭ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ ಈವರೆಗೆ ೫೦೦ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದರೆ, ಒಡಿಶಾದಲ್ಲಿ ೧೬೯ ಪ್ರಕರಣಗಳು, ಜಾರ್ಖಂಡಿನಲ್ಲಿ ೧೧೫ ಪ್ರಕರಣಗಳು ಮತ್ತು ಚಂಡೀಗಢದಲ್ಲಿ ೧೦೨ ಪ್ರಕರಣಗಳು ವರದಿಯಾಗಿವೆ.

ಉತ್ತರಾಖಂಡದಲ್ಲಿ ಈವರೆಗೆ ೬೦ ಪ್ರಕರಣಗಳು ವರದಿಯಾಗಿದ್ದು, ಛತ್ತೀಸ್ಗಢದಲ್ಲಿ ೫೮, ಅಸ್ಸಾಮಿನಲ್ ೪೩, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ೪೧ ಪ್ರಕರಣಗಳು ವರದಿಯಾಗಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಪ್ರಕರಣಗಳು, ತ್ರಿಪುರಾದಲ್ಲಿ ೨೯ ಪ್ರಕರಣ, ಮೇಘಾಲಯದಲ್ಲಿ ೧೨ ಪ್ರಕರಣ, ಪುದುಚೆರಿಯಲ್ಲಿ ಮತ್ತು ಗೋವಾದಲ್ಲಿ ಪ್ರಕರಣಗಳು ಈವರೆಗೆ ದಾಖಲಾಗಿವೆ. ಮಣಿಪುರದಲ್ಲಿ ಪ್ರಕರಣ, ಮಿಜೋರಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಪ್ರಕರಣ ವರದಿಯಾಗಿವೆ. 
ನಮ್ಮ ಅಂಕಿ ಸಂಖ್ಯೆಗಳು ಐಸಿಎಂಆರ್ ಅಂಕಿಸಂಖ್ಯೆಗಳ ಜೊತೆಗೆ ತಾಳೆಯಾಗುತ್ತವೆ ಎಂದು ಸಚಿವಾಲಯವು ತನ್ನ ವೆಬ್ ಸೈಟಿನಲ್ಲಿ ತಿಳಿಸಿದೆ. ರಾಜ್ಯವಾರು ವಿವರಗಳನ್ನು ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ಅದು ಹೇಳಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೩೬,೭೩,೬೩೨ ಸಾವು ,೫೩,೪೧೦
ಚೇತರಿಸಿಕೊಂಡವರು- ೧೨,೧೧,೨೩೦
ಅಮೆರಿಕ ಸೋಂಕಿತರು ೧೨,೧೫,೫೦೬, ಸಾವು ೭೦,೧೩೨
ಸ್ಪೇನ್ ಸೋಂಕಿತರು ,೫೦,೫೬೧, ಸಾವು ೨೫,೬೧೩
ಇಟಲಿ ಸೋಂಕಿತರು ,೧೧,೯೩೮,  ಸಾವು ೨೯,೦೭೯
ಜರ್ಮನಿ ಸೋಂಕಿತರು ,೬೬,೩೦೪, ಸಾವು ,೯೯೩
ಚೀನಾ ಸೋಂಕಿತರು ೮೨,೮೮೧, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೯೦,೫೮೪, ಸಾವು ೨೮,೭೩೪
ಅಮೆರಿಕದಲ್ಲಿ ೨೧೧, ಇರಾನಿನಲ್ಲಿ ೬೩, ಬೆಲ್ಜಿಯಂನಲ್ಲಿ ೯೨, ಸ್ಪೇನಿನಲ್ಲಿ ೧೮೫, ನೆದರ್ ಲ್ಯಾಂಡ್ಸ್ನಲ್ಲಿ ೮೬, ರಶ್ಯಾದಲ್ಲಿ ೯೫, ಸ್ವೀಡನ್ನಲ್ಲಿ ೮೫, ಮೆಕ್ಸಿಕೋದಲ್ಲಿ ೧೧೭, ಒಟ್ಟಾರೆ ವಿಶ್ವಾದ್ಯಂತ ,೧೬೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement