ದಿಗ್ಬಂಧನ ೪.೦ ಮಾರ್ಗಸೂಚಿ ಸಡಿಲಿಕೆ ಬೇಡ: ಕೇಂದ್ರ ಸೂಚನೆ
ನವದೆಹಲಿ: ಕೊರೋನಾವೈರಸ್ ಪ್ರಸರಣ ವಿರುದ್ಧ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್ ಡೌನ್) 2020 ಮೇ 18ರ ಸೋಮವಾರ ೪ನೇ ಹಂತವನ್ನು ಪ್ರವೇಶಿಸಿದ್ದು, ಈ ಅವಧಿಯಲ್ಲಿ ದಿಗ್ಬಂಧನ (ಲಾಕ್ ಡೌನ್) ೪.೦ ಮಾರ್ಗಸೂಚಿಯನ್ನು ಸಡಿಲಗೊಳಿಸದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ
ಪ್ರದೇಶಗಳಿಗೆ ಸೂಚಿಸಿತು.
೪.೦ ಮಾರ್ಗಸೂಚಿಯ ನಿರ್ಬಂಧಗಳು ಮೇ ೩೧ರವರೆಗೆ ಜಾರಿಯಲ್ಲಿ ಇರುತ್ತದೆ.
‘ನನ್ನ ಹಿಂದಿನ ಪತ್ರಗಳಲ್ಲಿ ತಿಳಿಸಿರುವಂತೆ, ಗೃಹ ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸಿರುವ ಮಾರ್ಗಸೂಚಿ ನಿರ್ಬಂಧಗಳನ್ನು ಸಡಿಲಗೊಳಿಸದಂತೆ ನೀಡಿರುವ ಸೂಚನೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಾನು ಪುನರುಚ್ಚರಿಸುತ್ತೇನೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿ ಬಗೆಗಿನ ತಮ್ಮ ಅಂದಾಜಿನ ಮೇರೆಗೆ ಕೆಲವು ಚಟುವಟಿಕೆಗಳನ್ನು ವಿವಿಧ ವಲಯಗಳಲ್ಲಿ ನಿಷೇಧಿಸಬಹುದು ಅಥವಾ ಅಗತ್ಯವೆಂದು ಕಂಡು ಬರುವ ನಿರ್ಬಂಧಗಳನ್ನು ವಿಧಿಸಬಹುದು’ ಎಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರವೊಂದರಲ್ಲಿ ತಿಳಿಸಿದರು.
ಪ್ರಧಾನ ಮಂತ್ರಿಯವರು ಮೇ ೧೧ರಂದು ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಗಳು ನೀಡಿದ ಸಲಹೆಗಳನ್ನು ಪರಿಗಣಿಸಿ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಒತ್ತಿ ಹೇಳಿದೆ.
‘ನೂತನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಮತ್ತು ಅವುಗಳನ್ನು ಕಟ್ಟುನಿಟಾಗಿ ಜಾರಿಗೊಳಿಸುವಂತೆ ಸಂಬಂಧಟ್ಟ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ’ ಎಂದು ಕಾರ್ಯದರ್ಶಿ ನುಡಿದರು.
ನೂತನ ಮಾರ್ಗಸೂಚಿ ಪ್ರಕಾರ, ಆರೋಗ್ಯ ಸಚಿವಾಲಯವು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯಗಳು ಈಗ ತಾವೇ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ವರ್ಗೀಕರಿಸಬಹುದು. ಈ ವಲಯಗಳ ಒಳಗೆ ಧಾರಕ (ಕಂಟೈನ್ ಮೆಂಟ್) ವಲಯ ಮತ್ತು ತಾತ್ಕಾಲಿಕ (ಬಫರ್) ವಲಯಗಳನ್ನು ಜಿಲ್ಲಾ ಆಡಳಿತವು ಗುರುತಿಸಬಹುದು. ಧಾರಕ ವಲಯಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಬಹುದು.
ಇನ್ನೊಂದು ಮಹತ್ವದ ಕ್ರಮದಲ್ಲಿ ಪ್ರಯಾಣಿಕ ವಾಹನಗಳಿಗೆ ಮತ್ತು ಬಸ್ಸುಗಳಿಗೆ ಸಂಬಂzsಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ’ಪರಸ್ಪರ ಒಪ್ಪಿಗೆ’ಯೊಂದಿಗೆ ಅಂತರರಾಜ್ಯ ಪಯಣಕ್ಕೆ ಶರತ್ತಿನ ಅನುಮತಿಯನ್ನು ಕೇಂದ್ರ ನೀಡಿದೆ.
ಆಪ್ ಆಧಾರಿತ ಕ್ಯಾಬ್ ಸೇವೆಗಳ ಓಡಾಟ, ಮಾಲ್ ಗಳನ್ನು ಹೊರತು ಪಡಿಸಿ, ಎಲ್ಲ ಅಂUಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್‍ಯ ನಿರ್ವಹಣೆ ಪುನಾರಂಭಕ್ಕೆ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಹಿಂದೆ ಶೇಕಡಾ ೩೩ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದ್ದ ಖಾಸಗಿ ಕಚೇರಿಗಳ ಮೇಲಿನ ನಿರ್ಬಂಧಗಳನ್ನೂ ಮಾರ್ಗಸೂಚಿಯು ಸಡಿಲಗೊಳಿಸಿದೆ.
ಮೆಟ್ರೋ ರೈಲು ಸೇವೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟಗಳು, ಶಾಲೆಗಳು ಮತ್ತು ಕಾಲೇಜುಗಳು, ಉಪಚಾರ (ಹಾಸ್ಪಿಟಾಲಿಟಿ) ಸೇವೆಗಳು, ಚಿತ್ರ ಮಂದಿರಗಳು, ಶಾಪಿಂಗ್ ಮಾಲ್‌ಗಳು, ಡೈನ್-ಇನ್-ರೆಸ್ಟೋರೆಂಟ್‌ಗಳು, ಧಾರ್ಮಿಕ ಮತ್ತು ರಾಜಕೀಯ ಸಭೆ, ಸಮಾರಂಭಗಳ ಮೇಲಿನ ನಿಷೇಧ ದೇಶಾದ್ಯಂತ ಮುಂದುವರೆಯಲಿದೆ.
ಕೇವಲ ವಿಶೇಷ ರೈಲುಗಳು- ೧೫ ಪ್ರೀಮಿಯಂ ರೈಲುಗಳ ಜೋಡಿ ಮತ್ತು ವಲಸೆ ಕಾರ್ಮಿಕರನ್ನು ಅವರ ಹುಟ್ಟೂರುಗಳಿಗೆ ಒಯ್ಯುವ ರೈಲುಗಳು ಮಾತ್ರ ಈ ಅವಧಿಯಲ್ಲಿ ಸಂಚರಿಸಲಿವೆ.
ರಾತ್ರಿ ೭ರಿಂದ ಬೆಳಗ್ಗೆ ೭ರವರೆಗಿನ ಅವಧಿಯಲ್ಲಿ ಅನಗತ್ಯ ಸಂಚಾರದ ಮೇಲಿನ ನಿಷೇಧವೂ ಮುಂದುವರೆಯಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಮದ್ಯ, ಗುಟ್ಕಾ, ತಂಬಾಕು ಸೇವನೆ ಮೇಲಿನ ನಿಷೇಧವೂ ಮುಂದುವರೆಯಲಿದೆ.
No comments:
Post a Comment