Tuesday, June 23, 2020

ರಾಹುಲ್ ಚಿಂತೆ: ಪ್ರಧಾನಿ ಮೋದಿಗೆ ಚೀನಾ ಹೊಗಳಿಕೆ ಏಕೆ?

ರಾಹುಲ್ ಚಿಂತೆ: ಪ್ರಧಾನಿ ಮೋದಿಗೆ ಚೀನಾ ಹೊಗಳಿಕೆ ಏಕೆ?

ನವದೆಹಲಿ: ಲಡಾಖ್‌ನಲ್ಲಿ ಚೀನೀ ಸೇನೆಯ ಜೊತೆಗಿನ ಭೀಕರ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಸಾವನ್ನಪ್ಪಿದಾಗಿನಿಂದ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ಮಾಡುತ್ತಿರುವ ದಾಳಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಹೊಗಳುತ್ತಿರುವುದು ಏಕೆ ಎಂದು ಪ್ರಶ್ನಿಸಿ  2020 ಜೂನ್ 22ರ ಸೋಮವಾರ ಟ್ವೀಟ್ ಮಾಡಿದರು.

ದಿನಕ್ಕೆ ಸಾಮಾನ್ಯವಾಗಿ ಒಂದು ಟ್ವೀಟ್ ಮಾಡುತ್ತಿದ್ದ ರಾಹುಲ್ ಇದೀಗ ಟ್ವೀಟ್ ಸಂಖ್ಯೆಯನ್ನು ಎರಡಕ್ಕೆ ಏರಿಸಿದರು.

ದ್ವಿಪಕ್ಷೀಯ ಬಾಂಧವ್ಯದ ಉದ್ವಿಗ್ನತೆ ಮತ್ತು ಗಲ್ವಾನ್ ಪ್ರದೇಶದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಭಾರತ ವಿರೋಧ್ಧಿ ಹೋರಾಟದ ಮಧ್ಯೆಯೂ ಚೀನಾವು ಏಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವುದರಲ್ಲಿ ನಿರತವಾಗಿದೆ ಎಂದು ಅವರು ಪ್ರಶ್ನಿಸಿದರು.

ಚೀನಾ ನಮ್ಮ ಸೈನಿಕರನ್ನು ಕೊಂದಿತು. ಚೀನಾ ನಮ್ಮ ಭೂಮಿಯನ್ನು ತೆಗೆದುಕೊಂಡಿತು. ಹಾಗಾದರೆ, ಸಂಘರ್ಷದ ಸಂದರ್ಭದಲ್ಲಿ ಚೀನಾವು ಶ್ರೀ ಮೋದಿಯನ್ನು ಏಕೆ ಹೊಗಳಿದೆ?’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಶುಕ್ರವಾರದ ಸರ್ವಪಕ್ಷ ಸಭೆಯಲ್ಲಿ ಗಡಿ ಸಭೆಯಲ್ಲಿ ಪ್ರಧಾನ ಮಂತ್ರಿಯ ಕಾಮೆಂಟ್‌ಗಳನ್ನು ಚೀನಾದ ಸಾಮಾಜಿಕ ಮಾಧ್ಯಮ ಹೇಗೆ ಸ್ವಾಗತಿಸಿತು ಎಂಬುದಾಗಿ ವಿವರಿಸಿದ ಪತ್ರಿಕಾ ವರದಿಯೊಂದನ್ನು ರಾಹುಲ್ ಟ್ವೀಟ್‌ಗೆ ಜೋಡಿಸಿದ್ದಾರೆ.

ಚೀನಾದೊಂದಿಗಿನ ಗಡಿ ಪರಿಸ್ಥಿತಿ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ, ಪ್ರಧಾನಿ "ಯಾರೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ, ಅಥವಾ ಪ್ರಸ್ತುತ ಭಾರತೀಯ ಭೂಪ್ರದೇಶದಲ್ಲಿ ಯಾರೂ ಇಲ್ಲ, ಮತ್ತು ಯಾವುದೇ ಭಾರತೀಯ ಠಾಣೆಯನ್ನು ವಶಪಡಿಸಿಕೊಳ್ಳಲಾಗಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದರು

ಇದನ್ನು ಪ್ರತಿಭಟಿಸಿದ ಪ್ರತಿಪಕ್ಷಗಳುಹಾಗಿದ್ದರೆ ಜೂನ್ ೧೫ ರಂದು ಸೈನಿಕರು ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ವಿವರಣೆಯನ್ನು ಕೊಡಿಎಂದು ಆಗ್ರಹಿಸಿದ್ದವು.

ಒಂದು ದಿನದ ಬಳಿಕ, ಶನಿವಾರ, ಮೋದಿಯವರ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಪ್ರಧಾನ ಮಂತ್ರಿಯವರ ಕಚೇರಿ, ’ಪ್ರಧಾನಿಯವರ ಹೇಳಿಕೆಯು ೨೦ ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಲು ಕಾರಣವಾದ, ಜೂನ್ ೧೫ ರಂದು ಗಲ್ವಾನ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಮುಖಾಮುಖಿಯ ನಂತರದ ಪರಿಸ್ಥಿತಿಯನ್ನು ಕೇಂದ್ರೀಕರಿಸಿದೆಎಂದು ಹೇಳಿತ್ತು.

"ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಪರಿಣಾಮವಾಗಿ ಪರಿಸ್ಥಿತಿಗೆ ಸಂಬಂಧಿಸಿದ ನಮ್ಮ ಎಲ್‌ಎಸಿಯಲ್ಲಿ (ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್) ಚೀನಾದ ಯಾವುದೇ ಉಪಸ್ಥಿತಿಯಿಲ್ಲ ಎಂಬುದು ಪ್ರಧಾನ ಮಂತ್ರಿಯವರ ವಿಶ್ಲೇಷಣೆಯಾಗಿತ್ತುಎಂದು ಹೇಳಿಕೆ ತಿಳಿಸಿತ್ತು.

ರಾಹುಲ್ ಗಾಂಧಿಯವರು ಪತ್ರಿಕಾ ವರದಿಯೊಂದನ್ನು ಟ್ವೀಟ್‌ಗೆ ಲಗತ್ತಿಸಿದ್ದಾರೆ. ವರದಿಯು ಚೀನಾದ ಸರ್ಕಾರಿ-ಗ್ಲೋಬಲ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿತ್ತು.

ಭಾನುವಾರ, ರಾಹುಲ್ ಗಾಂಧಿ ಟ್ವಿಟ್ಟರಿನಲ್ಲಿ "ನರೇಂದ್ರ ಮೋದಿ ವಾಸ್ತವವಾಗಿ ಸರೆಂಡರ್ ಮೋದಿ" ಎಂದು ಬರೆದಿದ್ದರು.

No comments:

Advertisement