ಬುಧವಾರ ಮುಂಬೈಗೆ ‘ನಿಸರ್ಗ’ ಚಂಡಮಾರುತ
ಮುಂಬೈ: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮಂಗಳವಾರ ’ನಿಸರ್ಗ’ ಬಿರುಗಾಳಿಯನ್ನು ’ಚಂಡಮಾರುತ’ ಎಂಬುದಾಗಿ ಅಧಿಕೃತವಾಗಿ ಘೋಷಿಸಿದ್ದು, ಚಂಡಮಾರುತವು 2020 ಜೂನ್ ೩ರ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ ಸಮೀಪ ನೆಲಕ್ಕೆ ಅಪ್ಪಳಿಸಲಿದೆ.
ಕಡಿಮೆ
ಒತ್ತಡದ ಪ್ರದೇಶವಾಗಿ ಪ್ರಾರಂಭವಾದ ಉಷ್ಣವಲಯದ ಚಂಡಮಾರುತವು 2020 ಜೂನ್
02ರ ಮಂಗಳವಾರ ಮಧ್ಯಾಹ್ನ
ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಐಎಂಡಿ ಹೇಳಿತು..
ಜೂನ್
೨ ರಂದು ಸಂಜೆ ೫.೩೦ ರ
ವೇಳೆಗೆ ನಿಸರ್ಗ ಪ್ರಬಲ ಬಿರುಗಾಳಿ ಸಹಿತವಾದ ಚಂಡಮಾರುತವಾಗಲಿದೆ ಎಂದು ಐಎಂಡಿ ಇದಕ್ಕೆ ಮುನ್ನವೇ ತಿಳಿಸಿತ್ತು.
ಚಂಡಮಾರುತವು
ಪ್ರಸ್ತುತ ೯೦-೧೦೦ ಕಿ.ಮೀ ವೇಗದ ಗಾಳಿಯೊಂದಿಗೆ
ಮುನ್ನುಗ್ಗುತ್ತಿದೆ. ಭೂಮಿಗೆ ಅಪ್ಪಳಿಸುವ ಜಾಗದ ಸನಿಹಕ್ಕೆ ಬರುವ ವೇಳೆಗೆ ಗಾಳಿಯ ವೇಗ ೧೦೫-೧೧೫ ಕಿ.ಮೀಯಿಂದ ೧೨೫
ಕಿ.ಮೀ ವೇಗದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿಸರ್ಗ
ವಿಶೇಷವಾಗಿ ಮುಂಬೈಯಂತಹ ನಗರಗಳಲ್ಲಿ ತಗ್ಗು ಪ್ರದೇಶಗಳನ್ನು ಮುಳುಗಿಸಬಹುದು ಮತ್ತು ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಉರುಳಿಸಿ, ಹಾನಿ ಉಂಟು ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದರು.
ಕೋವಿಡ್
-೧೯ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರೋಗ್ಯ ಸಂಪನ್ಮೂಲಗಳಿಗಾಗಿ ಈಗಾಗಲೇ ತೊಂದರೆಗೊಳಗಾಗಿರುವ ನಗರವು ಚಂಡಮಾರುತ ಹೊಡೆತವನ್ನು ಹೇಗೆ ನಿಭಾಯಿಸುತ್ತದೆ ಎಂಬ ಕಳವಳವನ್ನು ಇದು ಸೃಷ್ಟಿಸಿದೆ.
ಮುಂದಿನ
೪೮ ಗಂಟೆಗಳ ಅವಧಿಯಲ್ಲಿ ಆಗ್ನೇಯ ಅರಬ್ಬಿ ಸಮುದ್ರ, ಲಕ್ಷದ್ವೀಪ ಪ್ರದೇಶ ಮತ್ತು ಕೇರಳ ಕರಾವಳಿಯಲ್ಲಿ ಮತ್ತು ಹೊರಗೆ ಹೋಗಬೇಡಿ ಎಂದು ಹವಾಮಾನ ಇಲಾಖೆ ಮೀನುಗಾರರಿಗೆ ಸೂಚನೆ ನೀಡಿದೆ.
ನಿಸರ್ಗ
ಚಂಡಮಾರುತವನ್ನು ಗಮನದಲ್ಲಿಟ್ಟುಕೊಂಡು ಮುಂಬೈ, ಅದರ ಉಪನಗರ ಜಿಲ್ಲೆಗಳು, ಥಾಣೆ, ಪಾಲ್ಘರ್, ರಾಯಗಡ, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಜೂನ್ ೩ ಮತ್ತು ೪ರಂದು
ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಐಎಂಡಿ ಸೂಚನೆ ನೀಡಿದೆ. ೨೦೪.೫ ಮಿ.ಮೀ
ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುವ ಕೆಂಪು ಎಚ್ಚರಿಕೆಯು ನಿವಾಸಿಗಳಿಗೆ ರಕ್ಷಣಾ ಕ್ರಮ ಕೈಗೊಳ್ಳಲು ಮತ್ತು ಪ್ರತಿಕೂಲ ಪರಿಣಾಮದಿಂದ ಸುರಕ್ಷಿತವಾಗಿರಲು ನೀಡಿರುವ ಎಚ್ಚರಿಕೆಯಾಗಿದೆ.
ನಿಸರ್ಗ
ಚಂಡಮಾರುತವು ಜೂನ್ ೩ ರ ಮಧ್ಯಾಹ್ನ
ಮುಂಬೈಯಿಂದ ದಕ್ಷಿಣಕ್ಕೆ ೯೪ ಕಿ.ಮೀ
ದೂರದಲ್ಲಿರುವ ಅಲಿಬಾಗ್ನಲ್ಲಿ ನೆಲಕ್ಕೆ ಅಪ್ಪಳಿಸುತ್ತದೆ ಎಂದು ಐಎಂಡಿ ಹೇಳಿದೆ.
"ಚಂಡಮಾರುತ
ನೆಲಕ್ಕೆ ಅಪ್ಪಳಿಸುವ ಸ್ಥಳವು ಅಲಿಬಾಗ್ಗೆ ಬಹಳ ಹತ್ತಿರದಲ್ಲಿದೆ
ಆದರೆ ಮುಂಬಯಿಯಲ್ಲೂ ವ್ಯಾಪಕ ಹಾನಿಯ ಸಾಧ್ಯತೆ ಇದೆ’ ಎಂದು ಐಎಮ್ಡಿಯ ಚಂಡಮಾರುತಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುನೀತಾ ದೇವಿ ಹೇಳಿದರು.
ಚಂಡಮಾರುತವು
ಜೂನ್ ೩ ರ ಮಧ್ಯಾಹ್ನ
ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿಯನ್ನು ಹರಿಹರೇಶ್ವರ (ಮಹಾರಾಷ್ಟ್ರ) ಮತ್ತು ದಮನ್ ನಡುವೆ ದಾಟುವ ಸಾಧ್ಯತೆಯಿದೆ.
ಚಂಡಮಾರುತದ ಅಲೆಗಳು ಖಗೋಳ ಉಬ್ಬರವಿಳಿತದಿಂದ ಒಂದು -ಎರಡು ಮೀಟರ್ ಎತ್ತರವಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಅಪ್ಪಳಿಸುವ ಸಮಯದಲ್ಲಿ ಮುಂಬೈ, ಥಾಣೆ ಮತ್ತು ರಾಯಗಡ ಜಿಲ್ಲೆಗಳ ತಗ್ಗು ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆಯಿದೆ. ಅಲೆಯು ಖಗೋಳ ಉಬ್ಬರವಿಳಿತಕ್ಕಿಂತ ೦.೫ ರಿಂದ ಒಂದು ಮೀಟರ್ ಎತ್ತರವಿದೆ ಮತ್ತು ರತ್ನಗಿರಿ ಜಿಲ್ಲೆಯ ತಗ್ಗು ಪ್ರದೇಶಗಳನ್ನು ಕೂಡಾ ಮುಳುಗಿಸುವ ಸಾಧ್ಯತೆಯಿದೆ.
No comments:
Post a Comment