Monday, June 8, 2020

ದೆಹಲಿವಾಸಿಗಳಿಗಷ್ಟೇ ಆಸ್ಪತ್ರೆ: ನಿರ್ಧಾರ ರದ್ದು ಪಡಿಸಿದ ಎಲ್ ಜಿ

ದೆಹಲಿವಾಸಿಗಳಿಗಷ್ಟೇ ಆಸ್ಪತ್ರೆ: ನಿರ್ಧಾರ ರದ್ದು ಪಡಿಸಿದ ಎಲ್ ಜಿ

ನವದೆಹಲಿದೆಹಲಿಯ ನಿವಾಸಿಗಳಲ್ಲ ಎಂಬ ಕಾರಣಕ್ಕಾಗಿ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ಲೆಫ್ಟಿನೆಂಟ್-ಗವರ್ನರ್ ಅನಿಲ್ ಬೈಜಾಲ್  2020 ಜೂನ್ 8ರ ಸೋಮವಾರ ನಿರ್ದೇಶನ ನೀಡಿದರು. ದೆಹಲಿ ನಿವಾಸಿಗಳಿಗೆ ಮಾತ್ರ  ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುವ ಎಎಪಿ ಸರ್ಕಾರದ ನಿರ್ಧಾರವನ್ನು ಅವರು ರದ್ದುಪಡಿಸಿದರು.

ಆರೋಗ್ಯದ ಹಕ್ಕು ಜೀವನ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗನ್ನು ನೀಡಿದೆ ಎಂದು ಬೈಜಾಲ್ ರಾಜ್ಯ ಸರ್ಕಾರದ ಗಮನ ಸೆಳೆದರು.

"ದೆಹಲಿಯ ನಿವಾಸಿಯಲ್ಲದ ಕಾರಣ ಯಾವುದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆ ದೆಹಲಿಯ ಎನ್‌ಸಿಟಿಗೆ ಸಂಬಂಧಿಸಿದ ನೇರ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಬೈಜಾಲ್ ಸೂಚಿಸಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿಕೆ ತಿಳಿಸಿತು.

ದೆಹಲಿಯ ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರುಗಳು ಹೆಚ್ಚಾಗುತ್ತಿದ್ದಂತೆನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ದೆಹಲಿ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತವೆ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಎಲ್ಲರಿಗೂ ಮುಕ್ತವಾಗಿರುತ್ತವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದರು.

ಸರ್ಕಾರದ ನಿರ್ಧಾರವನ್ನು ಸಮರ್ಥಿಸುತ್ತಾರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ’ದೆಹಲಿ ಮತ್ತು ಮುಂಬೈ ದೊಡ್ಡ ಮಹಾನಗರಗಳಾಗಿವೆಅವು ವೈರಾಣುವಿನ ತ್ವರಿತ ಪ್ರಸರಣ ಸಮಸ್ಯೆ ಎದುರಿಸುತ್ತಿವೆಬಹಳಷ್ಟು ವಿದೇಶಿಯರು ಇಲ್ಲಿಗೆ ಬರುತ್ತಾರೆಮೊದಲೇ ವಿಮಾನಗಳನ್ನು ಮುಚ್ಚಿದ್ದರೆಸೋಂಕು ಅಷ್ಟೊಂದು ಹರಡುತ್ತಿರಲಿಲ್ಲಆದರೆ ಈಗ ಇರುವ ಪರಿಸ್ಥಿತಿಯನ್ನು ಗಮನಿಸಿದರೆಕಳೆದ ಹಲವಾರು ದಿನಗಳಿಂದ ಪ್ರತಿದಿನ ೧೦೦೦ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆಹೀಗಾಗಿ ದೆಹಲಿ ನಿವಾಸಿಗಳಿಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದರು.

ಪ್ರಸ್ತುತ ದೆಹಲಿಯಲ್ಲಿ  ಕೋವಿಡ್ -೧೯  ದ್ವಿಗುಣಗೊಳ್ಳುವ ಪ್ರಮಾಣ ೧೪ ದಿನಗಳುಆದ್ದರಿಂದ ಅಂದಾಜಿನ ಪ್ರಕಾರ ರಾಷ್ಟ್ರ ರಾಜಧಾನಿ ಮುಂದಿನ ಎರಡು ವಾರಗಳ ಅಂತ್ಯದ ವೇಳೆಗೆ ೫೬,೦೦೦ ಪ್ರಕರಣಗಳನ್ನು ನೋಡಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದರು.

ನೆರೆಯ ನಗರಗಳಲ್ಲಿ ಹೆಚ್ಚು ಪ್ರಕರಣಗಳು ಇಲ್ಲ ಎಂದು ಜೈನ್ ಹೇಳಿದ್ದರು.

 ಮಧ್ಯೆಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಕೀಲರಾಗಿರುವ ಕಾಂಗ್ರೆಸ್ ನಾಯಕ ’ಪಿ ಚಿದಂಬರಂ ಅವರು ’ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಕಾನೂನು ಅಭಿಪ್ರಾಯ ಕೇಳಿದ್ದಿರಾ?’ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದರು.

ತಮ್ಮದೇ ಪ್ರಕರಣವನ್ನು ಉಲ್ಲೇಖಿಸಿದ ಅವರು ದೆಹಲಿಯಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ವ್ಯಕ್ತಿಯಾಗಿದೆಹಲಿ ನಿವಾಸಿಯಾಗಲು ಯಾರು ಅರ್ಹತೆ ಹೊಂದಿದ್ದಾರೆ ಎಂದು ಅವರು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

೧೨೦೦ ಹೊಸ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ೨೮,೦೦೦ ದಾಟಿದ್ದರೆಸಾವಿನ ಸಂಖ್ಯೆ ಭಾನುವಾರ ೮೧೨ ಕ್ಕೆ ಏರಿದೆ.

೯೯೦ ಪ್ರಕರಣ ಏರಿಕೆ ಕಂಡಿದ್ದ ಜೂನ್   ದಿನಾಂಕವನ್ನು ಹೊರತುಪಡಿಸಿಮೇ ೨೮ ರಿಂದ ಜೂನ್  ರವರೆಗೆ ಪ್ರತಿದಿನ ,೦೦೦ ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದೆಹಲಿ ದಾಖಲಿಸಿದೆಜೂನ್  ರಂದು ,೫೧೩ ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರ ರಾಜಧಾನಿಯಲ್ಲಿ ಸುಮಾರು ೨೯,೦೦೦ ಕೊರೋನವೈರಸ್ ಪ್ರಕರಣಗಳು ದಾಖಲಾಗಿವೆಮಹಾರಾಷ್ಟ್ರ (೮೫,೯೭೫ಮತ್ತು ತಮಿಳುನಾಡು (೩೦,೧೫೨ನಂತರದ ಮೂರನೇ ಅತಿ ಹೆಚ್ಚು ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ.

No comments:

Advertisement