ಪಿಎಲ್ಎ ಜೊತೆ
ಘರ್ಷಣೆ,
ಸಾವು ನೋವು: ಕಾಂಗ್ರೆಸ್ ಆಘಾತ
ನವದೆಹಲಿ: ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನೀ ಸೇನೆಯ ಮಧ್ಯೆ ಸಂಭವಿಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಯೋಧರ ಸಾವನ್ನು ಆಘಾತಕಾರಿ, ನಂಬಲಾಗದಂತಹುದು ಮತ್ತು ಸ್ವೀPರಿಸಲು ಸಾಧ್ಯವಿಲ್ಲದಂತಹುದು ಎಂದು ಕಾಂಗ್ರೆಸ್ 2020 ಜೂನ್ 16ರ ಮಂಗಳವಾರ ಬಣ್ಣಿಸಿತು.
‘ಆಘಾತಕಾರಿ,
ನಂಬಲಸಾಧ್ಯ ಮತ್ತು ಸ್ವೀಕರಿಸಲಾಗದಂತಹುದು. ರಕ್ಷಣಾ ಸಚಿವರು ದೃಢಪಡಿಸುವರೇ?’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿzರು.
ಬೆಳವಣಿಗೆಯು
’ದುರಂತ ಸುದಿ’,
ಸರ್ಕಾರವು ’ದೃಢವಾಗಿ’ ವ್ಯವಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದರು.
‘ಲಡಾಖ್ನಿಂದ ಬಂದಿರುವ ದುರಂತ ಸುದ್ದಿ ಆಘಾತಕಾರಿ ಮತ್ತು ನಮ್ಮ ಸರ್ಕಾರವು ವಿಷಯವನ್ನು ದೃಢವಾಗಿ ನಿಭಾಯಿಸುವ ಅಗತ್ಯವನ್ನು ಸೂಚಿಸುತ್ತದೆ’ ಎಂದು
ತರೂರ್ ಟ್ವೀಟ್ ಮಾಡಿದರು.
‘ಭಾರತವನ್ನು
ರಕ್ಷಿಸುವ ಸಲುವಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಮೂವರು ಹುತಾತ್ಮರಿಗೆ ಗೌರವ ಸಲ್ಲಿಸಲು ನಮ್ಮ ತಲೆಗಳನ್ನು ಬಾಗಿಸೋಣ ಮತ್ತು ಗಡಿಗಳಲ್ಲಿ ಪ್ರತಿದಿನ ನಮ್ಮ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಒಡ್ಡಿಕೊಂಡು ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸೋಣ’
ಎಂದೂ ತರೂರ್ ಟ್ವೀಟಿನಲ್ಲಿ ಬರೆದರು.
ಬಿಕ್ಕಟ್ಟು
ಆರಂಭವಾದ ಹಲವಾರು ವಾರಗಳ ಬಳಿಕ ಲಡಾಖ್ನಲ್ಲಿ ಈ ಘರ್ಷಣೆ ನಡೆದಿದೆ.
ಇದಕ್ಕೆ
ಮುನ್ನ ಸೇನೆಯು ಸೋಮವಾರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಜೊತೆಗಿನ ಘರ್ಷಣೆಯಲ್ಲಿ
ಅಧಿಕಾರಿಯೊಬ್ಬರು ಸೇರಿದಂತೆ ಹಲವಾರು ಸಾವು ನೋವುಗಳು ಸಂಭವಿಸಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿತ್ತು. ಉಭಯ ಕಡೆಗಳಲ್ಲೂ ಸಾವು ನೋವುಗಳು ಸಂಭವಿಸಿವೆ ಎಂದೂ ಸೇನೆ ಹೇಳಿತ್ತು.
ಭಾರತ
ಮತ್ತು ಚೀನಾ ಗಡಿ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಲು ಬಯಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಒಂದು ದಿನ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವರ್ಚುವಲ್ ರ್ಯಾಲಿಯಲ್ಲಿ ಹೇಳಿದ್ದರು.
‘ಭಾರತ ದುರ್ಬಲ ರಾಷ್ಟ್ರವಲ್ಲ. ಭಾರತದ ರಾಷ್ಟ್ರೀಯ ಗೌರವದ ಜೊತೆಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ರಾಜನಾಥ್ ಸಿಂಗ್ ಹೇಳಿದ್ದರು.
No comments:
Post a Comment