ಅರವಿಂದ ಕೇಜ್ರಿವಾಲ್ ಅಸ್ವಸ್ಥ, ಮನೆಯಲ್ಲೇ ಪ್ರತ್ಯೇಕವಾಸ
ಭಾರತದಲ್ಲಿ ಸೋಂಕು 2,58,090, ಸಾವು 7,210
ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2020 ಜೂನ್ 8ರ ಭಾನುವಾರ ಮಧ್ಯಾಹ್ನದಿಂದ ಜ್ವರ, ಗಂಟಲು ನೋವು ಮುತ್ತು ಕೆಮ್ಮಿನಿಂದ ಬಳಲುತ್ತಿದ್ದು, ಮನೆಯಲ್ಲೇ ಏಕಾಂತವಾಸಕ್ಕೆ ಒಳಗಾದರು. ಅವರು 2020 ಜೂನ್ 09ರ ಮಂಗಳವಾರ ಕೋವಿಡ್-೧೯ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದವು. ಈ ಮಧ್ಯೆ ದೇಶಾದ್ಯಂತ ಕೊರೋನಾಸೋಂಕಿನ ಪ್ರಕರಣಗಳು 2,58,090ಕ್ಕೆ ಏರಿದ್ದು, ಸಾವಿನ ಸಂಖ್ಯೆ 7,210ಕ್ಕೆ ತಲುಪಿದವು.
‘ಮುಖ್ಯಮಂತ್ರಿಯವರ ಎಲ್ಲ ಸಭೆಗಳನ್ನೂ ರದ್ದು ಪಡಿಸಲಾಗಿದೆ. ಎಂದು ದೆಹಲಿ ಸರ್ಕಾರದ ಸುದ್ದಿ ಮೂಲಗಳು ತಿಳಿಸಿದವು.
ಭಾನುವಾರ ಮಧ್ಯಾಹ್ನದಿಂದ ಮುಖ್ಯಮಂತ್ರಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ವೈದ್ಯರ ಸಲಹೆಯ ಮೇರೆಗೆ ಅವರು ಮಂಗಳವಾರ ಕೋವಿಡ್-೧೯ ಪರೀಕ್ಷೆಗೆ ಹೋಗಲು ಒಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
"ಮುಖ್ಯಮಂತ್ರಿಯವರು ದೂರವಾಣಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು ಮತ್ತು ರೋಗಲಕ್ಷಣಗಳು ಕಡಿಮೆಯಾಗದಿದ್ದರೆ ನಾಳೆ ಸ್ವತಃ ಪರೀಕ್ಷಿಸಲು ಯೋಜಿಸಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ಹೇಳಿದರು.
ಭಾನುವಾರ ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಕೇಜ್ರಿವಾಲ್ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು, ದೆಹಲಿಯಲ್ಲಿನ ದೆಹಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಆಸ್ಪತ್ರೆಗಳು ಕೊರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿಯ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ಒದಗಿಸುತ್ತವೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಘೋಷಿಸಿದರು.
ಕೇಂದ್ರವು ನಡೆಸುವ ಆಸ್ಪತ್ರೆಗಳಿಗೆ ಇಂತಹ ಯಾವುದೇ ನಿರ್ಬಂಧವಿರುವುದಿಲ್ಲ, ಮತ್ತು ಇತರ ರಾಜ್ಯಗಳ ಜನರು ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳಿಗಾಗಿ ರಾಷ್ಟ್ರ ರಾಜಧಾನಿಗೆ ಬಂದರೆ, ಅವರು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು ಎಂದು ಮುಖ್ಯಮಂತ್ರಿ ನುಡಿದರು.
ಕೊರೋನಾ ದೇಶದ ಸ್ಥಿತಿಗತಿ
ಅಂಕಿಸಂಖ್ಯೆಗಳ ಪ್ರಕಾರ ದೇಶಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಸೋಮವಾರ ೨,೫೬,೬೦೦ಕ್ಕೆ ಏರಿದ್ದು, ಸಾವಿನ ಸಂಖ್ಯೆ ೭,೨೦೦ಕ್ಕೆ ತಲುಪಿದೆ.
ಮಹಾರಾಷ್ಟ್ರವು ಈಗಲೂ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು ೮೫,೯೭೫ ಸೋಂಕು ಪ್ರಕರಣಗಳು ವರದಿಯಾಗಿದ್ದು, ರಾಜ್ಯವು ಚೀನಾವನ್ನು ಮೀರಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು ೩,೦೬೦ ಸಾವುಗಳು ಸಂಭವಿಸಿವೆ. ತಮಿಳುನಾಡಿನಲ್ಲಿ ೩೧,೬೬೭ ಸೋಂಕು ಮತ್ತು ೨೬೯ ಸಾವುಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು ೨೮,೯೩೬ ಕೊರೋನವೈರಸ್ ಪ್ರಕರಣಗಳು ದಾಖಲಾಗಿದು, ೮೧೨ ಜನರು ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ.
ಗುಜರಾತಿನಲ್ಲಿ ೨೦,೦೭೦ ಸೋಂಕು, ೧,೨೪೯ ಸಾವು, ರಾಜಸ್ಥಾದಲ್ಲಿ ೧೦,೫೯೯ ಸೋಂಕು, ೨೪೦ ಸಾವು, ಉತ್ತರ ಪ್ರದೇಶ ೧೦,೫೩೬ ಸೋಂಕು, ೨೭೫ ಸಾವು, ಮಧ್ಯಪ್ರದೇಶದಲ್ಲಿ ೯,೪೦೧ ಸೋಂಕು, ೪೧೨ ಸಾವು, ಪಶ್ಚಿಮ ಬಂಗಾಳದಲ್ಲಿ ೮,೧೮೭ ಸೋಂಕು, ೩೯೬ ಸಾವು, ಕರ್ನಾಟಕದಲ್ಲಿ ೫,೪೫೨ ಸೋಂಕು, ೬೧ ಸಾವು, ಬಿಹಾರ ೫,೦೮೮ ಸೋಂಕು, ೩೦ ಸಾವು ವರದಿಯಾಗಿದೆ.
ಭಾರತಕ್ಕೆ ನ್ಯೂಯಾರ್ಕ್ ಟೈಮ್ಸ್ ಶ್ಲಾಘನೆ
ಈ ಮಧ್ಯೆ, ಕೊರೋನವೈರಸ್ ಹರಡುವುದನ್ನು ನಿಧಾನಗೊಳಿಸಲು ಭಾರತವು ಕೈಗೊಂಡಿರುವ ಕ್ರಮಗಳನ್ನು ’ನ್ಯೂಯಾರ್ಕ್ ಟೈಮ್ಸ್’ ಶ್ಲಾಘಿಸಿದೆ. ಸೋಂಕು ಹರಡದಂತೆ ತಡೆಯಲು, ಅದರ ಪ್ರಸರಣವನ್ನು ನಿದಾನಗೊಳಿಸಲು ಭಾರತವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ, ಇದರಲ್ಲಿ ಎಲ್ಲ್ಲ ೧.೩ ಬಿಲಿಯನ್ (೧೩೦ ಕೋಟಿ) ನಾಗರಿಕರನ್ನು ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ (ಲಾಕ್ ಡೌನ್) ಒಳಪಡಿಸಿದ್ದೂ ಸೇರಿದೆ ಎಂದು ಪತ್ರಿಕೆ ಹೇಳಿದೆ.
‘ದಿಗ್ಬಂಧನವು (ಲಾಕ್ ಡೌನ್) ಮಾರ್ಚ್ ೨೫ ರಿಂದ ಜಾರಿಗೆ ಬಂದಿತು ಮತ್ತು ಕನಿಷ್ಠ ಮೇ ೧೭ ರವರೆಗೆ ವಿಸ್ತರಿಸಲ್ಪಟ್ಟಿತು, ಇದು ವ್ಯವಹಾರಗಳು ಮತ್ತು ಸಾರಿಗೆಯನ್ನು ಸ್ಥಗಿತಗೊಳಿಸಿತು. ರಾಜ್ಯದ ಗಡಿಗಳಿಗೆ ಮೊಹರು ಹಾಕಲಾಯಿತು. ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಯಿತು ಮತ್ತು ಸಾಧ್ಯವಾದಷ್ಟು ಜನರು ಒಳಗೆ ಇರಬೇಕೆಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಪತ್ರಿಕೆ ಬರೆದಿದೆ.
ಮೇ ಆರಂಭದಲ್ಲಿ, ಸರ್ಕಾರವು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಕೆಲವು ನಿರ್ಬಂಧಗಳನ್ನು ಸಡಿಲಿಸಿತು, ಇದರಲ್ಲಿ ನಿರ್ಮಾಣ ಮತ್ತು ತೋಟಗಾರಿಕೆ ಕಾರ್ಯಗಳು ಪುನರಾರಂಭಗೊಳ್ಳಲು ಅವಕಾಶ ಮಾಡಿಕೊಡಲಾಯಿತು. ಕ್ಷೌರದ ಅಂಗಡಿಗಳು, ಹಾರ್ಡ್‌ವೇರ್, ಮದ್ಯದ ಅಂಗಡಿಗಳು ಸೇರಿದಂತೆ ಅನೇಕ ಅಂಗಡಿಗಳನ್ನು ಮತ್ತೆ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿತು.
ಆದರೆ ಭಾರತದ ದಟ್ಟವಾದ ನಗರ ನೆರೆಹೊರೆಗಳಲ್ಲಿ ಶೀಘ್ರವಾಗಿ ವೈರಾಣು ಹರಡಬಹುದೆಂಬ ಭಯದಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಕಳೆದ ಆರು ವಾರಗಳಲ್ಲಿ ಅನೇಕ ಸಂದರ್ಭಗಳಲ್ಲಿ, ಅಧಿಕಾರಿಗಳು ನಿರ್ಬಂಧಗಳನ್ನು ಜಾರಿಗೊಳಿಸುವ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಪತ್ರಿಕೆ ಬರೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದಿಗ್ಬಂಧನ (ಲಾಕ್‌ಡೌನ್) ಘೋಷಿಸಿದಾಗ, ಸಾವಿರಾರು ವಲಸೆ ಕಾರ್ಮಿಕರು ಆರಂಭದಲ್ಲಿ ತಮ್ಮ ಹಳ್ಳಿಗಳನ್ನು ತಲುಪಲು ದಾರಿ ಇಲ್ಲದೆ ನಗರಗಳಲ್ಲಿ ಸಿಲುಕಿಕೊಂಡರು. ಕೆಲವರು ಕಾಲ್ನಡಿಗೆಯಲ್ಲಿ ನೂರಾರು ಮೈಲಿ ಪಾದಯಾತ್ರೆ ಆರಂಭಿಸಿದರು. ದೇಶಾದ್ಯಂತ ಪೂರೈಕೆ ಸರಪಳಿ ಅಡೆತಡೆಗಳಿಂದಾಗಿ ಆಹಾರದ ಆವಶ್ಯಕತೆಗಳಿಗಾಗಿ ಜನರು ಸರ್ಕಾರವನ್ನೇ ಅವಲಂಬಿಸಬೇಕಾಯಿತು ಎಂದು ಭಾರತ ಕೈಗೊಂಡ ಕ್ರಮಗಳ ಪರಿಣಾಮಗಳನ್ನೂ ಪತ್ರಿಕೆ ಬರೆದಿದೆ.
ಪ್ರಕರಣಗಳು ಹೇಗೆ ಬೆಳೆಯುತ್ತಿವೆ?
ಭಾರತದ ಲಾಕ್‌ಡೌನ್ ಕೊರೋನವೈರಸ್ ಹರಡುವುದನ್ನು ಮೊಂಡಾಗಿಸಲು ಸಹಾಯ ಮಾಡಿದೆ, ಮಾರ್ಚ್ ಅಂತ್ಯದಲ್ಲಿ ದೇಶದಲ್ಲಿ ನಾಲ್ಕು ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಿದ್ದ ಸೋಂಕು ಮೇ ವೇಳೆಗೆ ದುಪ್ಪಟ್ಟಾಗಲು ೧೦ ದಿನಗಳನ್ನು ತೆಗೆದುಕೊಂಡಿತು ಹೀಗಾಗಿ ಸೋಂಕು ದ್ವಿಗುಣ ಪ್ರಮಾಣ ನಿಧಾನವಾಗಿದೆ ಎಂದು ಪತ್ರಿಕೆ ಹೇಳಿದೆ.
ಇಲ್ಲಿಯವರೆಗೆ, ವೈರಾಣು ಬಹುಮಟ್ಟಿಗೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ, ದೇಶದ ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಮುಂಬೈ ಮತ್ತು ದೆಹಲಿ ಈ ಎರಡು ನಗರಗಳಲ್ಲಿ ಪತ್ತೆಯಾಗಿವೆ ಮತ್ತು ಮುಸ್ಲಿಂ ಧರ್ಮ ಪ್ರಚಾರಕರು ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಸಿದ ಧಾರ್ಮಿಕ ಮಾವೇಶದಿಂದಾಗಿ ದೇಶದ ವಿವಿಧೆಡೆಗಳಲ್ಲಿ ಸೋಂಕು ಹರಡಿತು ಎಂದು ಪತ್ರಿಕೆ ಉಲ್ಲೇಖಿಸಿದೆ.
ಭಾರತದ ಕೆಲವು ಭಾಗಗಳು ಇತ್ತೀಚಿನ ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸಿವೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ದೇಶದ ಪರೀಕ್ಷಾ ಅಂಕಿಅಂಶಗಳು ಇನ್ನೂ ತುಂಬಾ ನಿರ್ಬಂಧಿತವಾಗಿದೆ ಎಂದು ಎಚ್ಚರಿಸಿದ್ದಾರೆ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತದೆ, ಇದು ಪ್ರತಿ ಸಾವಿರ ಜನರಿಗೆ ಒಂದಕ್ಕಿಂvಲೂ ಕಡಿಮೆಯಾಗಿದೆ.
ತಮಿಳುನಾಡು ಮತ್ತು ಗುಜರಾತಿನಂತಹ ರಾಜ್ಯಗಳಲ್ಲಿ ಪ್ರಕರಣUಳು ಏರಿಕೆಯಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಾವಿನ ಅಂಕಿಅಂಶಗಳು ಬರುತ್ತಿವೆ. ಪಂಜಾಬಿನಲ್ಲಿ ಕಳೆದ ವಾರ ಹೊಸ ಪ್ರಕರಣಗಳು ದ್ವಿಗುಣಗೊಳ್ಳುವ ಪ್ರಮಾಣವು ೧೮ ದಿನಗಳಿಂದ ನಾಲ್ಕಕ್ಕೆ ಇಳಿದಿದೆ, ಹೆಚ್ಚಾಗಿ ಭಾರತದ ಅತ್ಯಂತ ಪೀಡಿತ ರಾಜ್ಯವಾದ ಮಹಾರಾಷ್ಟ್ರದಿಂದ ಬೇರೆ ಹಿಂದಿರುಗಿದ ಧಾರ್ಮಿಕ ಯಾತ್ರಾರ್ಥಿಗಳಲ್ಲಿ ಏಕಾಏಕಿ ಸಾಂಕ್ರಾಮಿಕ ಕಂಡು ಬರುತ್ತಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೭೧,೨೩,೭೨೪, ಸಾವು ೪,೦೬,೭೭೬ ಚೇತರಿಸಿಕೊಂಡವರು- ೩೪,೭೮,೦೦೧
ಅಮೆರಿಕ ಸೋಂಕಿತರು ೨೦,೦೮,೭೯೧, ಸಾವು ೧,೧೨,೫೦೬
ಸ್ಪೇನ್ ಸೋಂಕಿತರು ೨,೮೮,೬೩೦, ಸಾವು ೨೭,೧೩೬
ಇಟಲಿ ಸೋಂಕಿತರು ೨,೩೪,೫೩೧, ಸಾವು ೩೩,೮೯೯
ಜರ್ಮನಿ ಸೋಂಕಿತರು ೧,೮೫,೯೬೬, ಸಾವು ೮,೭೭೯
ಚೀನಾ ಸೋಂಕಿತರು ೮೩,೦೪೦, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೮೭,೩೯೯, ಸಾವು ೪೦,೫೯೭
ಭಾರತ ಸೋಂಕಿತರು ೨,೫೮,೦೯೦, ಸಾವು ೭,೨೧೦
ಅಮೆರಿಕದಲ್ಲಿ ೩೭, ಇರಾನಿನಲ್ಲಿ ೭೦, ಬೆಲ್ಜಿಯಂನಲ್ಲಿ ೧೧, ಇಂಡೋನೇಷ್ಯ ೩೨, ನೆದರ್ ಲ್ಯಾಂಡ್ಸ್‌ನಲ್ಲಿ ೩, ರಶ್ಯಾದಲ್ಲಿ ೧೧೨, ಪಾಕಿಸ್ತಾನದಲ್ಲಿ ೬೫, ಮೆಕ್ಸಿಕೋದಲ್ಲಿ ೧೮೮ ಒಟ್ಟಾರೆ ವಿಶ್ವಾದ್ಯಂತ ೧,೬೯೩ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೧,೨೪,೩೮೦ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment