Tuesday, June 23, 2020

ಘರ್ಷಣೆ ಮಧ್ಯೆ ಭಾರತ ಚೀನಾ ಸೇನಾ ಮಾತುಕತೆ

ಘರ್ಷಣೆ ಮಧ್ಯೆ ಭಾರತ ಚೀನಾ ಸೇನಾ ಮಾತುಕತೆ

ನವದೆಹಲಿ: ಗಲ್ವಾನ್ ಕಣಿವೆಯ ಘರ್ಷಣೆಗಳ ಹಿನ್ನೆಲೆಯಲ್ಲಿ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ನಡೆಸಲಾಗುತ್ತಿರುವ ಸುದೀರ್ಘ ಮಾತುಕತೆ ಧನಾತ್ಮಕವಾಗಿದ್ದು, ಸೌಹಾರ್ದಯುತವಾಗಿದೆ ಎಂದು ಭಾರತೀಯ ಸೇನೆ 23 ಜೂನ್ 2020ರ ಮಂಗಳವಾರ ತನ್ನ ಚೊಚ್ಚಲ ಹೇಳಿಕೆಯಲ್ಲಿ ತಿಳಿಸಿತು.

"೨೦೨೦ ಜೂನ್ ೨೨ರಂದು ಭಾರತ ಮತ್ತು ಚೀನಾ ನಡುವೆ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಸೌಹಾರ್ದಯುತ, ಧನಾತ್ಮಕ ಮತ್ತು ರಚನಾತ್ಮಕ ವಾತಾವರಣದಲ್ಲಿ ಮೊಲ್ಡೊದಲ್ಲಿ ನಡೆಯಿತು. ಸೇನೆ ಹಿಂಪಡೆಯುವ ಬಗ್ಗೆ ಪರಸ್ಪರ ಒಮ್ಮತವಿತ್ತು. ಪೂರ್ವ ಲಡಾಕ್‌ನ ಎಲ್ಲಾ ಘರ್ಷಣೆ ಪ್ರದೇಶಗಳಿಂದ ಸೇನೆ ಹಿಂಪಡೆಯುವ ವಿಧಾನಗಳನ್ನು ಚರ್ಚಿಸಲಾಯಿತು ಮತ್ತು ಚರ್ಚೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಸೇನೆ ಹೇಳಿತು.

ಭಾರತದ ೨೦ ಯೋಧರು ಹುತಾತ್ಮರಾಗಲು ಕಾರಣವಾದs ಗಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆಯಿಂದ ಉದ್ಭವಿಸಿದ ಉದ್ವಿಗ್ನತೆಯನ್ನು ಶಮನಗೊಳಿಸುವ ಯತ್ನವಾಗಿ ಭಾರತ ಮತ್ತು ಚೀನೀ ಸೇನೆ ಸೋಮವಾರ ಎರಡನೇ ಸುತ್ತಿನ ಲೆಫ್ಟಿನೆಂಟ್ ಜನರಲ್ ಹಂತದ ಮಾತುಕತೆಯನ್ನು ನಡೆಸಿದವು.

ಪೂರ್ವ ಲಡಾಖ್‌ನ ಚುಶುಲ್ ವಿಭಾಗದಲ್ಲಿನ ಚೀನೀ ಕಡೆಯ ಮೋಲ್ಡೋದಲ್ಲಿ  ಬೆಳಗ್ಗೆ ೧೧.೩೦ ಗಂಟೆಗೆ ಆರಂಭವಾದ ಮಾತುಕತೆ ಮಧ್ಯರಾತಿಯವರೆಗೆ ನಡೆಯಿತು. ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂಪಡೆಯುವ ವಿಧಿವಿಧಾನವನ್ನು ಅಂತಿಮಗೊಳಿಸುವ ಬಗ್ಗೆ ಮಾತುಕತೆ ಗಮನ ಹರಿಸಿತು ಎಂದು ಮೂಲಗಳು ತಿಳಿಸಿದವು.

ಜೂನ್ ೬ರಂದು ಮೊದಲ ಸುತ್ತಿನ ಲೆಫ್ಟಿನೆಂಟ್ ಜನರಲ್ ಮಾತುಕತೆಗಳು ಇದೇ ಜಾಗದಲ್ಲಿ ನಡೆದಿದ್ದವು. ಗಲ್ವಾನ್ ಕಣಿವೆಯಿಂದ ಆರಂಭಿಸಿ ಹಂತ ಹಂತವಾಗಿ ಎಲ್ಲ ಸ್ಥಳಗಳಿಂದ ಸೈನಿಕರನ್ನು ಹಿಂತೆಗೆದುಕೊಳ್ಳುವ ಒಪ್ಪಂದವನ್ನು ಸಭೆ ಅಂತಿಮಗೊಳಿಸಿತ್ತು.

ಆದಾಗ್ಯೂ, ಜೂನ್ ೧೫ರ ಹಿಂಸಾತ್ಮಕ ಘರ್ಷಣೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿತು. ಉಭಯ ಕಡೆಗಳೂ ೩೫೦೦ ಕಿಮೀ ಉದ್ಧದ ಗಡಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದವು.

ದ್ವಿಪಕ್ಷೀಯ ಉದ್ವಿಗ್ನತೆಯ ಮಧ್ಯೆಯೇ, ಸೇನಾ ದಂಡ ನಾಯಕ ಎಂಎಂ ನರವಾಣೆ ಅವರು ಮಂಗಳವಾರ ಮತ್ತು ಬುಧವಾರ ಲಡಾಖ್‌ಗೆ ಭೇಟಿ ನೀಡಿ ಚೀನೀ ಸೇನೆಯೊಂದಿಗೆ ನಡೆಯುತ್ತಿರುವ ಆರು ವಾರಗಳ ಬಿಕ್ಕಟ್ಟಿನ ಬಗ್ಗೆ ಕ್ಷೇತ್ರ ಮಟ್ಟದ ಕಮಾಂಡರುಗಳ ಜೊತೆಗೆ ಮಾತುಕತೆ ನಡೆಸಿದ್ದರು. ಸೇನಾ ಮುಖ್ಯಸ್ಥರು ಮುಂಚೂಣಿ ಪ್ರದೇಶಗಳಿಗೂ ಭೇಟಿ ನೀಡಿ, ಅಲ್ಲಿ ನಿಯೋಜಿತವಾಗಿದ್ದ ಪಡೆಗಳ ಜೊತೆಗೆ ಸಂವಹನ ನಡೆಸಿದ್ದರು.

ಚೀನಾದ ,೫೦೦ ಕಿ.ಮೀ ಉದ್ದದ ವಾಸ್ತವಿಕ ಗಡಿಯಲ್ಲಿ ನಿಯೋಜಿಸಲಾಗಿರುವ ಸಶಸ್ತ್ರ ಪಡೆಗಳಿಗೆ ಚೀನಾದ ದುಷ್ಕೃತ್ಯಕ್ಕೆ "ಸೂಕ್ತವಾದ" ಉತ್ತರ ನೀಡಲು, ಸರ್ಕಾರವು "ಮುಕ್ತ ಸ್ವಾತಂತ್ರ್ಯ" ನೀಡಿದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪೂರ್ವ ಲಡಾಖ್‌ನಲ್ಲಿ ಭಾನುವಾರ ನಡೆಸಿದ ಉನ್ನತ ಮಟ್ಟದ ಸೇನಾ ಸಭೆಯಲ್ಲಿ ಆದೇಶ ನೀಡಿದ್ದರು.

ಕಳೆದ ಒಂದು ವಾರದಲ್ಲಿ ಸೇನೆಯು ಈಗಾಗಲೇ ಗಡಿಯುದ್ದಕ್ಕೂ ಮುಂಚೂಣಿ ಸ್ಥಳಗಳಿಗೆ ಸಹಸ್ರಾರು  ಸಂಖ್ಯೆಯಲ್ಲಿ ಹೆಚ್ಚುವರಿ ಸೈನಿಕರನ್ನು ಕಳುಹಿಸಿದೆ. ಭಾರತೀಯ ವಾಯುಪಡೆ ಕೂಡಾ ತನ್ನ ಮುಂಚೂಣಿಯ ಸುಖೋಯ್ ೩೦ ಎಂಕೆಐ, ಜಾಗ್ವಾರ್, ಮಿರಾಜ್ ೨೦೦೦ ವಿಮಾನಗಳು ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಘರ್ಷಣೆಗಳ ನಂತರ ಹ್ ಮತ್ತು ಶ್ರೀನಗರ ಸೇರಿದಂತೆ ಹಲವಾರು ಪ್ರಮುಖ ವಾಯುನೆಲೆಗಳಿಗೆ ರವಾನಿಸಿದೆ.

ಮೊಲ್ಡೊದಲ್ಲಿ ನಡೆದ ಮಾತುಕತೆಯಲ್ಲಿ ಭಾರತೀಯ ನಿಯೋ ನೇತೃತ್ವವನ್ನು ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವ ವಹಿಸಿದ್ದರೆ, ಚೀನಿ ನಿಯೋಗದ ನೇತೃತ್ವವನ್ನು ಟಿಬೆಟ್ ಮಿಲಿಟರಿ ಜಿಲ್ಲೆಯ ಕಮಾಂಡರ್ ವಹಿಸಿದ್ದರು.

೫೦ ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವಣ ಅತ್ಯಂತ ಗಂಭೀರ ಸೇನಾ ಚಕಮಕಿಯಾದ ಗಲನ್ ಕಣಿವೆ ಘರ್ಷಣೆಯನ್ನು ಭಾರತೀಯ ನಿಯೋಗ ಮಾತುಕತೆಯಲ್ಲಿ ಪ್ರಸ್ತಾಪಿಸಲಿದೆ ಎಂದು ಮೂಲಗಳು ಹೇಳಿವೆ.

No comments:

Advertisement