Tuesday, June 23, 2020

ಭಾರತ- ಚೀನಾ ಗಡಿಯಲ್ಲಿ ಭಾರತದಿಂದ ವಿಶೇಷ ಪರ್ವತ ಪಡೆ ನಿಯೋಜನೆ

ಭಾರತ- ಚೀನಾ ಗಡಿಯಲ್ಲಿ  ಭಾರತದಿಂದ ವಿಶೇಷ ಪರ್ವತ ಪಡೆ 

ನವದೆಹಲಿ: ಪಶ್ಚಿಮ, ಮಧ್ಯ ಅಥವಾ ಪೂರ್ವ ವಲಯಗಳಲ್ಲಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸುವ ಯಾವುದೇ ಉಲ್ಲಂಘನೆಯನ್ನು ಹಿಮ್ಮೆಟ್ಟಿಸಲು ಭಾರತವು ತನ್ನ ವಿಶೇಷ ಪರ್ವತ ಯುದ್ಧ ಪಡೆಗಳನ್ನು ,೪೮೮ ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ (ಎಲ್‌ಎಸಿ) ರೇಖೆಯಲ್ಲಿ ನಿಯೋಜಿಸಿದೆ.

ನರೇಂದ್ರ ಮೋದಿ ಸರ್ಕಾರವನ್ನು ಬಗ್ಗಿಸುವ ಕುತ್ಸಿತ ಉದ್ದೇವಿಟ್ಟುಕೊಂಡಿರುವ ಪಿಎಲ್‌ಎ ಗಡಿಯಾಚೆಯಿಂದ ನಡೆಸಬಹುದಾದ ಯಾವುದೇ ಆಕ್ರಮಣದಿಂದ ಎಲ್‌ಎಸಿಯನ್ನು ರಕ್ಷಿಸಲು ಭಾರತೀಯ ಸೇನೆಗೆ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು  2020 ಜೂನ್ 22ರ ಸೋಮವಾರ ದೃಢಪಡಿಸಿದವು.

ಕಳೆದ ಕೆಲವು ದಶಕಗಳಿಂದ ಉತ್ತರ ವಲಯದಲ್ಲಿ ಹೋರಾಡಲು ತರಬೇತಿ ಪಡೆದಿರುವ ವಿಶೇಷ ಪಡೆಗಳನ್ನು ಕೆಂಪು ಧ್ವಜಾರೋಹಣ ಯತ್ನಗಳನ್ನು ತಡೆಯಲು ಗಡಿ ಮುಂಚೂಣಿಗೆ ತರಲಾಗಿದೆ. ಪದಾತಿದಳದೊಂದಿಗೆ ಸೇನಾವಾಹನಗಳ ಮೂಲಕ ತಾರು ಹಾಕಿದ ರಸ್ತೆಗಳಲ್ಲಿ ಸಾಗುವ ಪಿಎಲ್‌ಎ ಗೆ ಸವಾಲೊಡ್ಡಲು ಕಾರ್ಗಿಲ್ ಯುದ್ಧದಲ್ಲಿ ಪ್ರದರ್ಶಿಸಿದಂತೆ ಪರ್ವತ ಪ್ರದೇಶಗಲ್ಲಿ ಗೆರಿಲ್ಲಾ ಸಮರ ನಡೆಸಲು ಭಾರತೀಯ ಪರ್ವತ ಪಡೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.

"ಪರ್ವತದಲ್ಲಿ ಹೋರಾಟದ ಕಲೆ ಕಠಿಣವಾಗಿದೆ, ಏಕೆಂದರೆ ಮಾನವ ಸಾವುನೋವುಗಳ ಸಂಖ್ಯೆಯು ಎತ್ತರದಲ್ಲಿ ಕುಳಿತುಕೊಳ್ಳುವ ಎದುರಾಳಿಯ ಪ್ರತಿ ಪಡೆಗೆ ೧೦ ಆಗಿದೆ. ಉತ್ತರಾಖಂಡ, ಲಡಾಖ್, ಗೂರ್ಖಾ, ಅರುಣಾಚಲ ಮತ್ತು ಸಿಕ್ಕಿಂನ ಪಡೆಗಳು ಶತಮಾನಗಳಿಂದ ಅಪರೂಪದ ಎತ್ತರಕ್ಕೆ ಹೊಂದಿಕೊಂಡಿವೆ. ಆದ್ದರಿಂದ ಅವರ ಹೋರಾಟದ ಸಾಮರ್ಥ್ಯವು ಅಪ್ರತಿಮವಾಗಿದೆ. ಪರ್ವತ ಯುದ್ಧದಲ್ಲಿ ಫಿರಂಗಿ ಮತ್ತು ಕ್ಷಿಪಣಿಗಳು ಅತ್ಯಂತ ನಿಖರತೆಯನ್ನು ಹೊಂದಿರಬೇಕು, ಇಲ್ಲದಿದ್ದರೆ ಅವುಗಳ ಪರ್ವತ ಗುರಿ ಮೈಲುಗಳಷ್ಟು ದೂರದಲ್ಲಿ ತಪ್ಪಿಹೋಗುತ್ತವೆಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು ಹೇಳಿದರು.

ಸೇನೆಗೆ ಸಂಬಂಧಿಸಿದ ಇನ್ನೊಂದು ವಿಷಯವೇನೆಂದರೆ ಟಿಬೆಟ್ ಪ್ರಸ್ಥಭೂಮಿಯು ಚೀನಾ ಕಡೆಯಲ್ಲಿ ಸಮತಟ್ಟಾಗಿದೆ.ಆದರೆ ಕಾರಾಕೋರಂನಲ್ಲಿ ಕೆ - ಪರ್ವತದಿಂದ ಆರಂಭವಾಗುವ ಭಾರತದ ಕಡೆಯಲ್ಲಿ ಉತ್ತರಾಖಂಡದ ನಂದಾದೇವಿ, ಸಿಕ್ಕಿಂನ ಕಾಂಚನ್‌ಜಂಗ್ ಮತ್ತು ಅರುಣಾಚಲ ಪ್ರದೇಶ ಗಡಿಯ ನಮ್ಚೆ ಬರ್‍ವಾದವರೆಗೆ ಗುಡ್ಡಗಾಡುಗಳೇ ತುಂಬಿವೆ. ಪರ್ವತಗಳಲ್ಲಿ ಭೂಮಿ ವಶಪಡಿಸಿಕೊಳ್ಳುವುದು ಕಷ್ಟ ಮಾತ್ರವಷ್ಟೇ ಅಲ್ಲ, ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಇನ್ನೂ ಕಷ್ಟ ಎಂದ ದಕ್ಷಿಣ ಬ್ಲಾಕಿನ ಚೀನೀ ತಜ್ಞರೊಬ್ಬರು ಹೇಳುತ್ತಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಬರುತ್ತಿರುವ ಬೆಂಬಲದ ಧ್ವನಿಯನ್ನು ಭಾರತವು ಮೆಚ್ಚುಗೆಯೊಂದಿಗೆ ಗಮನಿಸಿದ್ದರೂ, ಭಾರತದ ಮನಸ್ಥಿತಿಯ ಇತರ ಸೇನೆ ಅಥವಾ ರಾಜತಾಂತ್ರಿಕ ಬೆಂಬಲವನ್ನು ಕೋರದೆಆತ್ಮ ನಿರ್ಭರ (ಸ್ವಾವಲಂಬಿ) ನಿಲುವ ತಾಳಲು ತವಕಿಸುತ್ತಿದೆ. "ನನ್ನ ಬೆಟಾಲಿಯನ್‌ಗಳು, ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು ಫಿರಂಗಿದಳಗಳೊಂದಿಗೆ ಸಾಲಾಗಿ ನಿಂತಿವೆ. ಭಾರತವು ಯಾವುದೇ ಚಕಮಕಿಯನ್ನು ಪ್ರಚೋದಿಸುವುದಿಲ್ಲ. ಆದರೆ ಯಾವುದೇ ಉಲ್ಲಂಘನೆಗೆ ಉತ್ತರಿಸುತ್ತದೆ. ಎಲ್‌ಎಸಿ ಚುಚ್ಚುವ ದಿನಗಳು ಮುಗಿದಿವೆ. ಹಿಮವಿರಲಿ, ಬಿಸಿಲಿರಲಿ ನರಗಳ ಯುದ್ಧಕ್ಕೆ  ಭಾರತ ಸಿದ್ಧವಾಗಿದೆಎಂದು  ಹಿರಿಯ ಸಚಿವರು ಹೇಳಿದರು.

ಭಾರತದ ವಿರುದ್ಧ ಅತಿರಂಜಿತ  ಪ್ರಾದೇಶಿಕ ಪ್ರತಿಪಾದನೆಗಳನ್ನು ಮಾಡುವ ೧೯೬೦ರ ಪೂರ್ವ ಲಡಾಖ್ ನಕ್ಷೆಯನ್ನು ಹೊರಿಸುವಂತೆ  ಒತ್ತಾಯಿಸಿರುವ ಪಿಎಲ್‌ಎ ಪಶ್ಚಿಮ ರಂಗದ ಕಮಾಂಡರ್ ಜನರಲ್ ಝಾವೋ ಝೊಂಗ್ಖಿ ಅವರನ್ನು ಸನಿಹದಲ್ಲಿ ಇಟ್ಟುಕೊಂಡು ಶಾಂತಿ ಮತ್ತು ಸಹನೆಯ ಎಲ್ಲ ಭರವಸೆಗಳನ್ನು ಮುರಿದಿರುವ ಚೀನೀ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರ ಬಗ್ಗೆ ಮೋದಿ ಸರ್ಕಾರವು ಅತ್ಯಂತ ಅಸಮಾಧಾನಗೊಂಡಿದೆ. ಚೀನಾದ ಅಂದಿನ ಪ್ರಧಾನಿ ಚೌ ಎನ್ ಲಾಯಿ ಅವರು ಅನಾವರಣಗೊಳಿಸಿದ ೧೯೬೦ರ ಪೂರ್ವ ಲಡಾಖ್ ನಕ್ಷೆಯ ಕೊಂಗ್ಕ ಲಾ ವರೆಗಿನ ಭೂ ಪ್ರದೇಶ ಚೀನಾಕ್ಕೆ ಸೇರಿದ್ದು ಎಂದು ಹೇಳುತ್ತದೆ.

ಕಾಕತಾಳೀಯವಾಗಿ, ೧೯೬೨ರ ಸಮರದ ಸಮಯದಲ್ಲಿ ಚೀನಾದ ಪ್ರಧಾನಿಯಾಗಿದ್ದ ಚೌ ಎನ್ ಲಾಯಿ ಅವರಿಗೆ ಈಗಿನ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರ ಕುಟುಂಬದ ಜೊತೆಗೆ ನಿಕಟ ಸಂಪರ್ಕವಿತ್ತು ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಅವರ ಪತ್ನಿ ಮಾಜಿ ಪ್ರಧಾನಿಯ ಕಾರ್‍ಯದರ್ಶಿಯ ಪುತ್ರಿಯಾಗಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ತಂದೆ ಕೆ. ಸುಬ್ರಹ್ಮಣ್ಯಂ ಅವರು ಕೂಡಾ ರಕ್ಷಣಾ ಸಚಿವಾಲಯದಲ್ಲಿ ಅಧಿಕಾರಿಯಾಗಿ ಭಾರತದ ಸಮರಯತ್ನಗಳಲ್ಲಿ ಭಾಗಿಯಾಗಿದ್ದರು.

ಚಾರಿತ್ರಿಕ ಗಂಟುಮೂಟೆಗಳನ್ನು ಬದಿಗೊತ್ತುವ ಸಲುವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ವುಹಾನ್ ಮತ್ತು ಚೆನ್ನೈ ತಿಳಿವಳಿಕೆಯ ಪ್ರಕ್ರಿಯೆಗೆ ನಾಂದಿ ಹಾಡಿದ್ದರು. ಡೊಕ್ಲಾಮ್ ನಂತರದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಉಭಯ ನಾಯಕರ ಇಂಬು ಸಿಗಬೇಕೆಂಬುದು ಅವರು ಇಚ್ಛೆಯಾಗಿತ್ತು. ಆದರೆ ಅಧ್ಯಕ್ಷ ಕ್ಷಿ ಅವರಲ್ಲಿ ಅಂತಹ ಯೋಜನೆಗಳೇನೂ ಇರಲಿಲ್ಲ ಮತ್ತು ಅವರು ಕೊರೋನಾವೈರಸ್ ಕುರಿತು ಜಗತ್ತಿಗೆ ಮುನ್ನೆಚ್ಚರಿಕೆ ನೀಡುವಲ್ಲಿನ ಚೀನಾದ ವೈಫಲ್ಯ ಬಗೆಗಿನ ಜಾಗತಿಕ ಗಮನವನ್ನು ಬೇರೆಡೆಗೆ ಸೆಳೆಯಲು ಪೂರ್ವ ಲಡಾಖ್ ಪ್ರಕ್ಷುಬ್ಧತೆಯನ್ನು ಬಳಸಿಕೊಂಡರು ಎಂಬುದು ದಿಟವಾಗಿದೆ.

ಅದೇ ರೀತಿ ೧೯೬೨g ಘರ್ಷಣೆಯನ್ನು ಚೀನಾದ ಆಗಿನ ಇನ್ನೊಬ್ಬ ಉನ್ನತ ನಾಯಕ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದ್ದಗ್ರೇಟ್ ಲೀಪ್ ಪಾರ್ವರ್ಡ್ಚಳವಳಿಯ ವೈಫಲ್ಯವನ್ನು ಮುಚ್ಚಿಹಾಕಲು ಬಳಸಿಕೊಂಡಿದ್ದರು. ಸಮಯದ ಬರಗಾಲಕ್ಕೆ ಚೀನಾದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು.

No comments:

Advertisement