Saturday, June 20, 2020

ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನಕ್ಕೆ ಪ್ರಧಾನಿ ಚಾಲನೆ

ಗರೀಬ್ ಕಲ್ಯಾಣ್ ರೋಜಗಾರ್  ಅಭಿಯಾನಕ್ಕೆ ಪ್ರಧಾನಿ ಚಾಲನೆ

೫೦,೦೦೦ ಕೋಟಿ ರೂ., 116 ಜಿಲ್ಲೆ, 125 ದಿನ ಕೆಲಸ

ನವದೆಹಲಿ: ಕೋವಿಡ್ -೧೯ ಲಾಕ್ ಡೌನ್ ಸಮಯದಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ ವಲಸೆ ಕಾರ್ಮಿಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 20ರ ಶನಿವಾರ ೫೦,೦೦೦ ಕೋಟಿ ರೂ.ಮೊತ್ತದ ಮೆಗಾ ಉದ್ಯೋಗ ಯೋಜನೆಗೆ ಚಾಲನೆ ನೀಡಿದರು.

ಬಿಹಾರದ ಖಗಾರಿಯಾ ಜಿಲ್ಲೆಯಿಂದ ಪ್ರಾರಂಭವಾಗುವ ಮೆಗಾ ಉದ್ಯೋಗ ಯೋಜನೆಯನ್ನು ೧೧೬ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದು ನಗರ ಕೇಂದ್ರಗಳಿಂದ ಬಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುತ್ತದೆ.

"ಕೋವಿಡ್-೧೯ರಿಂದಾಗಿ ಸಂಕಷ್ಟಕ್ಕೆ ಒಳಗಾದ ಅನೇಕರೊಂದಿಗೆ ಸಂವಹನ ನಡೆಸಲು ನನಗೆ ಸಾಧ್ಯವಾಗಿರುವುದಕ್ಕಾಗಿ ನನಗೆ ಖುಷಿಯಾಗಿದೆ. ವಲಸಿಗರಿಗೆ ಮನೆಗೆ ಹೋಗಲು ರೈಲುಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಯಿತು. ಕೊರೋನಾ ಸೋಂಕು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿz. ಆದರೆ ನೀವು ಧೈರ್ಯವನ್ನು ತೋರಿಸಿದ್ದೀರಿ. ನಮ್ಮ ಹಳ್ಳಿಗಳು ವೈರಸ್ ವಿರುದ್ಧ ಹೇಗೆ ಹೋರಾಡಬೇಕೆಂದು ನಗರಗಳಿಗೆ ತೋರಿಸಿ ಕೊಟ್ಟಿವೆ ಎಂದು ಪ್ರಧಾನಿ ವಿಡಿಯೋ ಸಂವಹನ ಮೂಲಕ ಯೋಜನೆಗೆ ಚಾಲನೆ ನೀಡುತ್ತಾ ಹೇಳಿದರು.

ಇತ್ತೀಚೆಗೆ, ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಾರಣ ಗಣನೀಯ ಸಂಖ್ಯೆಯ ವಲಸೆ ಕಾರ್ಮಿಕರು ನಗರ ಮತ್ತು ಕೈಗಾರಿಕಾ ಕೇಂದ್ರಗಳಿಂದ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ.

ಯೋಜನೆ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳ ಹತ್ತಿರದಲ್ಲಿ ಉದ್ಯೋಗ ಹುಡುಕಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಇಂದು ಒಂದು ಐತಿಹಾಸಿಕ ದಿನ ... ಇಂದು ನಾವು ಬಡವರಿಗಾಗಿ ಒಂದು ದೊಡ್ಡ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ ... ಇದು ವಲಸೆ ಕಾರ್ಮಿಕರಿಗೆ ಮತ್ತು ಹಳ್ಳಿಗಳಲ್ಲಿನ ನಮ್ಮ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯು ಎಲ್ಲಾ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳ ಹತ್ತಿರದಲ್ಲಿ ಉದ್ಯೋಗ ಪಡೆಯುವುದನ್ನು ಖಚಿತಪಡಿಸುತ್ತದೆ

"ವಲಸೆ ಕಾರ್ಮಿಕರ ಕಾರಣದಿಂದಾಗಿ ಯೋಜನೆಯನ್ನು ಪ್ರಾರಂಭಿಸಲು ನನಗೆ ಸ್ಫೂರ್ತಿ ಸಿಕ್ಕಿತು. ಜಿಲ್ಲೆಗಳಲ್ಲಿನ ಗ್ರಾಮಗಳ ಅಭಿವೃದ್ಧಿ ಮತ್ತು ಕಾರ್ಮಿಕರ ಕಲ್ಯಾಣ ಸಲುವಾಗಿ ಯೋಜನೆಗೆ ೫೦,೦೦೦ ಕೋಟಿ ರೂಪಾಯಿ ನೀಡಲಾಗುವುದು" ಎಂದು ಪ್ರಧಾನಿ ಹೇಳಿದರು.

ಗರಿಬ್ ಕಲ್ಯಾಣ್ ರೋಜಗಾರ್ ಅಭಿಯಾನ್ ಚಾಲನೆ ಕುರಿತು ಪ್ರಕಟಿಸಿದ್ದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರುವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಅಸ್ತಿತ್ವದಲ್ಲಿರುವ ೨೫ ಯೋಜನೆಗಳನ್ನು ಒಟ್ಟುಗೂಡಿಸಲಾಗಿದೆ ಎಂದು ಹೇಳಿದ್ದರು.

ಕನಿಷ್ಠ ೨೫ ಸಾವಿರ ವಲಸೆ ಕಾರ್ಮಿಕರು ನಗರಗಳಿಂದ ಮರಳಿದ್ದನ್ನು ಆಧರಿಸಿ ಅಂತಹ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.

ಮೆಗಾ ಉದ್ಯೋಗ ಯೋಜನೆಗಾಗಿ ೫೦,೦೦೦ ಕೋಟಿ ರೂ.ಗಳನ್ನು ಒದಗಿಸಲಾಗುವುದು ಮಾಡಲಾಗುವುದು. ಕಾರ್ಮಿಕರ  ಕೌಶಲ್ಯ ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಯೋಜನೆಯು ವಲಸೆ ಕಾರ್ಮಿಕರಿಗೆ ೧೨೫ ದಿನಗಳ ಕಾಲ ಜೀವನೋಪಾಯ ಒದಗಿಸಲಿದೆ ಮತ್ತು ಜಿಲ್ಲೆಗಳಲ್ಲಿ ಸ್ವತ್ತುಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದರು.

ಭೌಗೋಳಿಕವಾಗಿ ಬಿಹಾರದಲ್ಲಿ ಇಂತಹ ಜಿಲ್ಲೆಗಳ ಸಂಖ್ಯೆ ೩೨, ಉತ್ತರ ಪ್ರದೇಶ ೩೧, ಮಧ್ಯಪ್ರದೇಶ ೨೪ ಮತ್ತು ರಾಜಸ್ಥಾದಲ್ಲಿ ೨೨ ಇದೆ.

No comments:

Advertisement