ನವದೆಹಲಿ: ವಿಶ್ವದಲ್ಲಿ ಲಕ್ಷ ಜನಸಂಖ್ಯೆಗೆ ಇರುವ ಕೊರೊನಾವೈರಸ್ ಕಾಯಿಲೆಯ (ಕೋವಿಡ್ -೧೯) ಪ್ರಮಾಣಕ್ಕೆ ಹೋಲಿಸಿದರೆ, ಭಾರತವು ಅತ್ಯಂತ ಕಡಿಮೆ ಪ್ರಕರಣಗಳಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ಚೇತರಿಸಿಕೊಂಡವರು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವನ್ನು ವಿಸ್ತರಿಸುತ್ತಲೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಜೂನ್ 22ರ ಸೋಮವಾರ ತಿಳಿಸಿತು.
ಕೇಂದ್ರ
ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಭಾನುವಾರದ ವರದಿಯನ್ನು ಉಲ್ಲೇಖಿಸಿದೆ.
"ಪ್ರತಿ
ಲಕ್ಷ ಜನಸಂಖ್ಯೆಗೆ ಭಾರತದ ಪ್ರಕರಣಗಳು ೩೦.೦೪ ಆಗಿದ್ದರೆ,
ಜಾಗತಿಕ ಸರಾಸರಿ ಅದರ ಮೂರು ಪಟ್ಟು ಅಂದರೆ ೧೧೪.೬೭ ರಷ್ಟಿದೆ" ಎಂದು
ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತು.
ಅಮೆರಿPವು ಪ್ರತಿ ಲಕ್ಷ
ಜನಸಂಖ್ಯೆಗೆ ೬೭೧.೨೪ ಪ್ರಕರಣಗಳನ್ನು ಹೊಂದಿದ್ದರೆ,
ಜರ್ಮನಿ, ಸ್ಪೇನ್ ಮತ್ತು ಬ್ರೆಜಿಲ್‌ನ ಪ್ರಕರಣಗಳ ಸಂಖ್ಯೆ ಕ್ರಮವಾಗಿ ೫೮೩.೮೮, ೫೨೬.೨೨ ಮತ್ತು ೪೮೯.೪೨ ಆಗಿದೆ ಎಂದು
ಅದು ಹೇಳಿದೆ.
"ಈ
ಕಡಿಮೆ ಅಂಕಿ ಅಂಶವು ಕೋವಿಡ್-೧೯ ಸೋಂಕಿನ ತಡೆಗಟ್ಟುವಿಕೆ,
ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೈಗೊಂಡ ಶ್ರೇಣೀಕೃತ, ಪೂರ್ವಭಾವಿ ಮತ್ತು ಕ್ರಿಯಾತ್ಮಕ ವಿಧಾನಕ್ಕೆ ಸಾಕ್ಷಿಯಾಗಿದೆ" ಎಂದು ಸಚಿವಾಲಯ ಹೇಳಿತು.
ಕಳೆದ
೨೪ ಗಂಟೆಗಳಲ್ಲಿ ೧೪,೮೨೧ ಸೋಂಕುಗಳು
ಮತ್ತು ೪೪೫ ಸಾವುಗಳು ಸಂಭವಿಸಿದ ನಂತರ ಭಾರತದ ಸೋಂಕಿನ ಪ್ರಮಾಣ ೪,೨೫,೨೮೨
ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಸೋಮವಾರ ತೋರಿಸಿದೆ. ದೇಶದ ಸಾವಿನ ಸಂಖ್ಯೆ ೧೩,೬೯೯ಕ್ಕೆ ಏರಿದೆ.
ಆರೋಗ್ಯ
ಸಚಿವಾಲಯದ ಡ್ಯಾಶ್‌ಬೋರ್ಡ್ ಪ್ರಕಾರ, ೧,೭೪,೩೮೪
ಸಕ್ರಿಯ ಕೋವಿಡ್ -೧೯ ಪ್ರಕರಣಗಳಿವೆ ಮತ್ತು
೨,೩೭,೧೯೫ ಜನರು
ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ೯,೪೪೦ ಕೋವಿಡ್ -೧೯ ರೋಗಿಗಳನ್ನು ಗುಣಪಡಿಸಲಾಗಿದೆ
ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ
ರೋಗದಿಂದ ಗುಣಮುಖರಾಗಿ ಚೇತರಿಸಿದವರ ಪ್ರಮಾಣ ಕೂಡಾ ಭಾನುವಾರಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಾಗಿದೆ. ಭಾನುವಾರ ಚೇತರಿಕೆ ಪ್ರಮಾಣ ಶೇಕಡಾ ೫೫.೪೮ ರಷ್ಟು
ಇದ್ದರೆ, ಸೋಮವಾರ ಶೇಕಡಾ ೫೫.೭೭ಕ್ಕೆ ಏರಿದೆ.
ಮೂರು
ಲಕ್ಷ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿದ
ಎಂಟು ದಿನಗಳ ನಂತರ ದೇಶದಲ್ಲಿ ಭಾನುವಾರ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿತು. ಜೂನ್ ೧ ರಿಂದ ೨೨
ರವರೆಗೆ ೨,೩೪,೭೪೭
ದಷ್ಟು ಸೋಂಕು ಪ್ರಕರಣಗಳು ಹೆಚ್ಚಿವೆ.
ಭಾರತ
ಸತತ ೧೧ ನೇ ದಿನ
೧೦,೦೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.
ಇಂಡಿಯನ್
ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಜೂನ್ ೨೧ ರವರೆಗೆ ಒಟ್ಟು
೬೯,೫೦,೪೯೩ ಮಾದರಿಗಳನ್ನು
ಪರೀಕ್ಷಿಸಲಾಗಿದ್ದು, ೧,೪೩,೨೬೭
ಮಾದರಿಗಳನ್ನು ಭಾನುವಾರ ಪರೀಕ್ಷಿಸಲಾಗಿದೆ.
ಸೋಮವಾರ
ಬೆಳಗಿನವರೆಗೆ ವರದಿಯಾದ ೪೪೫ ಹೊಸ ಸಾವುನೋವುಗಳಲ್ಲಿ ಮಹಾರಾಷ್ಟ್ರದಲ್ಲಿ
೧೮೬, ದೆಹಲಿಯಲ್ಲಿ ೬೩, ತಮಿಳುನಾಡಿನಲ್ಲಿ ೫೩, ಉತ್ತರ ಪ್ರದೇಶದಲ್ಲಿ ೪೩, ಗುಜರಾತಿನಲ್ಲಿ ೨೫, ಪಶ್ಚಿಮ ಬಂಗಾಳದಲ್ಲಿ ೧೫, ಮಧ್ಯಪ್ರದೇದಲ್ಲಿ ೧೪, ರಾಜಸ್ಥಾದಲ್ಲಿ ೧೨, ಹರಿಯಾಣದಲ್ಲಿ ೧೧ , ತೆಲಂಗಾಣದಲ್ಲಿ ಏಳು, ಆಂಧ್ರಪ್ರದೇಶ ಮತ್ತು ಕರ್ನಾಟPದಲ್ಲಿ ತಲಾ ಐದು, ಒಡಿಶಾದಲ್ಲಿ ತಲಾ ಇಬ್ಬರು, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಪುದುಚೇರಿ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಅಮೆರಿಕ,
ಬ್ರೆಜಿಲ್ ಮತ್ತು ರಷ್ಯಾ ನಂತರ ಸಾಂಕ್ರಾಮಿಕ ರೋಗದಿಂದ ಅತಿಹೆಚ್ಚು ಬಾಧಿತವಾದ ರಾಷ್ಟ್ರಗಳ ಸಾಲಿನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ.
ಪ್ರಪಂಚದಾದ್ಯಂತದ
ಕೋವಿಡ್-೧೯ ಅಂಕಿಸಂಖ್ಯೆ (ಡೇಟಾ)
ಸಂಗ್ರಹಿಸುತ್ತಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಸಾವಿನ ಸಂಖ್ಯೆಯ ವಿಷಯದಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ.
ಈವರೆಗೆ
ವರದಿಯಾದ ಒಟ್ಟು ೧೩,೬೯೯ ಸಾವುಗಳಲ್ಲಿ
ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಅಂದರೆ ೬,೧೭೦ ಸಾವುಗಳು
ಸಂಭವಿಸಿವೆ. ದೆಹಲಿಯಲ್ಲಿ ೨,೧೭೫, ಗುಜರಾತಿನಲ್ಲಿ
೧,೬೬೩, ತಮಿಳುನಾಡಿನಲ್ಲಿ ೭೫೭, ಪಶ್ಚಿಮ ಬಂಗಾಳದಲ್ಲಿ ೫೫೫, ಉತ್ತರ ಪ್ರದೇದಲ್ಲಿ ೫೫೦, ಮಧ್ಯಪ್ರದೇದಲ್ಲಿ ೫೧೫, ರಾಜಸ್ಥಾದಲ್ಲಿ ೩೪೯ ಮತ್ತು ತೆಲಂಗಾಣದಲ್ಲಿ ೨೧೦ ಸಾವುಗಳು ಸಂಭವಿಸಿವೆ.
ಕೋವಿಡ್-೧೯ ಸಾವಿನ ಸಂಖ್ಯೆ
ಹರಿಯಾಣದಲ್ಲಿ ೧೬೦, ಕರ್ನಾಟಕದಲ್ಲಿ ೧೩೭, ಆಂಧ್ರಪ್ರದೇಶದಲ್ಲಿ ೧೦೬, ಪಂಜಾಬಿನಲ್ಲಿ ೯೯, ಜಮ್ಮು ಮತ್ತು ಕಾಶ್ಮೀರದಲ್ಲಿ ೮೨, ಬಿಹಾರದಲ್ಲಿ ೫೩, ಉತ್ತರಾಖಂಡದಲ್ಲಿ ೨೭, ಕೇರಳದಲ್ಲಿ ೨೧ ಮತ್ತು ಒಡಿಶಾದಲ್ಲಿ
೧೪ ಕ್ಕೆ ತಲುಪಿದೆ.
ಜಾರ್ಖಂಡ್
ಮತ್ತು ಛತ್ತೀಸ್ ಗಢದಲ್ಲಿ ತಲಾ ೧೧, ಅಸ್ಸಾಂನಲ್ಲಿ ೯, ಹಿಮಾಚಲ ಪ್ರದೇಶz
ಮತ್ತು ಪುದುಚೇರಿಯಲ್ಲಿ ತಲಾ ೮, ಚಂಡೀUಢದಲ್ಲಿ
೬, ಮತ್ತು ಮೇಘಾಲಯ, ತ್ರಿಪುರ ಮತ್ತು ಲಡಾಖ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಹ
ಆರೋಗ್ಯ ಸಮಸ್ಯೆಗಳಿಂದಾಗಿ ಶೇಕಡಾ ೭೦ ಕ್ಕೂ ಹೆಚ್ಚು
ಸಾವುಗಳು ಸಂಭವಿಸಿವೆ ಎಂದು ಅದು ಹೇಳಿದೆ
ಮಹಾರಾಷ್ಟ್ರದಲ್ಲಿ
ಅತಿ ಹೆಚ್ಚು ಪ್ರಕರಣಗಳು ೧,೩೨,೦೭೫
ದಾಖಲಾಗಿವೆ. ದೆಹಲಿಯಲ್ಲಿ ೫೯,೭೪೬, ತಮಿಳುನಾಡು
೫೯,೩೭೭, ಗುಜರಾತ್ ೨೭,೨೬೦, ಉತ್ತರ
ಪ್ರದೇಶ ೧೭,೭೩೧, ರಾಜಸ್ಥಾನ
೧೪,೯೩೦ ಮತ್ತು ಪಶ್ಚಿಮ ಬಂಗಾಳ ೧೩,೯೪೫ ಪ್ರಕರಣಗಳನ್ನು
ದಾಖಲಿಸಿವೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೋವಿಡ್-೧೯ ಪ್ರಕರಣಗಳ ಸಂಖ್ಯೆ
ಮಧ್ಯಪ್ರದೇಶದಲ್ಲಿ ೧೧,೯೦೩, ಹರಿಯಾಣದಲ್ಲಿ
೧೦,೬೩೫, ಕರ್ನಾಟಕದಲ್ಲಿ ೯,೧೫೦, ಆಂಧ್ರಪ್ರದೇಶದಲ್ಲಿ
೮,೯೯೯ ಮತ್ತು ತೆಲಂಗಾಣದಲ್ಲಿ ೭,೮೦೨ಕ್ಕೆ ಏರಿದೆ
ಇದು
ಬಿಹಾರದಲ್ಲಿ ೭,೬೧೨, ಜಮ್ಮು
ಮತ್ತು ಕಾಶ್ಮೀರದಲ್ಲಿ ೫,೯೫೬, ಅಸ್ಸಾಂನಲ್ಲಿ
೫,೩೮೮ ಮತ್ತು ಒಡಿಶಾದಲ್ಲಿ ೫,೧೬೦ ಕ್ಕೆ
ಏರಿದೆ. ಪಂಜಾಬ್ ಇದುವರೆಗೆ ೪,೦೭೪ ಕೊರೋನಾವೈರಸ್
ಸೋಂಕುಗಳನ್ನು ದಾಖಲಿಸಿದ್ದರೆ, ಕೇರಳದಲ್ಲಿ ೩,೧೭೨ ಪ್ರಕರಣಗಳಿವೆ.
ಉತ್ತರಾಖಂಡದಲ್ಲಿ
ಒಟ್ಟು ೨,೩೪೪, ಛತ್ತೀಸ್‌ಗಢದಲ್ಲಿ
೨,೨೭೫, ಜಾರ್ಖಂಡ್‌ನಲ್ಲಿ ೨,೦೭೩, ತ್ರಿಪುರದಲ್ಲಿ
೧,೨೨೧, ಮಣಿಪುರದಲ್ಲಿ ೮೪೧ ಜನರು ಸೋಂಕಿಗೆ ಒಳಗಾಗಿದ್ದಾg. ಲಡಾಖ್‌ನಲ್ಲಿ ೮೩೭, ಗೋವಾದಲ್ಲಿ ೭೫೪ ಮತ್ತು ಹಿಮಾಚಲ ಪ್ರದೇಶದಲ್ಲಿ ೬೭೩, ಚಂಡೀಗಢದಲ್ಲಿ ೪೦೬, ಪುದುಚೇರಿಯಲ್ಲಿ ೩೬೬, ನಾಗಾಲ್ಯಾಂಡ್ ೨೧೧, ಮಿಜೋರಾಂ ೧೪೧ ಮತ್ತು ಅರುಣಾಚಲ ಪ್ರದೇಶದಲ್ಲಿ ೧೩೫ ಪ್ರಕರಣಗಳು ದಾಖಲಾಗಿವೆ.
ದಾದ್ರಾ
ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಒಟ್ಟಾಗಿ ೮೮ ಕೋವಿಡ್-೧೯
ಪ್ರಕರಣಗಳನ್ನು ವರದಿ ಮಾಡಿವೆ.
ಸಿಕ್ಕಿಂನಲ್ಲಿ
೭೮, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈವರೆಗೆ ೪೮ ಸೋಂಕುಗಳನ್ನು ದಾಖಲಿಸಿದರೆ,
ಮೇಘಾಲಯದಲ್ಲಿ ೪೪ ಪ್ರಕರಣಗಳು ದಾಖಲಾಗಿವೆ.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿತರು ೯೦,೮೧,೧೪೫,
ಸಾವು ೪,೭೧,೩೧೪
ಚೇತರಿಸಿಕೊಂಡವರು- ೪೮,೬೩,೧೧೩
ಅಮೆರಿಕ
ಸೋಂಕಿತರು ೨೩,೫೭,೬೬೭,
ಸಾವು ೧,೨೨,೨೬೯
ಸ್ಪೇನ್
ಸೋಂಕಿತರು ೨,೯೩,೩೫೨,
ಸಾವು ೨೮,೩೨೩
ಇಟಲಿ
ಸೋಂಕಿತರು ೨,೩೮,೪೯೯,
ಸಾವು ೩೪,೬೩೪
ಜರ್ಮನಿ
ಸೋಂಕಿತರು ೧,೯೧,೬೮೯,
ಸಾವು ೮,೯೬೩
ಚೀನಾ
ಸೋಂಕಿತರು ೮೩,೩೯೬, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೩,೦೫,೨೮೯,
ಸಾವು ೪೨,೬೪೭
ಭಾರತ
ಸೋಂಕಿತರು ೪,೨೭,೦೪೬,
ಸಾವು ೧೩,೭೧೭
ಅಮೆರಿಕದಲ್ಲಿ ೨೨, ಇರಾನಿನಲ್ಲಿ ೧೧೯, ಬೆಲ್ಜಿಯಂನಲ್ಲಿ ೦, ಇಂಡೋನೇಷ್ಯ ೩೫, ನೆದರ್ ಲ್ಯಾಂಡ್ಸ್‌ನಲ್ಲಿ ೦, ರಶ್ಯಾದಲ್ಲಿ ೯೫, ಪಾಕಿಸ್ತಾನದಲ್ಲಿ ೮೯, ಮೆಕ್ಸಿಕೋದಲ್ಲಿ ೧,೦೪೪, ಭಾರತದಲ್ಲಿ ೧೪, ಒಟ್ಟಾರೆ ವಿಶ್ವಾದ್ಯಂತ ೧,೭೧೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೨,೩೭,೯೨೯ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment